Wednesday, August 20, 2025
Homeಜಾಗೃತಿಸತೀಶ್ ಜಾರಕಿಹೊಳಿಯವರ ಘನ ಅಧ್ಯಕ್ಷತೆಯಲ್ಲಿ ಅಹಿಂದ ಮುಖಂಡರುಗಳ ಚರ್ಚಾ ಸಭೆ.

ಸತೀಶ್ ಜಾರಕಿಹೊಳಿಯವರ ಘನ ಅಧ್ಯಕ್ಷತೆಯಲ್ಲಿ ಅಹಿಂದ ಮುಖಂಡರುಗಳ ಚರ್ಚಾ ಸಭೆ.


ವಿಜಯಪುರ: ಅಹಿಂದ ಸಂಘಟನೆಯನ್ನು ಬಲಪಡಿಸಲು ಸತೀಶ್ ಜಾರಕಿಹೊಳಿಯವರು ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಮುಖಂಡರೊಂದಿಗೆ ಸುದೀರ್ಘ ಚರ್ಚೆಯಮುಖಾಂತರ ತಮ್ಮ ಸಲಹೆ,ಸೂಚನೆ,ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಅಹಿಂದ ನಾಯಕತ್ವಕ್ಕೆ ಸಜ್ಜು ಗೊಳಿಸಿ ಅಹಿಂದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.ಇದರ ಅಂಗವಾಗಿ ಇದೇ ದಿನಾಂಕ:22-07-2025,ಮಂಗಳವಾರ ಬೆಳಿಗ್ಗೆ 10-30,ಗಂಟೆಗೆ ವಿಜಯಪುರ ಜಿಲ್ಲಾ ಮುಖಂಡರುಗಳ ಸಭೆಯನ್ನು ತೊರವಿ ರಸ್ತೆಯಲ್ಲಿರುವ ಕಾಳಿದಾಸ ವಿದ್ಯಾಸಂಸ್ಥೆಯ ಎದುರಿಗಿರುವ ಪ್ರವಾಸಿಮಂದಿರದಲ್ಲಿ ಕರೆದಿರುತ್ತಾರೆ.
ವಿಜಯಪುರ ಜಿಲ್ಲೆಯಲ್ಲಿ ಅಹಿಂದ ಬಲಪಡಿಸುವ ಮತ್ತು ನಾಯಕತ್ವರೂಪಿಸುವ ಕುರಿತು ಸುದೀರ್ಘವಾದ ಚರ್ಚೆ ನಡೆಯಲಿದ್ದು ಈ ಸಭೆಯಲ್ಲಿ ಎಲ್ಲಾ ಅಹಿಂದ ಮುಖಂಡರುಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಿಕೊಂಡು ಅಹಿಂದ ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಅಮೂವಾದ ಸಲಹೆ ಸೂಚನೆಗಳನ್ನು ಕೊಟ್ಟು ಅಹಿಂದ ಬಲಪಡಿಸಲು ಕಂಕಣಬದ್ಧರಾಗಲು ಈ ಮೂಲಕ ಜಿಲ್ಲೆಯ ಸಮಗ್ರ ಅಹಿಂದ ಮುಖಂಡರು ಭಾಗವಹಿಸಿರಿ. ಈ ಸಭೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರಾದ ಸೋಮನಾಥ ಕಳ್ಳಿಮನಿ,ದಲಿತ ಮುಖಂಡರಾದ ಮಾಜಿ ಶಾಸಕ ರಾಜು ಅಲಗೂರ್ ಹಾಗೂ ಅಲ್ಪಸಂಖ್ಯಾತ ಮುಖಂಡರಾದ ಹಮೀದ್ ಮುಸ್ರಫ್ ಮುಂತಾದ ಅನೇಕ ಅಹಿಂದ ಮುಖಂಡರುಗಳು ಭಾಗವಹಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments