Monday, December 23, 2024
Homeಸಂಸ್ಕೃತಿಮಠದ ಸಮುದಾಯ ಭವನ ಪೂರ್ಣಗೊಳ್ಳಲು ಸಚಿವ, ಶಾಸಕ, ಸಂಸದರು ಇಚ್ಛಾಶಕ್ತಿ ಮೆರೆಯಲು ಮುರುಳಿಧರ ಶ್ರೀಗಳ ಆಗ್ರಹ

ಮಠದ ಸಮುದಾಯ ಭವನ ಪೂರ್ಣಗೊಳ್ಳಲು ಸಚಿವ, ಶಾಸಕ, ಸಂಸದರು ಇಚ್ಛಾಶಕ್ತಿ ಮೆರೆಯಲು ಮುರುಳಿಧರ ಶ್ರೀಗಳ ಆಗ್ರಹ

ದಾವಣಗೆರೆ ಜು 22:ಸಿದ್ಧಾರೂಢರ ಹಾದಿಯಲ್ಲಿ ಕಳೆದ 70 ವರ್ಷಗಳಿoದಲೂ ಷಡಕ್ಷರಿ ಮಂತ್ರ, ಆರೂಢ ಧಾರ್ಮಿಕ ಸಂಸ್ಕೃತಿ, ಶೈಕ್ಷಣಿಕ ದಾಸೋಹ, ಸಾಮಾಜಿಕ ಕಲ್ಯಾಣ, ಲೋಕಕಲ್ಯಾಣ, ಜಾತ್ಯಾತೀತ ಸದ್ಭಾವನೆಗಳಿಂದ
ಅನ್ನ ದಾಸೋಹ, ಕಲ್ಯಾಣ ಕಾರ್ಯಗಳಂತ ಸಾಮಾಜಿಕ ಕಳಕಳಿಯಿಂದ ಸೇವಾ ನಿರತ ಶ್ರೀ ಹದಡಿ ಚಂದ್ರಗಿರಿ ಮಠದ
ಶ್ರೀ ಶ್ರೀ ವಿದ್ಯಾವರಣ್ಯ ಯೋಗೀಶ್ವರರ ಆಶಯದಿಂದಲೇ ಈ ಮಠ ಬೆಳೆಯುತ್ತಾ ಬಂದಿದ್ದು ಈ ಭಾಗದ ಸುತ್ತಮುತ್ತಲ ನೂರಾರು ಹಳ್ಳಿಗಳ ಭಕ್ತರು ರೈತರು, ಜನಕಲ್ಯಾಣಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಆಪೂರ್ಣ, ನೆನೆಗುದಿಗೆ ಬಿದ್ದಿದ್ದು
ಈ ಭಾಗದ ಶಾಸಕರು ಸಚಿವರು, ನೂತನ ಸಂಸದರು
ತಮ್ಮ ಇಚ್ಛಾಶಕ್ತಿ ಮೆರೆದು
ಸಮುದಾಯ ಭವನ ಪೂರ್ಣಗೊಳ್ಳಲು ಶ್ರ ಮಿಸುವಂತೆ ದಾವಣಗೆರೆ ದಕ್ಷಿಣ ಭಾಗದ ಹದಡಿಯ ಶ್ರೀ ಶ್ರೀ ಸದ್ಗುರು ಪರಮಹಂಸ ವಿದ್ಯಾವರಣ್ಯ ಯೋಗೀಶ್ವರ ಪಾರಮಾರ್ಥ ವಿಶ್ವಸ್ಥ ಧಾರ್ಮಿಕ ಟ್ರಸ್ಟ್ ಅಧ್ಯಕ್ಷರು ಆಗಿರುವ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ಮುರಳಿಧರ ಶ್ರೀಗಳು ಸ್ಥಳೀಯ ಸಚಿವರು ಶಾಸಕರು ಸಂಸದರು ಇತ್ತ ಕಾರ್ಯ ಪ್ರವೃತ್ತರಾಗಲು ಆಗ್ರಪಡಿಸಿದರು.

ನಗರದ ಸಮೀಪ ದಲ್ಲಿ ಇರುವ ಹದಡಿ ಹೊಸ ನಾಯಕನಹಳ್ಳಿ ಶ್ರೀ ಚಂದ್ರಗಿರಿ ಮಠ ದಲ್ಲಿ ಪ್ರತಿ ಗುರುಪೂರ್ಣಿಮೆ ದಿನ ಭಗವದ್ಗೀತಾ ಪಾರಾಯಣ, ಯಜ್ಞ ಕಾರ್ಯ, ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಜಾತ್ಯಾತೀತ ಸಿದ್ಧಾರೂಢ, ಸಂಸ್ಕೃತಿಯ ಈ ಚದುರಗಿರಿ ಮಠ, ಭಕ್ತರು ಸುತ್ತ ಬುತ್ತಿರುವ ಜನರು ರೈತರು ಕಟ್ಟಿದ ಮಠ, ಇಂತಹ ಮಠದಲ್ಲಿ ಧಾರ್ಮಿಕ ದಾಸೋಹ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳು, ನಿರಂತರ 70 ವರ್ಷಗಳಿದ್ದರೂ ನಡೆದುಕೊಂಡು ಬರುತ್ತಿವೆ,
ಇಂತಹ ಜನ ಸಂಸ್ಕೃತಿಯ ಮಠಕ್ಕೆ ಹಲವಾರು ಅಭಿವೃದ್ಧಿಗಳ ಕೊರತೆ ಇದೆ,
ಹೆಚ್ಚಾಗುತ್ತಿದ್ದಾರೆ, ಬಡದ ಸುತ್ತಲೂ ಕಾಂಪೌಂಡ್, ರಸ್ತೆ, ನೀರಿನ ಸೌಲಭ್ಯ, ಮೂಲಭೂತ ಸೌಕರ್ಯಗಳ ಅವಶ್ಯಕತೆ ಕೂಡ ಇದೆ,
ಇದು ಜಾತ್ಯಾತೀತ ದಾವಣಗೆರೆ ದಕ್ಷಿಣ ಭಾಗದ ಸುತ್ತ ನೂರೆಂಟು ಹಳ್ಳಿಗಳ ಜನರ ಮಠ ವಾಗಿದ್ದು ಜನರೇ ಭಕ್ತರೇ ಕಟ್ಟಿದ ಮಠವಾಗಿದೆ,
ಇಂತಹ ಸರ್ವಧರ್ಮ ಮಠಕ್ಕೆ ಹಲವಾರು ಅಭಿವೃದ್ಧಿಯ ಕೊರತೆ ಇದೆ, ಇಂತಹ ಕೊರತೆಯನ್ನು ನೀಗಿಸುವ ಜವಾಬ್ದಾರಿ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳ ಕರ್ತವೂ ಕೂಡ ಹಾಗಿದೆ,
ಇಲ್ಲಿ ಪ್ರತಿ ವರ್ಷವೂ ಕೂಡ ಹಲವಾರು ಕಲ್ಯಾಣ ಸಾಮಾಜಿಕ ಕಾರ್ಯಗಳು ನಡೆಯುತ್ತಲೇ ಇರುತ್ತವೆ, ಇಂತಹ ಪುಣ್ಯ ಭೂಮಿಯ ನೆಲದಲ್ಲಿ ಜನ ಉಪಯೋಗ ಈ ಕಾರ್ಯಗಳು ಆಗಬೇಕಾಗಿದೆ,
ಇಂತಹ ಕಾರ್ಯಗಳನ್ನು ಮಾಡುವ ಪುಣ್ಯದ ಕಾರ್ಯ ಇಚ್ಚಾ ಶಕ್ತಿ ಈ ಭಾಗದ ಜನಪ್ರಿಯ ಜನಪ್ರತಿನಿಧಿಗಳ ಕರ್ತವ್ಯವು ಕೂಡ ಎಂದು ಶ್ರೀಗಳು ಆಶಿಸಿದರು.
ಮನುಷ್ಯ, ಬರುವಾಗ ಏನೂ ತಂದಿರಲ್ಲ, ಹೋಗುವಾಗಲೂ ಏನು ತೆಗೆದುಕೊಂಡು ಹೋಗುವುದಿಲ್ಲ, ಆದರೆ ಇರುವಷ್ಟು ದಿನಗಳು, ಇದು ನನ್ನದು ಅದು ನನ್ನದು, ಈ ಆಸ್ತಿ ನನ್ನದು, ಈ ಸಂಪತ್ತು ನನ್ನದು,
ಈ ಜಾಗ ಈ ಜಮೀನು ಈ ಹೊಲ, ನನ್ನದು ನನ್ನದು ಎನ್ನುವ
ಸಂಕುಚಿತ ಭಾವನೆಗಳಿಂದ
ಮನುಷ್ಯತ್ವ ಮಾನ ವೀಯತೆ ತೆಯನ್ನೇ ಕಳೆದುಕೊಳ್ಳುತ್ತಿದ್ದಾನೆ.
ಪರಸ್ಪರ ನಂಬಿಕೆಗಳನ್ನು ಕಳೆದುಕೊಂಡು ಅಪನಂಬಿಕೆಗಳಲ್ಲಿ ಜೀವನ ಕಳೆಯುವ ಪರಿಸ್ಥಿತಿ,
ಪ್ರಶ್ನೆಗಳು, ಇಡೀ ಜೀವನವನ್ನೇ ಹಾಳು ಮಾಡಿಕೊಡುತ್ತಿವೆ,
ಮಾನವ ತನ್ನನ್ನು ತಾನು ಆರ್ಥಿಸಿಕೊಂಡಲ್ಲಿ ಈ ಜೀವನ ಫಲಪ್ರದವಾಗುತ್ತದೆ, ಪರಸ್ಪರ ಸಹಬಾಳ್ವೆಯ ಸಹಕಾರ, ಗುರುಹಿರಿಯಲಿ ನಂಬಿಕೆ ಗೌರವ, ಚಾಚು ತಪ್ಪದೇ ಪಾಲಿಸಿದಾಗ ಮಾತ್ರ ಗುರು ಪೂರ್ಣಿಮೆಗೆ ಅರ್ಥ ಬರುತ್ತದೆ
ಮುಂದೆ ಗುರಿ,ಹಿಂದೆ ಗುರು
ಇದ್ದಾಗ ಪ್ರತಿಯೊಬ್ಬ ವ್ಯಕ್ತಿಯ ಬಾಳಲ್ಲಿ ಯಶಸ್ಸು ಫಲ ಕಾಣ ಲು ಸಾಧ್ಯ , ಆದ್ದರಿಂದ ಗುರು ಹಿರಿಯರಲ್ಲಿ ನಂಬಿಕೆ ವಿಶ್ವಾಸ ಗೌರವ, ಜೀವನದಲ್ಲಿ ಸಾರ್ಥಕ ಬದುಕನ್ನು ಕಾಣಲು ಸಾಧ್ಯ
ಎಂದು ಶ್ರೀ ಮುರಳಿದರ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ದಾವಣಗೆರೆ ನಗರದ ಜಡೆಸಿದ್ದೇಶ್ವರ ಮಠದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಕೊಪ್ಪೇಲೂರು ಶ್ರೀ ಸಿದ್ಧಾರೂಢ ಮಠದ ಪ್ರಿಯಾಾನಂದ ಶ್ರೀಗಳು, ಮಣಕೂರು ಶ್ರೀ ಸಿದ್ಧಾರೂಢ ಗುರುದೇವಶ್ರಮದ ಮಾತೋಶ್ರೀ ಚನ್ನಬಸಮ್ಮ ತಾಯಿ ಯವರು, ಹಲಿಗೇರಿಯ ಶ್ರೀ ಪೂಜ್ಯ ಅನ್ನಪೂರ್ಣ ನಂದಗಿರಿ ಮಾತಾಶ್ರೀ ಅವರು, ಶಾಗಲೆ ಗ್ರಾಮದ ಶ್ರೀ ಕೃಷ್ಣ ಪಾದ ಆರ್ಯ ಸ್ವಾಮಿಗಳು, ಶ್ರೀ ಕೃಷ್ಣಾನಂದ ಸ್ವಾಮಿಗಳು ಸಿದ್ಧಾರೂಢ ಮಠ ವೃದ್ಧಾಶ್ರಮ,
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜೆಸಿ ನಿಂಗಪ್ಪ, ಚಂದ್ರಗಿರಿ ಬಡದ ಕಾರ್ಯದರ್ಶಿ ಟಿಬಿ ಮಹಾಂತೇಶ್, ದಾವಣಗೆರೆ ವಿದ್ಯಾರಣ್ಯ ಮಠದ ಕುಂಟೋಜಿ ಬಸಣ್ಣ, ಕುಂಟಪ್ನ ನಿಂಗಪ್ಪ, ಬಸವರಾಜಪ್ಪ ಕನಗಗೊಂಡನಹಳ್ಳಿಯ ಶಿವಣ್ಣ
ಹದಡಿಯ ಎo. ಡಿ ನಿಂಗಪ್ಪ, ಪಿ ಟಿ ಸಿದ್ದಾರೂಢಪ್ಪ ನಿಟ್ಟುವಳ್ಳಿ,
ಸೇರಿದಂತೆ ಮಠದ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.
ಹೋಮ ಅವನ, ಗುರು ಪೌರ್ಣಮಿಯ ಸಕಲ ಧಾರ್ಮಿಕ ಸೇವಾ ಕಾರ್ಯಗಳ ಏಳು ಜೊತೆ ನೂತನ ವಧು-ವರರ ಸಾಮೂಹಿಕ ಉಚಿತ ಕಲ್ಯಾಣ ಕಾರ್ಯ ಜರುಗಿದವು,

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments