Monday, December 23, 2024
Homeಶಿಕ್ಷಣನವೋದ್ಯಮ ಸ್ಥಾಪನೆಗೆ ಹತ್ತು ಹಲವು ಅವಕಾಶಗಳು: ಸಿ.ಎಂ.ಪಾಟೀಲ್

ನವೋದ್ಯಮ ಸ್ಥಾಪನೆಗೆ ಹತ್ತು ಹಲವು ಅವಕಾಶಗಳು: ಸಿ.ಎಂ.ಪಾಟೀಲ್

ದಾವಣಗೆರೆ: ಸ್ಟಾರ್ಟಅಪ್ ಅಂದರೆ ನವೋದ್ಯಮ ಸ್ಥಾಪನೆಗೆ ಈಗ ಸುವರ್ಣಯುಗ ಇದಕ್ಕೆ ಹತ್ತು ಹಲವು ಅವಕಾಶಗಳು ಇವೆ ಆದುದರಿಂದ ಮೊದಲಿಗೆ ಯಾವ ಬಗೆಯ ವ್ಯವಾಹರ ಮಾಡಲು ಬಯಸುವಿರಿ ಎಂದು ನಿರ್ಧರಸಿಕೊಳ್ಳುವುದರ ಜೊತೆಗೆ ಇದರ ಕುರಿತು ಸಾಕಷ್ಟು ಸಂಶೋಧನೆ ಮಾಡುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಕೃಷಿಕಲ್ಪ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ.ಎಂ. ಪಾಟೀಲ್ ಅವರು ನುಡಿದರು.

ಅವರು ಸ್ಥಳೀಯ ವಿಶ್ವವಿದ್ಯಾಲಯ ಬಿ.ಡಿ.ಟಿ. ಇಂಜಿನಿಯರಿAಗ್ ಕಾಲೇಜಿನ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ ವಿಭಾಗದ ಹಳೇಯ ವಿದ್ಯಾರ್ಥಿಯಾದ ದಿ||ಎಸ್.ದಕ್ಷಿಣ ಮೂರ್ತಿ ಇವರ ಸ್ಮರಣಾರ್ಥ ಇವರ ಕುಟುಂಬಸ್ಥರು ಪ್ರಾಯೋಜಿಸಿದ ಎರಡು ದಿನಗಳ ಸ್ಟಾರ್ಟಅಪ್ ಕಂಪನಿಗಳು ಹೊಂದಿಸುವಿಕೆ ಮತ್ತು ಬೆಳವಣಗೆ ಗಾಗಿ ಪರಿಸರ ವ್ಯವಸ್ಥೆಗಳು ಎಂಬ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತಾನಾಡುತ್ತ ಅನುಭವ ಇರುವ ಕ್ಷೇತ್ರದಲ್ಲಿ ಉದ್ಯವi ಸ್ಥಾಪಿಸುವುದು ಉತ್ತಮ. ಇಲ್ಲವಾದರೆ, ಕೊಂಚ ಅನುಭವ ಪಡೆದುಕೊಂಡು ಉದ್ಯಮ ಆರಂಭಿಸುವುದು ಸೂಕ್ತ. ಇದೆ ರೀತಿ ನವೋದ್ಯಮ ಆರಂಭಿಸುವಾಗ ಆ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಸಂಪಾಧಿಸಿ ಅಲ್ಲಿ ಕಲಿತ ಅನುಭವಗಳನ್ನು ವ್ಯವಹರದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ವಿ ಸಾಧಿಸಲು ಸಾಧ್ಯವೆಂದು ಸಿ.ಎಂ.ಪಾಟೀಲ್ ನುಡಿದರು.
ನವೋದ್ಯಮದಲ್ಲಿ ಪ್ರತಿಯೊಬ್ಬರನ್ನು ಕಾಪಡುವ ಸಾಮರ್ಥ್ಯವಿರುವುದು ಗ್ರಾಹಕರಿಗೆ ಮಾತ್ರ. ಇಲ್ಲಿ ನೀಡುವ ಸೇವೆ ಅತ್ಯುತ್ತಮವಾಗಿರಬೇಕು ಅಲ್ಲದೇ ಇತರೆ ಕಂಪನಿಗಳಿಗಿAತ ಒಂದು ಹೆಜ್ಜೆ ಮುಂದಿರಬೇಕು ಅಲ್ಲದೇ ನವೋದ್ಯಮದ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕ ಮತ್ತೊಮ್ಮೆ ಬರುವಂತೆ ಸೇವೆ ಇರಬೇಕು ಎಂದು ಅಭಿಪ್ರಾಯ ಪಟ್ಟರು.
ದಿ||ಎಸ್.ದಕ್ಷಿಣಮೂರ್ತಿಯವರ ಮಗಳಾದ ಡಾ.ಭಾರತಿ ಎಂ.ಡಿ. ಮಾತಾನಾಡುತ್ತ ಇಂಜಿನಿಯರಿAಗ್ ವಿದ್ಯಾಭ್ಯಾಸದಲ್ಲಿ ಶೈಕ್ಷಣ ಕ ಉಪಕ್ರಮಗಳಲ್ಲಿ ಉದ್ಯಮಶೀಲತೆಯ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ದಕ್ಷಿಣಮೂರ್ತಿಯವರಿಗಿದ್ದ ಚಿಂತನೆಗಳನ್ನು ಸಬೀಕರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರೆ ಪ್ರಾಚಾರ್ಯರಾದ ಡಾ.ಮಲ್ಲಿಕಾರ್ಜುನ್ ಎಸ್,ಹೊಳಿ ಮಾತನಾಡುತ್ತಾ ಉದ್ಯಮವನ್ನು ಪ್ರಾರಂಭಿಸಲು ಭಾರತದಲ್ಲಿ ಹಣಕಾಸು ನೇರವು ನೀಡಲು ಸಾಕಷ್ಟು ಧನಸಹಾಯ ಸಂಸ್ಥೆಯ ಆಯ್ಕೆಗಳು ಇವೆ. ಪ್ರತಿಯೊಬ್ಬರು ಉದ್ಯಮಶೀಲತೆ ಉಳ್ಳವರಾಗಲು ಅತ್ಯುತ್ತಮ ವಾಣ ಜ್ಯ ಯೋಜನೆ ಅನನ್ಯವಾಗಿದ್ದರೆ ಧನಸಹಾಯ ದೂರಕುವುದು ಕಷ್ಟವಲ್ಲವೆಂದರು. ನಿಮ್ಮ ಉದ್ಯಮಶೀಲತೆಯ ಕುರಿತು ನಿಮಗೆ ನಂಬಿಕೆ ಇರಬೇಕು ಅಲ್ಲದೇ ನಿಮ್ಮ ಉದ್ಯಮದ ಪರಿಕಲ್ಪನೆಯ ಕುರಿತು ನಿಮಗೆ ಭರವಸೆ ಇಲ್ಲದೇ ಇದ್ದರೆ ಇತರರು ನಂಬಲಾರರು ಹೀಗಾಗಿ ಪ್ರತಿಯೊಂಬ್ಬರಲ್ಲಿ ಅದ್ಬುತವಾದ ಯೋಚನೆ ಮತ್ತು ದೃಷ್ಟಿಕೋನದೊಂದಿಗೆ ಹೂಡಿಕೆದಾರರ ಮನವೊಲಿಸುವ ಶಕ್ತಿ ಇರಬೇಕೆಂದು ಅಭಿಪ್ರಾಯ ಪಟ್ಟರು.
ಕು.ಪ್ರತಿಭಾ ಎಂ.ವಿ. ಮತ್ತು ಸಂಘಟಿಕರು ಪ್ರಾರ್ಥಿಸಿದರು, ಕಾರ್ಯಕ್ರಮದ ಸಂಚಾಲಕರು ಮತ್ತು ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಬಸವರಾಜಪ್ಪನವರು ಸ್ವಾಂಗತಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ಡಾ.ಶೇಖರಪ್ಪ ಬಿ. ಮಲ್ಲೂರವರು ಕಾರ್ಯಕ್ರಮದ ರೂಪರೇಷೆ ಹಾಗೂ ದೇಯೋದ್ದೇಶಗಳ ಕುರಿತು ಮಾತನಾಡಿದರು, ಯಾಂತ್ರಿಕ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸಿ.ಜಿ.ಶ್ರೀನಿವಾಸ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಯಾಂತ್ರಿಕ ವಿಭಾಗದ ಪ್ರಾಧ್ಯಾಪಕರು ಹಾಗೂ ಡೀನರು ಆದ ಡಾ.ಈರಪ್ಪ ಸೊಗಲದ ಇವರು ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಯಾಂತ್ರಿಕ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ವಿಜಯಕುಮಾರ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments