Monday, December 23, 2024
Homeಶಿಕ್ಷಣವಿದ್ಯಾರ್ಥಿಗಳು ಒಳ್ಳೆಯ ಚಾರಿತ್ರೆಯನ್ನು ಹೊಂದಬೇಕು: ಪ್ರೊ, ಸಾತಿಹಾಳ…

ವಿದ್ಯಾರ್ಥಿಗಳು ಒಳ್ಳೆಯ ಚಾರಿತ್ರೆಯನ್ನು ಹೊಂದಬೇಕು: ಪ್ರೊ, ಸಾತಿಹಾಳ…

ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24 ಸಾಲಿನ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ಹಾಗೂ ಪಾಲಕರ ಸಭೆಯನ್ನು ದಿನಾಂಕ 12.2.2024ರ ಸೋಮವಾರದಂದು ನಗರದ ವಿರಕ್ತ ಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ನಗರದ ದರಬಾರ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಜಗದೀಶ ಸಾತಿಹಾಳ ಅವರು ವಹಿಸಿಕೊಂಡು ಸರಸ್ವತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಉದ್ಘಾಟನೆ ಮಾಡಿ ಮಾತನಾಡಿದರು.

ಪ್ರಶಿಕ್ಷಣಾರ್ಥಿಗಳನ್ನು ಮತ್ತು ಪಾಲಕರನ್ನು ಉದ್ದೇಶಿಸಿ ಸಂಸ್ಕಾರ, ಸಂಸ್ಕೃತಿ ಇಲ್ಲದ ಶಿಕ್ಷಣ ವ್ಯರ್ಥ. ನಾಳೆ ಶಿಕ್ಷಕರರಾಗುವ ನೀವು ಒಳ್ಳೆಯ ಚಾರಿತ್ರೆಯನ್ನು ಹೊಂದಬೇಕು. ಮಕ್ಕಳ ಮಟ್ಟಕೀಳುದು ಪಾಠ ಮಾಡಬೇಕು ನಮಗೆ ಎಷ್ಟೋ ಶಿಕ್ಷಕರೂ ಪಾಠ ಮಾಡಿದರೂ ಅವರೆಲ್ಲ ನೆನೆಪಲ್ಲೇ ಮಾತ್ರ ಇರುತ್ತಾರೆ. ಆದರೆ ಹೃದಯದಲ್ಲಿ ಇರುವರ ಶಿಕ್ಷಕರು ಕೆಲವರೂ ಮಾತ್ರ ಕಾರಣ ಅವರ ಭೋದನಾ ಶೈಲಿ ಮತ್ತು ಮಕ್ಕಳೊಂದಿಗೆ ಪರಸ್ಪರ ಒಡನಾಟದಿಂದಿರುವುದು, ಅವರು ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಹೋದರತ್ವದಿಂದ ವರ್ತಿಸಿ ಹೊಂದಿಕೊಂಡು ಹೊರಟಾಗ ಮಾತ್ರ ಉತ್ತಮ ಶಿಕ್ಷಕರು ಎನಿಸಿಕೊಳ್ಳಬಹುದು. ಶಿಕ್ಷಕರಾಗಲು ದೊಡ್ಡ ತಪಸ್ಸು ಮಾಡಬೇಕೆಂದು ನನಗೆ ಕಲಿಸಿದ ಶಿಕ್ಷಕರು ಹೇಳುತ್ತಿದ್ದರು ಅದು ನನ್ನ ಜೀವನದಲ್ಲಿ ಸತ್ಯವಾಗಿದೆ. ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಇರುದರಿಂದ ಚಾರಿತ್ರೆ ಯುಳ್ಳ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳು ಬರಲು ಸಾಧ್ಯ ಈ ನಿಟ್ಟಿನಲ್ಲಿ ಈ ಭಾಗದ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಕರ ತರಬೇತಿ ಕೊಡುವ ಶಿಕ್ಷಣ ಸಂಸ್ಥೆ ಇದಾಗಿದೆ. ಕಾರಣ ಪರಮ ಪೂಜ್ಯ ಖಾಸ್ಗತೇಶ್ವರ ಅಜ್ಜರ ಹೆಸರಿನೊಂದಿಗೆ ಈ ಸಂಸ್ಥೆ ಹುಟ್ಟಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಸ್ವಾಮೀಜಿ ಅವರ ತಮ್ಮ ತಮ್ಮ ಮಠ ಬಿಟ್ಟು ಹೊರಗೆ ಬರಲಿಲ್ಲ ಆದರೆ ಈ ಮಠ ಮರಿ ಸಿದ್ದಲಿಂಗ ದೇವರು ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಬಡವರಿಗೆ ಆಹಾರದ ಕಿಟ್ಟುಗಳನ್ನು ಮನೆ ಮನೆಗೆ ತೆರಳಿ ಹಂಚಿದ ದೇವರು ಇವರಾಗಿದ್ದಾರೆ .ಅವರ ಆಶೀರ್ವಾದಿಂದ ಸ್ಥಾಪನೆಯಾದ ಈ ಸಂಸ್ಥೆ ವಿಶೇಷವಾದ ಕಾರ್ಯಕ್ರಮ ಸಂತಸದ ವಿಷಯ. ನಾವು ನಮ್ಮ ಜೀವಿತ ಈ ಅವಧಿಯಲ್ಲಿ ದೇಶಕ್ಕಾಕಿ ಏನಾದ್ರು ಕೊಡುಗೆ ಕೊಟ್ಟು ಹೋಗದ ಜೀವ & ಜೀವನ ವ್ಯರ್ಥ. ಎಂದು ಮಾರ್ಮಿಕವಾಗಿ ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಬಿ ಎಂ ಹಿಪ್ಪರಗಿ, ಕೆ ಎಸ್ ಮುರಾಳ, ಆರ್ ಸಿ ಪಾಟೀಲ್, IQSC ಘಟಕದ ಮುಖ್ಯಸ್ಥರೂ ಶ್ರೀ ಉಮೇಶ ಮನಗೊಂಡು,ಅವರು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ಟಿಇಟಿ ಪರೀಕ್ಷೆಯಲ್ಲಿ ಪಾಸಾದ ಪ್ರತಿಕ್ಷಣಾರ್ಥಿಗಳಿಗೆ ಸನ್ಮಾನವನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೇ ವಹಿಸಿಕೊಂಡ ಡಾ ಆರ್ ಎಮ್ ಬಂಟನೂರ ಅವರು ಮಾತನಾಡಿ ಪಾಲಕರ ಸಹಕಾರ ಇದ್ದಾರೆ ಮಾತ್ರ ನಮಗೆ ನಿಮ್ಮ ಮಕ್ಕಳನ್ನು ಉತ್ತಮ ಶಿಕ್ಷಕರನಾಗಿ ಮಾಡಲು ಸಹಾಯವಾಗುತ್ತೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆ ಅಮ್ಮಿರಾಬಾಯಿ ಪ್ರತಿಕ್ಷಣಾರ್ಥಿಗಳು ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ ತಾಳಿಕೋಟಿ. ಅವರು ನಡಿಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments