ದಾವಣಗೆರೆ:ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇದಿಸಲು ಒತ್ತಾಯಿಸಿ ಹಿರಿಯ ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ದಿನಾಂಕ:೨೦-೦೩-೨೦೨೫,ರಂದು ಹಮ್ಮಿಕೊಳ್ಳಲಾಗಿದೆ ಎಂದು ನಾಗೇಂದ್ರ ಬಂಡಿಕರ್ ತಿಳಿಸಿದರು.
ಬೆಳಗಾವಿ ಮತ್ತಿತರೆ ಗಡಿಭಾಗಗಳಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಪುಂಡಾಟಿಕೆ ಮೇರೆ ಮೀರಿದ್ದು ಗಡಿಭಾಗದ ಕನ್ನಡಿಗರಿಗೆ ಸೂಕ್ತ ರಕ್ಷಣೆ ಇಲ್ಲವಂತಾಗಿದೆ. ಭಾಷೆಯ ವಿಚಾರದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆಯಂತಹ ಆಮಾನವೀಯ ವರ್ತನೆ ತೋರುತ್ತಿರುವ ಎಂ.ಇ.ಎಸ್. ಪುಂಡರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಗಡಿಭಾಗದ ಕನ್ನಡಿಗರ ಆತ್ಮಗೌರವ ಹಾಗೂ ಭಾಷಾಭಿಮಾನವನ್ನು ಕಾಪಾಡಬೇಕಾದ ಹೊಣೆ ಕರ್ನಾಟಕ ಸರ್ಕಾರದ್ದಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ, ಕರ್ನಾಟಕದ ಗಡಿಭಾಗ ಅಥವಾ ಕರ್ನಾಟಕದಲ್ಲಿ ಯಾವುದೇ ರೀತಿಯ ಚಟುವಟಿಕೆ ಕೈಗೊಳ್ಳದಂತೆ ಈ ಸಮಿತಿಯನ್ನು ನಿಷೇಧಗೊಳಿಸಬೇಕೆಂದು ಒತ್ತಾಯಿಸಿ, ಹಿರಿಯ ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಕರ್ನಾಟಕ ಜನಮನ ವೇದಿಕೆ ಹಾಗೂ ನಮ್ಮ ಜೈ ಕರುನಾಡ ವೇದಿಕೆ ಸಂಯುಕ್ತವಾಗಿ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ದಿನಾಂಕ 20-03-2025 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆಸಿ, ತದನಂತರ
ಹಲವು ಬೇಡಿಕೆಗಳ ಮನವಿಯನ್ನು ಉಪವಿಭಾಗಾಧಿಕಾರಿಗಳವರ ಮುಖೇನ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆದ್ದರಿಂದ ಕನ್ನಡ ಮನಸ್ಸುಗಳು ಸ್ವಪ್ರೇರಣೆಯಿಂದ ಭಾಗವಹಿಸಬೇಕೆಂದು ಈ ಮೂಲಕ ಕೋರುತೇವೆ. ಸಮಾನಮನಸ್ಕ ಕನ್ನಡ ಪರ ಮನಸ್ಸುಗಳು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಗೋಷ್ಠಿಯಲ್ಲಿ ನಾಗೇಂದ್ರ ಬಂಡೀಕರ್ ‘ಹಿರಿಯ ಕನ್ನಡ ಪರಹೋರಾಟಗಾರರು,ಟಿ. ಮಂಜುನಾಥಗೌಡ
ಸಂಸ್ಥಾಪಕ ಅಧ್ಯಕ್ಷರು ನಮ್ಮ ಜೈ ಕರುನಾಡ ವೇದಿಕೆ,ಲಿಂಗಪ್ಪ ನಮ್ಮ ಜೈ ಕರುನಾಡ ವೇದಿಕೆ
ರಾಜೇಂದ್ರ ಬಂಗೇರ,ಬಿ.ಎಸ್.ಪ್ರವೀಣ್ ಪಲ್ಲೇದ್.ಕರ್ನಾಟಕ ಜನಮನ ವೇದಿಕೆ,ಮುಂತಾದ ಅನೇಕ ಕನ್ನಡಪರಸಂಘಟನೆಯವರು ಭಾಗವಹಿಸಿದ್ದರು.