ದಾವಣಗೆರೆ: ಗೌರವಾನ್ವಿತ ಸಮಾಜ ಬಾಂಧವರಲ್ಲಿ ವಿನಂತಿ.
ಈ ದಿನ ದಾವಣಗೆರೆ ಕುರುಬರ ಹಾಸ್ಟೆಲಿಗೆ ಭೇಟಿ ನೀಡಿದಾಗ ತುಂಬಾ ನೋವು, ದುಃಖದ ಸಂಗತಿ ಹಾಗೂ ಮನಸ್ಸಿಗೆ ಆಘಾತಕಾರಿಯಾಗುವಂತ ವಾತಾವರಣವನ್ನು ಕಂಡು ತುಂಬಾ ಬೇಜಾರವಾಯಿತು,
ನಮ್ಮ ಸಮಾಜದ ಹಿರಿಯರು ಆದಂತ ಶ್ರೀಯುತ ಚನ್ನಯ್ಯ ಒಡೆಯರ್. ಕೆ ಮಲ್ಲಪ್ಪನವರು .ಸೊಪ್ಪಿನ ಮರಿಯಪ್ಪನವರು ಹಾಗೂ ಇತರೆ ಸಮಾಜದ ಬಂಧುಗಳು ದೇಣಿಗೆನ ಸಂಗ್ರಹಿಸಿ ಹಗಲಿರಲು ಶ್ರಮವಹಿಸಿ ಕಷ್ಟಪಟ್ಟು ಕಟ್ಟಿ ಬೆಳೆಸಿದಂತ ಹಾಸ್ಟೆಲ್ ಪರಿಸ್ಥಿತಿಯನ್ನು ಕಂಡು ಬಹಳ ನೋವಾಯ್ತು
.ನಾನು ಸಹ ಅದೇ ಹಾಸ್ಟೆಲಲ್ಲಿ ಪಿಯುಸಿ ಇಂದ ಎಲ್ ಎಲ್ ಬಿ ಹಾಗೂ ವಕೀಲ ವೃತ್ತಿ ಮಾಡುವ ತನಕ ಹಾಸ್ಟೆಲ್ ವಿದ್ಯಾರ್ಥಿಯಾಗಿ ಹಾಸ್ಟೆಲ್ನ ಅಂದ ಚಂದವನ್ನು ಹಾಗೂ ಪದಾಧಿಕಾರಿಗಳ ಆಡಳಿತವನ್ನು ಗಮನಿಸುತ್ತಾ ಬಂದಿರುತ್ತೇನೆ.
ಆದರೆ ಇಂದಿನ ಅಧ್ಯಕ್ಷರು ಕಾರ್ಯದರ್ಶಿಯ ಕಾರ್ಯ ವೈಖರಿಯನ್ನು ಕಂಡು ತುಂಬಾ ಬೇಜಾರವಾಯಿತು.
ಕಾರಣ ಇಷ್ಟೇ ಅಧ್ಯಕ್ಷರು ಕಾರ್ಯದರ್ಶಿ ಅವರು ತಮ್ಮ ಮನೆಯನ್ನು ತಮ್ಮ ಮನಸ್ಸನ್ನು ತಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಯಸುತ್ತಾರೋ!! ಅದೆ ರೀತಿಯಾಗಿ ನಮ್ಮ ಸಮಾಜದ ಹಾಸ್ಟೆಲ್ನ ಸ್ವಚ್ಛವಾಗಿ ಇಡದೆ ಇರಲು ಕಾರಣವೇನು ?ಎಂದು ಗೊತ್ತಾಗುತ್ತಿಲ್ಲ . ಸ್ವಚ್ಛವಾಗಿಡದೆ ಇರುವುದು ತುಂಬಾ ನೋವಿನ ಸಂಗತಿ
ಯಾಕೆ ಹೀಗಾಯ್ತು ಗೊತ್ತಿಲ್ಲ. ಹಾಸ್ಟೆಲ್ ಹೊರಗಡೆ ನೋಡಲು ತುಂಬಾ ಹೊಳಪಾಗಿದೆ ಒಳಗಡೆ ನೋಡಿದರೆ ತುಂಬಾ ಹುಳುಕು ಇದೆ.
ಆದ್ದರಿಂದ ಬರುವಂತ ದಿನಗಳಲ್ಲಿ ಹಾಸ್ಟೆಲ್ನ ಚುನಾವಣೆ ಇದ್ದು ಸಮಾಜದ ಕೆಲಸವನ್ನು ಹಾಗೂ ಹಾಸ್ಟಲ್ ಕೆಲಸವನ್ನು ಶ್ರದ್ಧೆಯಿಂದ ಮತ್ತು ನಿಷ್ಠೆಯಿಂದ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕೆಂದು ಸಮಾಜದ ಹಾಸ್ಟೆಲನ್ನು ,ಸಮಾಜವನ್ನು ಉನ್ನತ ಮಟ್ಟಕ್ಕೆ ಬೆಳೆಸುವಂತಹ ವ್ಯಕ್ತಿಗಳನ್ನು, ಸಮಾಜದ ಗೌರವಾನ್ವಿತ ಮತದಾರ ಬಂಧುಗಳು ಆಯ್ಕೆ ಮಾಡ ಬೇಕೆಂದು ತಮ್ಮಲ್ಲಿ ಕೈಮುಗಿದು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ
ಲೋಕಿಕೆರೆ ಪ್ರದೀಪ್
ವಕೀಲರು. ಮಾಜಿ ಕಾರ್ಯದರ್ಶಿ ಜಿಲ್ಲಾ ವಕೀಲ ಸಂಘ .ದಾವಣಗೆರೆ ಹಾಗೂ ಜಿಲ್ಲಾ ವಕೀಲರ ಸಹಕಾರ ಸಂಘದ ನಿರ್ದೇಶಕರು. ದಾವಣಗೆರೆ.
ಓದಿದ್ರಲ್ಲವ ……
ಇಷ್ಟು ಸಾಕೇನಿಸುತ್ತೆ ,
83-84 ರಿ ಸಾಲು, ದಾವಣಗೆರೆ ಮಾವ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ,ಡಿ ಆರ್ ಆರ್ ಶಾಲೇಲಿ
ಈಗೀನ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಇದೇ ಶಾಲೇಲಿ ಇಂಗ್ಲಿಷ್ ಮೀಡಿಯಂ
ನಾನೋ ರೈತನ ಮಗ ಕನ್ನಡ ಸೆಕ್ಷನ್
ಪಿಯುಸಿ ಗೇ ಕುರುಬರ ವಿದ್ಯಾವರ್ಧಕ ಸಂಘದಲ್ಲಿ
34 ನೇ ರೂಂ,ಅಲ್ಲಿಂದ ಹೊಯ್ಸಳ ಪತ್ರಿಕೆ ವರದಿ
ಗಾರನಾಗೋ ತನಕ 94-96 ರತನಕವೂ ಹಾಸ್ಟೆಲ್
ಮನೆ ಮಠವಾಗೇ ಇತ್ತು,
ದಿನಕ್ಕೆ 4.-5 ರೂ ಊಟದ ಖರ್ಚಿ
ತಿಂಗಳಿಗೆ ಕೆಲವೇ ನೂರು,ಎಂಥ ಊಟ
ಹಾಸ್ಟೆಲ್ ಡೇ, ಶಿವರಾತ್ರಿ, ಹಬ್ಬದ ದಿನ ಗಳಲ್ಲಿ
ಬಾದಂ ಪುರಿ ಜಿಲೇಬಿ, … ಗ್ರಾಂಡ್ ಭೋಜನ
ತಿಂಗಳಿಗೊಮ್ಮೆ ಸರಳ ಮುತ್ಸದ್ದಿ ಸಮಾಜದ
ಹಿರಿಯ ಎಂಪಿ ಚೆನ್ನಯ ಒಡೆಯರ್
ಸಭೆ,ಹೇಳಿದ ಮಾತು,
ಹಿರಿಯ ಚಿಂತಕರ ದಂಡು, ಮಕ್ಕಳ
ಶೈಕ್ಷಣಿಕ ಅಭಿವೃದ್ಧಿಗೆ ಘಾಡ
ಚರ್ಚೆ ನಡೆಸಿ ಕೆಳ ಆವರಣ ಎರಡಂಸ್ತಿನ
ಕಟ್ಟಡ, ಮೇಲೆದ್ದು.. ಮುಂದೆ ಗಾಜಿನ ದೊಡ್ಡ
ವಿಶಾಲ ಹಾಲ್….
24*7 ತುಂಗಭದ್ರಾ ನೀರು, ಬೃಹತ್
ರೂಂ ಗಳು, ಆಗಾಗ್ಗೆ ಹಾಸ್ಟೆಲ್ ವಾರ್ಡನ್
ದಿನವೂ ಮ್ಯಾನೇಜರ್ ಹಾಜರು
ಎಲ್ಲವೂ ಸ್ವಚ್ಛತೆ,…..
ಬೇರೆ ಹಾಸ್ಟೆಲ್ ಗಳಿಗಿಂತ ಮಾದರಿ
ಆಗೀನ ಬಿಗಿ ಆಡಳಿತ, ವಿಧ್ಯಾರ್ಥಿಗಳಿಗೆ
ಬುಧ್ಧಿ ಮಾತು,…. ಕಾಲ ಹರಣ ಮಾಡದೇ
ಓದು, ಎಲ್ಲವೂ ಸರಿ ಇತ್ತು,
. ಈಗೀಗ ಕಾಲ ಬದಲಾದಂತೆ
ಎಲ್ಲವೂ ಹೊಳು, ಆಗ ಸಮಾಜ
ಸಂಘಟನೆ ಸಾಮಾಜಿಕ ಕಳಕಳಿ
ಸಾಂಸ್ಕೃತಿಕ
ಶೈಕ್ಷಣಿಕ ಅರಿವು, ರಾಜಕೀಯ
ಪ್ರಜ್ಞೆ….ಈಗೇಲ್ಲವು ನೆನಪುಗಳು ಮಾತ್ರ
ಕುರುಬ ಸಂಘದ ಹೆಸರಲ್ಲಿ
ಪೊಳ್ಳು ರಾಜಕೀಯ ಬೇಡ
ಸಮಾಜ ಮುಖಿ ಚಿಂತನೆ ಇರಲಿ.
ಹಳೇ ವಿದ್ಯಾರ್ಥಿಗಳಿಗೇ ಮೊದಲ
ಆಧ್ಯತೆ ಇರಲಿ, ಕಾರಣ ಹಾಸ್ಟೆಲ್
ಸ್ಥಿತಿ ಸುಧಾರಿಸಲು ಅನುಭಾವಿಕ
ಕ್ರಿಯಾಶೀಲ ಜಾಣ್ಮೆ ಬೇಕು.
ಬನ್ನಿ, ಹಾಸ್ಟೆಲ್ ಅಭಿವೃದ್ಧಿ ಬಗ್ಗೆ
ದೂರದೃಷ್ಟಿಯುಳ್ಳ ಕಾಳಜಿ ಯ
ಸಂಘಕ್ಕೆ ನೂತನ ಕಮಿಟಿ
ನಿರ್ಧೆಶಕರು ಆಯ್ಕೆ ಆಗಲಿ(ಪುರಂದರ ಲೋಕಿಕೆರೆ)