ದಾವಣಗೆರೆ:ಭಾರತದ ಏಕೈಕ ಮಹಿಳಾ ಬಿಎಸ್ಎಫ್ ಅಸಿಸ್ಟೆಂಟ್ ಕಮಾಂಡರ್ ಡಾಕ್ಟರ್ ಮೃದಲಾ ಎಮ್ಎಲ್ ದಾವಣಗೆರೆಯ ಹೆಮ್ಮೆಯ ಪುತ್ರಿ, ನಿವೃತ್ತ ಪ್ರಾಂಶುಪಾಲ ಶ್ರೀ ಭಾನುವಳ್ಳಿ ದಿಳ್ಳೆಪ್ಪ, ಹಾಗೂ ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀಮತಿ ಶಾಂತಮ್ಮ ದಿಳ್ಳೆಪ್ಪ ಅವರ ಮೊಮ್ಮಗಳು. ಡಾ. ವಿಜಯಶ್ರೀ ಲಿಂಗರಾಜ್ ಅವರ ಏಕೈಕ ಪುತ್ರಿ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೃದುಲ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಸಮಸ್ತ ಕುರುಬ ಸಮಾಜ ಹಾಗೂ ಹಿಂದುಳಿದ ವರ್ಗದ ಸಮುದಾಯಗಳ ಪರವಾಗಿ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೌರವ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರವರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಮಠಾಧೀಶರು,ಮಹಿಳಾ ಮುಖಂಡರುಗಳು ಉಪಸ್ಥಿತರಿದ್ದರು.