ದಾವಣಗೆರೆ:ದಿನಾಂಕ:3.7.23ರ ಸೋಮವಾರ ಬೆಳಗ್ಗೆ 10.30 ಕ್ಕೆ ಬಿ ಐ ಈ ಟಿ ಕಾಲೇಜಿನ ಎದುರು, ಶಾಮನೂರು ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿ ಸಂಘ, ಎನ್ಎಸ್ಎಸ್, ರೆಡ್ ಕ್ರಾಸ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ 'ಅಲ್ವಿದಾ' ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ ಸಿ ಶೇತ ಸನದಿ ಯವರು ಆಗಮಿಸಲಿದ್ದಾರೆ. ಪ್ರಾಚಾರ್ಯ ರಾಜಶೇಖರ್ ಕೆ. ಡೀನ್ ಸ್ವಾಮಿ, ಕಾಲೇಜಿನ ಅಧ್ಯಕ್ಷ ನಾಗರಾಜ್ ಶೆಟ್ಟಿ, ರೂಪ ಹಾಗೂ ನಾಗರಾಜ್ ರಾವ್ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
📑 ಪವಿತ್ರ ಪ್ರಜಾ ಸಾರ್ವಜನಿಕ ಹಿತಾಸಕ್ತಿಯ ವಿಚಾರಧಾರೆ ಅವತರಿಣಿಕೆಗಳು ಪ್ರಜೆಗಳ ದೃಷ್ಟಿಕೋನಕ್ಕೆ ಮಾರ್ಗದರ್ಶಿಯಾಗಿ ಡಿಜಿಟಲ್ ಹಾಗೂ ಮುದ್ರಣ ಮಾಧ್ಯಮದ ದಿಗ್ಗಜವಾಗಿ ಬೆಳೆಯಲಿ ಬೆಳಗಲಿ 🔹