Saturday, December 21, 2024
Homeಸಂಸ್ಕೃತಿಇಡೀ ರಾಜ್ಯದ ತಳಸಮುದಾಯದ ಸ್ವಾಭಿಮಾನದ ಸಂಕೇತ. ಹೊಸದುರ್ಗ ಕಾಗಿನೆಲೆ ಶಾಖಾ ಮಠ ಶ್ರೀಗಳು.

ಇಡೀ ರಾಜ್ಯದ ತಳಸಮುದಾಯದ ಸ್ವಾಭಿಮಾನದ ಸಂಕೇತ. ಹೊಸದುರ್ಗ ಕಾಗಿನೆಲೆ ಶಾಖಾ ಮಠ ಶ್ರೀಗಳು.

ದಾವಣಗೆರೆ ನ.16
ಕಾಗಿನೆಲೆ ಕನಕ ಗುರು ಪೀಠದ ಹೊಸದುರ್ಗ ಶಾಖ ಮಠ ಕೆಲ್ಲೂಡ್ ಈ ಬಾರಿ ನಡೆಯುತ್ತಿರುವ ಏಳನೇ ಲಕ್ಷ ದೀಪೋತ್ಸವ, ವಿಶಾಲ ಮಠದ ಅವರಣದಲ್ಲಿ ನಿರ್ಮಾಣಗೊಡುತ್ತಿರುವ ಶ್ರೀಗಳ ಸುಸಜ್ಜಿತ ಮಠ, ಶೈಕ್ಷಣಿಕ ಕಟ್ಟಡಗಳು, ಏಷ್ಯಾದಲ್ಲಿ ಅತ್ಯಂತ ಬೃಹತ್ ಎತ್ತರದ 37 ಅಡಿಯ ಕನಕ ಶಿ ಲಾಮೂರ್ತಿ ಸೇರಿದಂತೆ ಬೃಹತ್ ಬೃಂದಾವನ ಇಂಥ ಅದ್ಭುತ ಪೂರ್ವ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳಿಗೆ ನಿತ್ಯವೂ ಅನ್ನದಾನ ದಾಸೋಹಕ್ಕೆ ಇಡೀ ದಾವಣಗೆರೆ ಜಿಲ್ಲೆಯ ಭಕ್ತರು ದೇಣಿಗೆ ನೀಡುತ್ತಿದ್ದು ಅದರಂತೆ ದಾವಣಗೆರೆ ನಗರದ ಭಕ್ತರು ಕೂಡ 130 ಪಾಕೆಟಿಗಳಿ ಗೂ ಕ್ಕಿಂತಲೂ ಹೆಚ್ಚು ಅಕ್ಕಿಯನ್ನು ಇಂದು ಶ್ರೀಗಳಿಗೆ ಸಮರ್ಪಣೆ ಮಾಡಿದರು.
ನಗರದ ದಾವಣಗೆರೆ ಜಿಲ್ಲಾ ವಿದ್ಯಾ ವರ್ಧಕ ಸಂಘದ ಬಯಲು ಸಭಾಂಗಣದಲ್ಲಿ
ದಾವಣಗೆರೆ ಜಿಲ್ಲೆಯ ಕುರುಬ ಸಮಾಜ ಸೇರಿದಂತೆ ವಿದ್ಯಾವರ್ಧಕ ಸಂಘ ಸದಸ್ಯರುಗಳು ಹಾಲುಮತ ಮಹಾಸಭಾ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ, ಸೇರಿದಂತೆ ಕುರುಬ ಸಮಾಜದ ವಿವಿಧ ಸಂಘಟನೆಗಳ ಭಕ್ತರು, ನೌಕರರು ಉದ್ಯಮಿಗಳು ದಾವಣಗೆರೆ ಸುತ್ತಮುತ್ತಲಿನ ಗ್ರಾಮಗಳ ರೈತರು ಸೇರಿದಂತೆ ಪಾಲ್ಗೊಂಡು ಶ್ರೀಗಳಿಗೆ ಭಕ್ತಿಪೂರಕವಾಗಿ ಅಕ್ಕಿ ಸಮರ್ಪಣೆ ಮಾಡಿದ್ದು ವಿಶೇಷ ಎನ್ನಬಹುದು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಶ್ರೀ ಈಶ್ವರಾನಂದ ಪುರಿ ಶ್ರೀಗಳು
ಮಠ ಮತ್ತು ಕಾಗಿನೆಲೆ ಗುರುಪೀಠ ಇಡೀ ಈ ಭಾಗದ
ಭಕ್ತಿ ಪ್ರೇಮದ ಸಂಕೇತ ಒಟ್ಟಾರೆ ನಮ್ಮ ತಳ ಸಮುದಾಯದ ಹಿಂದುಳಿದ ವರ್ಗದ ಸ್ವಾಭಿಮಾನದ ಸಂಕೇತವು ಕೂಡ, ಭಕ್ತರು ಇದ್ದರೆ ಗುರುಪೀಠಗಳು,
ಭಕ್ತರ ನೀಡುವ ಪ್ರತಿಯೊಂದು ಪ್ರೀತಿ ಪ್ರೇಮ, ಸಂಘಟಿತ ಒಗ್ಗೂಡಿಕೆಯ ಸಮಾಜದ ಶೈಕ್ಷಣಿಕ ಆರ್ಥಿಕ ಸಾಂಸ್ಕೃತಿಕ ಸಾಮಾಜಿಕ ರಾಜಕೀಯ
ಶಕ್ತಿ ಕೇಂದ್ರವೂ ಕೂಡ ಆಗಬೇಕಾದಂತಹ ತುರ್ತು ಅಗತ್ಯ ಅಗತ್ಯವಿದೆ ಎಂದು ಶ್ರೀಗಳು ಆಶಿಸಿದರು.
ಇತ್ತೀಚಿನ ವರ್ಷಗಳ ಹಿಂದೆ ಬೀರೇಂದ್ರ ಶ್ರೀಗಳು ಆಶಿಸಿದಂತೆ ರಾಜ್ಯದ 50 ಲಕ್ಷಕ್ಕೂ ಹೆಚ್ಚು ಶೋಷಿತ ಹಿಂದುಳಿದ ಕುರುಬ ಸಮುದಾಯ ಇಡೀ ದೇಶದ ಇತರೆ ವರ್ಗದ ಸಮುದಾಯಗಳ ಜೊತೆ
ಸೌಹಾರ್ದ ಸಂಘಟನೆ ಒಗ್ಗೂಡಿಕೆ ಸಹಬಾಳ್ವೆಯಿಂದ ತಲೆಯೆತ್ತಿ ನಿಲ್ಲಬೇಕಾಗಿದೆ,
ತಮ್ಮಲಿನ ಸಂಕಚಿತ ಭಾವನೆಗಳನ್ನು ತೊಡೆದು ಹಾಕಿ
ನಾವೆಲ್ಲಾ ಗುರುಪೀಠದ ಶ್ರೇಷ್ಠತೆಯ ಸ್ವಾಭಿಮಾನದ ಭಕ್ತರು ಎಂದು ಆತ್ಮಭಿಮಾನದಿಂದ ತಲೆಹತ್ತಿ ನಿಲ್ಲಿ ಎಂದು ಕರೆ ನೀಡಿದರು.
ಇತ್ತೀಚೆಗೆ ಕುರುಬ ಸಮಾಜದ ಮೇಲೆ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆ, ಸಾಮಾಜಿಕ ಶೋಷಣೆ, ಶೈಕ್ಷಣಿಕವಾಗಿಯೂ ಕೂಡ ಮುದ್ದು ಗಿ ತಲೆ ಕೆಡುವಿ ತಲೆ ಕೊಡವಿ ಎದ್ದು ನಿಲ್ಲಬೇಕು
ಸ್ವಾತಂತ್ರ್ಯ ಸ್ವಾಭಿಮಾನಿ,ಸಂಗೊಳ್ಳಿ ಆಶಯಗಳು ಈಡೇರಬೇಕಾಗಿದೆ, ಅದಕ್ಕಾಗಿ ನೀವೆಲ್ಲ ಒಗ್ಗೂಡಿ ಗುರು ಪೀಠಗಳನ್ನು ಗಟ್ಟಿಗೊಳಿಸಬೇಕು,
ಅದಕ್ಕಿಂತ ಮೊದಲು ನೀವು ಸಂಕ್ಷಿಪ್ತ ಭಾವನೆಗಳನ್ನು ತೊಡೆದು ಹಾಕಿ ಗಟ್ಟಿಯಾಗಿ
ವಿಶಾಲ ನಿರ್ಲಪ್ತ ಭಾವನೆ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು,

ಈ ಸಂದರ್ಭದಲ್ಲಿ ದಾವಣಗೆರೆ ನಗರ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,
ಮಾಜಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರುಪಾಕ್ಷಪ್ಪ, ಲೋಕಿಕೆರೆ ಸಿದ್ದಪ್ಪ, ಸತೀಶ್ ಕೊಳೆನಹಳ್ಳಿ, ಸಿದ್ದಲಿಂಗಪ್ಪ, ಹಲವರು ಮಾತನಾಡಿದರು,
ಮಾಜಿನಗರ ಸಭಾ ಸದಸ್ಯ ಎಲ್ಐಸಿ ನಿಂಗಣ್ಣ, ಕನಕ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪರಶುರಾಮ್, ದಾವಣಗೆರೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂದುವಾಡ ಗಣೇಶಪ್ಪ, ಕಾರ್ಯದರ್ಶಿ ದೀಪಕ್ ಜೋಗಪ್ಪನವರ್, ಮಾಧ್ಯಮ ರಕ್ತ ಪ್ರಶಸ್ತಿ ವಿಜೇತ ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ, ಹದಡಿ ಮಾಂತೇಶ್ ತ್ಯಾವಣಗಿ ಮಹಾಂತೇಶ್, ಕೊಗನೂರು ಮಂಜು ಎಕ್ಕನಹಳ್ಳಿ ದ್ಯಾಮಣ್ಣ
ಮಹಾನಗರ ಪಾಲಿಕೆ ಪ್ರಸನ್ನ ಕುಮಾರ್, ಅಣಬೆರು ಶಿವಮೂರ್ತಿ, ಬಟ್ಟಲಕಟ್ಟೆ ಪರಶುರಾಮ್, ಶಿಕ್ಷಕ ಲೋಕಿಕೆರೆ ಶಂಕರ್ ಮೂರ್ತಿ,
ಹದಡಿ ಬಸವರಾಜ್, ನಿರ್ವತ ಶಿಕ್ಷಕ ಶಿವಣ್ಣ, ಮಾಜಿನಗರ ಸಭಾಧ್ಯಕ್ಷ ತಕ್ಕಡಿ ಮಂಜು ಮಂಜುನಾಥ್, ಆನೇಕಲ್ ವೀರಣ್ಣ, ಷಣ್ಮುಖಪ್ಪ,ಎಚ್ ವೈ, ಶಶಿಧರ್,
ದೀಟೂರು ಚಂದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments