ದಾವಣಗೆರೆ:ದಿನಾಂಕ 02-01-2024 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆಯ ಸಮಾಜಶಾಸ್ತ್ರ ವಿಭಾಗವು ನಾಡೋಜ ಪ್ರೊ. ಪಾರ್ವತಮ್ಮ ಸಮಾಜಶಾಸ್ತ್ರ ಅಧ್ಯಯನ ವೇದಿಕೆ ಯನ್ನು ಪ್ರಾರಂಭಿಸಿತು. ಈ ವೇದಿಕೆಯನ್ನು ಉದ್ಘಾಟಿಸಿದ ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಶ್ಯಾಗಲ ಶಿವರುದ್ರಮ್ಮ ಚಾರಿಟೇಬಲ್ ಟ್ರಸ್ಟ್ ನ ಧರ್ಮದರ್ಶಿಗಳು ಆದ ಡಾ. ಕಾಳಚೆನ್ನೆಗೌಡನವರು ಮಾತನಾಡುತ್ತಾ, ಪ್ರೊಫೆಸರ್ ಪಾರ್ವತಮ್ಮನವರು ಸಮಾಜಶಾಸ್ತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು ಹಾಗೂ ಇದೇ ಸಂದರ್ಭದಲ್ಲಿ ಪಾರ್ವತಮ್ಮ ನವರು ಬರೆದಿರುವ ಕೆಲವು ಗ್ರಂಥಗಳನ್ನು ವಿಭಾಗಕ್ಕೆ ಕೊಡುಗೆಯಾಗಿ ನೀಡಿದರು. ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೊನ್ನಾಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಧನಂಜಯ ಬಿಜಿ. ಯವರು ಮಾತನಾಡುತ್ತಾ ಸಾಧನೆಗೆ ಯಾವ ಜಾತಿಯು ಅಡ್ಡಿ ಬರಲಾರದು ಸಾಧಿಸಬೇಕೆಂಬ ಛಲ ಮುಖ್ಯ ಅದನ್ನು ನಾವು ಪ್ರೊ. ಪಾರ್ವತಮ್ಮನವರಲ್ಲಿ ಗಮನಿಸಬಹುದು ಎಂದು ತಿಳಿಸುತ್ತಾ ಸಂಶೋಧನಾ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಎ ಆರ್ ಜಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಅಣ್ಣಯ್ಯ, ಎಸ್ ಬಿ ಸಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ. ಮಂಜುನಾಥ್ ಕೆ ಎಂ, ದಾವಣಗೆರೆ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಪ್ರದೀಪ್ ರವರು, ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾದೇವಿ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ದಾದಾಪೀರ್ ಬಿ ಸಿ ರವರು ವಹಿಸಿಕೊಂಡಿದ್ದರು. ಅಂತಿಮ ಬಿಎ ವಿದ್ಯಾರ್ಥಿಯಾದ ಸೈಯದ್ ನದೀಮ್ ಪ್ರಾರ್ಥಿಸಿದರು. ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಲತಾ ಎಸ್ ಎಂ ಸ್ವಾಗತಿಸಿದರು. ವಿಭಾಗ ಮುಖ್ಯಸ್ಥರಾದ ಶಿವಣ್ಣ ಎಚ್ಎಸ್ ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಗೂ ಡಾ. ಸುರೇಶ್ ಹೆಚ್ಎನ್ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಂತಿಮ ಬಿಎ ವಿದ್ಯಾರ್ಥಿ ಸುದೀಪ್ ಎಚ್ ಈ ನಡೆಸಿಕೊಟ್ಟರು.