ದಾವಣಗೆರೆ:ಶ್ರೀ ವಿನಯಕುಮಾರ್ ಜಿ.ಬಿ. ಅಭಿಮಾನಿ ಬಳಗ ಕಕ್ಕರಗೊಳ್ಳ, ದಾವಣಗೆರೆ ಇವರು “ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ” ಯವರ ಜನ್ಮದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ವೀಲ್ ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಸಮಾರಂಭ ವನ್ನು ದಾವಣಗೆರೆಯ ಶ್ರೀ ಅಭಿನವ ರೇಣುಕಾಮಂದಿರದಲ್ಲಿ ಆಯೋಜಿಸಿದ್ದರು.ಈ ಸಮಾರಂಭದ ಅಧ್ಯಕ್ಷತೆಯನ್ನು ದಾವಣಗೆರೆ ಲೋಕಸಭೆ ಕ್ಷೇತ್ರದ ಪ್ರಭಲ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾದ ಇನ್ಸೈಟ್ಸ್ ಐ.ಎ.ಎಸ್ ಸಂಸ್ಥಾಪಕ ನಿರ್ಧೇಶಕರಾದ ಶ್ರೀ ಜಿ.ಬಿ. ವಿನಯ್ ಕುಮಾರ್ ಅವರು ವಹಿಸಿದ್ದರು.
ದಿವ್ಯ ಸಾನಿಧ್ಯ ಪೂಜ್ಯಶ್ರಿ ಡಾ. ಪಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ ಮತ್ತು ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಕನಕ ಗುರಪೀಠ, ಶಾಖಾಮಠ ಹೊಸದುರ್ಗ ಇವರು ಮಾತಾನಾಡಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜೀಕಿಯ ರಂಗದಲ್ಲಿ ಬರಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅದರಲ್ಲೂ ವಿಶೇಷವಾಗಿ ಗ್ರಾಮೀಣಭಾದ ನೂರಾರು ವಿಕಲಚೇತನರು ಸಲಕರಣೆಗಳನ್ನು ಪಡೆದು ಧನ್ಯತಾಭಾವದಿಂದ ಹರ್ಷಚಕಿತರಾದರು.
ಚನ್ನಗಿರಿ,ಜಗಳೂರು,ಮಾಯಕೊಂಡ,ಹರಿಹರ,ಹೊನ್ನಾಳಿ ಭಾಗಗಳಿಂದಲೂ ಹೆಚ್ಚು ಸಾರ್ವಜನಿಕರೂ ಭಾಗವಹಿದ್ದರು.ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿಕಲ ಚೇತನರು ಹಾಗೂ ಹಿರಿಯರಿಗೆ ಸಲಕರಣೆಗಳನ್ನು ನೀಡಿ ಶಾಲು ಹಾರ ಹಾಕಿ ಸನ್ಮಾನಿಸಿದ್ದು ವಿಶೇಷವಾಗಿತ್ತು.ಇದು ಕೊನೆಯದಲ್ಲಾ ಪ್ರಾರಂಭಮಾತ್ರ.ಯಾರಿಗಾದರೂ ಸಲಕರಣೆಗಳು ಸಿಗದಿದ್ದರೆ ಅಥವಾ ಬೇಕಾಗಿದ್ದರೆ ನನ್ನ ಮನೆಗೆ ಕರೆದು ಕಸಲಕರಣೆ ಕೊಡ್ತೆನೆ.ಎಂದು ಹೇಳಿ ಮೋಬೈಲ್ ನಂಬರನ್ನೂ ಕೂಡಾ ಸಭೆಯಲ್ಲಿ ಹೇಳಿದರು. ಮತ್ತು ಇನ್ನಿತರ ಸ್ವಾಮೀಜಿಗಳು ಮಾತನಾಡಿ ಯುವ ನಾಯಕ ವಿನಯ್ ಕುಮಾರ್ ಜಿ ಬಿ ರವರಂತಹ ಉತ್ತಮ ವಿದ್ಯೆಯನ್ನು ಹೊಂದಿರುವಂತಹ ಯುವಕರು ರಾಜಿಕಿಯದಲ್ಲಿ ಬರಬೇಕು ಎಂದು ಎಲ್ಲಾ ಸ್ವಾಮಿಗಳು ಆಶಿಸಿದರು.