Monday, December 23, 2024
Homeಶಿಕ್ಷಣಪದವಿ ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ದಿ ಶಿಕ್ಷಣ ಅವಶ್ಯಕ:- ಶ್ರೀ ಮಹಾಂತಗೌಡ ಪಾಟೀಲ್

ಪದವಿ ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ದಿ ಶಿಕ್ಷಣ ಅವಶ್ಯಕ:- ಶ್ರೀ ಮಹಾಂತಗೌಡ ಪಾಟೀಲ್

ಮಸ್ಕಿ ಫೆಬ್ರುವರಿ 15:-ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ರಾಯಚೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಗಳ,ಹಾಗೂ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕರಿಗೆ ಅಭಿವೃದ್ಧಿ ಆಗುವುದಕ್ಕಾಗಿ ಗೀಗ್ ಶಿಕ್ಷಣದ ಮೂಲಕ ಹಲವಾರು ಕ್ಷೇತ್ರಗಳ ಕುರಿತು ತರಬೇತಿ ನೀಡುವುದರ ಮೂಲಕ ನಮ್ಮ ಕಾಲೇಜಿನ ಯುವಕರುಗಳಲ್ಲಿ ಕೌಶಲ್ಯ ಅಭಿವೃದ್ದಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವುದಕ್ಕೆ ನಮ್ಮ ಕಾಲೇಜಿಗೆ ಬಂದಿರುವುದು ತುಂಬಾ ಸಂತೋಷದ ವಿಷಯವಾಗಿದೆ.ಏಕೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಪ್ರಗತಿಯನ್ನು ಸಾಧಿಸುವುದಕ್ಕಾಗಿ ಮತ್ತು ಅಭಿವೃದ್ದಿ ಹೊಂದುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ರೀತಿಯ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದು ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತೀವೆ ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಂಡಾಗ ಮಾತ್ರ ಅದು ಸ್ವಾರ್ಥಕವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಾಂತಗೌಡ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಬಾಬುರಾವ್ ಎಮ್ ಶೇಗುಣಿಸಿ ರಾಯಚೂರು ಇವರು ಮಾತನಾಡಿ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು,ಯುವಕರು ಪದವಿ ಶಿಕ್ಷಣವನ್ನು ಪಡೆದುಕೊಳ್ಳುವುದರ ಜೊತೆಗೆ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಹಲವಾರು ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ತಯಾರಾಗಬೇಕೆಂದು ಯುವಕರಿಗೆ,ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.ಅದೇ ರೀತಿಯಾಗಿ ಇಂದಿನ ಕಾರ್ಯಕ್ರಮದ ಸಂಪನ್ಮೂಲದ ವ್ಯಕ್ತಿಗಳಾಗಿ ಉಪನ್ಯಾಸ ನೀಡುವುದಕ್ಕೆ ಆಗಮಿಸಿದ್ದ ದೇವೇಂದ್ರ ಕುಮಾರ್ ಹೂಗಾರ್ ಗಾಂಧಿ ಕಾಲೇಜಿನ ಉಪನ್ಯಾಸಕರು ಮಾತನಾಡಿ ಪ್ರತಿಯೊಬ್ಬ ಯುವಕರು,ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಿರಾಸೆಯ ಮನೋಧೋರಣೆ ಹೊಂದಬಾರದು ಹಾಗೂ ನಿಮ್ಮ ಜೀವನದಲ್ಲಿ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಒಳ್ಳೆಯ ಕೌಶಲ್ಯಭರಿತವಾದ ಶಿಕ್ಷಣದ ಲಕ್ಷಣಗಳನ್ನು ಅಳವಡಿಸಿಕೊಂಡು ಸ್ವಯಂ ಉದ್ಯೋಗವಂತರಾಗಬೇಕು ಎಂದು ವಿದ್ಯಾರ್ಥಿಗಳಿಗೆ,ಯುವಕರಿಗೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ನಿರೂಪಣೆಯನ್ನು ವೀರುಪನಗೌಡ ಜಿನ್ನಾಪೂರು , ಸ್ವಾಗತವನ್ನು ಪ್ರಾಧ್ಯಾಪಕರಾದ ಕುಮಾರಿ ಕನ್ಯಾಕುಮಾರಿ, ವಂದನಾರ್ಪಣೆಯನ್ನು ರಾಮಣ್ಣ ನಾಯಕ ರಂಗಾಪೂರು ಮಾಡಿದರು,ಇಂದಿನ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರಾಮಣ್ಣ ಜುಮ್ಮಾ ಸಮಾಜಶಾಸ್ತ್ರ ವಿಭಾಗ, ಶ್ರೀ ಮತಿ ರೋಹಿಣಿ ಮೂರ್ತಿ, ಶ್ರೀ ವೀರೇಶ, ಶ್ರೀ ಭೀಮಣ್ಣ ರಂಗಪೂರು,ಶ್ರೀ ಪಂಪಾಪತಿ, ಶ್ರೀ ಹುಚ್ಚೇಶ ನಾಗಲಿಕರ್, ಪಂಪಾಪತಿ, ಸುರೇಶ ಬಳಗಾನೂರು, ಸರಸ್ವತಿ ಇನ್ನೂ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments