80ರ ದಶಕದ ಘಟನೆ ನಾನಾಗ ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದೆ, ನಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಜಮೀಲ್ ಮಿಶ್ರಿಕೊಟಿ ಎಂಬ ಯುವಕನು ಕೆಲಸ ಮಾಡುತಿದ್ದ ಅವನು ನಾನು ಆತ್ಮೀಯ ಸ್ನೆಹಿತರು ಅಂದು ಬಕ್ರೀದ್ ಹಬ್ಬದ ದಿನ ಗೆಳೆಯ ಜಮೀಲ್ ಹಿಂದಿನ ದಿನವೆ ನಾಳೆ ಹಬ್ಬಕ್ಕೆ ಊಟಕ್ಕೆ ಅವ್ಹಾನಿಸಿದ್ದ ಸರಿ ಅಂದು ಬೇಗ ಎದ್ದು ಸ್ನಾನ ಮಾಡಿ ಇಸ್ತ್ರಿ ಮಾಡಿದ ಬಟ್ಟೆ ಇನ್ ಮಾಡಿ ಮೆಲೆ ಬೆಲ್ಟ ಹಾಕಿ ಭೂಟುಗಳನ್ನ ಧರಿಸಿ ಅವನ ಮನೆಯಡೆಗೆ ಹೊದೆ ಆಗ ಅವನು ಇದಗಾಕ್ಕೆ ನಮಾಜಿಗೆ ಹೋಗುವ ತಯ್ಯಾರಿಯಲ್ಲಿ ಇದ್ದ. ನನ್ನನ್ನು ನೋಡಿ ಖುಸಿಯಿಂದ ಸ್ವಾಗತಿಸಿದನು. " ದೊಸ್ತ ನಮಾಜಿಗೆ ಈದಗಾದ ಕಡೆಗೆ ಹೊರಟಿದ್ದೆನೆ ನಾನು ಬರುವವರೆಗೂ ಮನೆಯಲ್ಲಿಯೆ ಇರ್ತಿಯಾ" ಅಂದನು ಅಗ ನಾನು ಮನೆಯಲ್ಲಿ ಕುಳಿತು ಎನು ಮಾಡುವದು ಎಂದು ಅಂದುಕೊಂಡು " ಇಲ್ಲ ಇಲ್ ನಾನು ಇದಗಾಕ್ಕೆ ಬರ್ತೆನೆ " ಎಂದೆ ನನಗೂ ಅಲ್ಲಿ ನಡೆಯುವ ಕಾರ್ಯಕ್ರಮ ನೋಡುವ ಕುತೂಹಲ " ಸರಿ ನಡಿ ಹೊಗೊಣ" ಎಂದು ಕರೆದು ಕೊಂಡು ನಡೆದ ಇದಗಾದ ದಿರಿ ಯುದ್ದಕ್ಕು ಜನವೋ ಜನ ನಾನು ಇನ್ ಮಾಡಿದ ಶರ್ಟ ಹೊರಗೆ ಬಿಡುವಂತೆ ಹೇಳಿದ ನಾನು ಹಾಗೆ ಮಾಡಿದೆ. ನಂತರ ದಾರಿಯುದ್ದಕ್ಕು ಅಲ್ಲಲ್ಲಿ ಅತ್ತಾರ ಎಣ್ಣೆ(ಸುಹಾಸಿತ ತೈಲ ) ಮಾರಾಟಗಾರರು ಕುಳಿತಿದ್ದರು ಅವರಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿ ಕಣ್ಣಿಗೆ ಸುರ್ಮಾ(ಕಣ್ಣಿಗೆ ಹಚ್ಚುವ ಒಂದು ರೀತಿಯ ಕಾಡಿಗೆ) ತಾನು ಹಚ್ಚಿಸಿಕೊಂಡಿದ್ದು ಅಲ್ಲದೆ ನನಗೂ ಹಚ್ಚಿಸಿದ ಕಿವಯಲ್ಲಿ ಸುಗಂಧ ಹಚ್ಚಿದ ಅರಳಿ ಇಟ್ಟುಕೊಂಡ ಹಾಗೆ ನನಗೂ ಕೊಡಿಸಿದ ಅಲ್ಲದೆ ಮೈಮೆಲಿನ ಬಟ್ಟೆಗೂ ಶುಗಂಧ ತೈಲ ಪೊಸಿಸಿದ ಸರಿ ಇಬ್ಬರೂ ಇದಗಾದೆಡೆಗೆ ಹೊಟೆವು ಇದಗಾದ ಒಂದು ಪಕ್ಕದಲ್ಲಿ ಹತ್ತಾರು ನೀರು ತುಂಬಿದ ಪಿಪಾಯಿಗಳು ಹಾಗೂ ಕೈ ಕಾಲು ಮುಖ ತುಳೆಯಲು ಮಣ್ಣಿನ ಮಡಕೆಗಳು ಇಡಲಗಿತ್ತು ನಮಾಜು ಮಾಡುವ ಮುಂಚೆ ಕೈಕಾಲು ಮುಖ ತೊಳೆದುಕೊಳ್ಳಬೇಕು ಅದಕ್ಕೆ ಅವರು ' ವಜು ' ಎನ್ನತ್ತಾರೆ ಜಮಿಲ್ ಕೆಳಿದ " ನಮಾಜು ಮಾಡ್ತಿಯಾ" ಅಂದ ಅದಕ್ಕೆ " ನನಗೆ ಬರೊದಿಲ್ಲಪ ನೀನೆ ಮಾಡು " ಎಂದೆ ಅದಕ್ಕೆ ಅವನೆಂದ " ಬಹಳ ಸರಳ ಅದಾ , ಮುಂದಿನವರು ಹೆಗೆ ಮಾಡುತ್ತಾರೊ ಹಾಗೆ ಮಾಡವದು" ಎಂದ ನನು ನಮ್ಮ ತಾತಾ ಭೀಮರಾಯ ಮುತ್ತ್ಯಾ ಅಂದರೆ ನಮ್ಮ ತಾಯಿಯ ತಂದೆ ಪ್ರತಿ ದಿನ ಐದು ಹೊತ್ತು ನಮಾಜ ಮಾಡುವದನ್ನು ಸಮಿಪದಿಂದಲೆ ನೊಡುತ್ತಿದ್ದೆನು ಹಾಗಾಗಿ ನಾನು " ಆಗಲಿ ನೊಡೊಣ ನಾನು ಮಾಡುತ್ತೆನೆ " ಎಂದೆ ಹೆಗಿದ್ದರು ಮುಂದಿನವರು ನಮಾಜ ಮಾಡ್ತಾರೆ ಅವರನ್ನು ನೋಡಿ ನಾನು ಮಾಡಿದರಾಯಿತು ಎಂಬ ಧೈರ್ಯದಿಂದ ತಯ್ಯಾರ ಆದೆನು "ವಜು ಮಾಡುವದು ಹೆಗೆಂದು ಹೇಳಬೇಕು ನೊಡೊ* ಎಂದೆ "ನಾನು ನಿನ್ನ ಪಕ್ಕದಲ್ಲಿಯೆ ಕುಳಿತು ವಜು ಮಾಡುತ್ತಲಿರುತ್ತೆ ನನ್ನ ನೊಡಿ ನಿನು ಮಾಡಿದರಾಯ್ತಪ" ಎಂದ . ಸರಿ ಇಬ್ಬರು ಒಂದೊಂದು ಸಾಲಿನಲ್ಲಿ ನಿಂತೆವು ಸರತಿ ಸಾಲಿನಲ್ಲಿಯೆ ನಿಂತು ನನ್ನ ಮುಂದಿನವರ ವಜು ಹೆಗೆ ಮಾಡುತ್ತರೆ ಎಂದು ನೊಡತಾ ಸಾಗಿದೆನು ಅಸ್ಟರಲ್ಲಿ ನಾವು ನಿಂತಸಾಲಿನಲ್ಲಿ ಸ್ವಲ್ಪ ಹಿಂದೆಮುಂದೆ ಆಗಿ ನನ್ನ ಪಾಳಿ (ಸರತಿ) ಬೇಗ ಬಂದುಬಿಟ್ಟಿತು ನೀರಿನ ಮಡಿಕೆ ನನ್ನ ಕೈಗೆ ಬಂತು ಮಡಿಕೆ ಕೈಗೆ ತೆಗೆದು ಕೊಂಡು ಗೆಳೆಯ ಜಮಿಲನೆಡೆಗೆ ನೊಡಿದೆ ಇಬ್ಬರಾದ ನಂತರ ಅವನ ಸರತಿ ಹಿಗಾಗಿ ನನಗೆ ಸ್ವಲ್ಪ ಕಸಿವಿಸಿ ಅಯಿತು ನನ್ನ ಹಿಂದೆ ಒಬ್ಬ ವಯೊವ್ರದ್ದ ನಿಂತಿದ್ದಾನೇ ಗೆಳೆಯ ಜಮೀಲನ ಪಾಳಿ ಬರುವವರೆಗೆ ಕಾಯ್ದರಾಯಿತು ಎಂದು ಕೊಂಡೆ ಆದರೆ ನನ್ನ ಹಿಂದೆ ನಿಂತಿದ್ದ ವೃದ್ದ ಅವಸರಿಸಲಾರಂಭಿಸಿದ ಆದರೆ ನಾನು ವೃದ್ದನಿಗೆ ನೀನೇ ಮೊದಲು ವಜು ಮಾಡು ನಾನು ನಂತರ ಮಾಡತ್ತೆನೆ ಎಂದರೂ ಆ ವೃದ್ದ ಕೇಳ್ತಾಇಲ್ಲ " ಅಲ್ಲಾನೆ ತುಝೆ ಪಹಿಲಾ ವಜು ಕರನೆ ಬುಲಾಯಾ ಇಸಿಲಿಯೇ ತು ಪಹಿಲಾ ವಜು ಕರ್" (ದೇವರು ನಿನಗೆ ಮೊದಲು ವಜು ಮಾಡಿಕೊಳ್ಳಲು ಕರದಿದ್ದಾನೆ ಅದಕ್ಕೆ ನೀನು ಮೊದಲು ವಜು ಮಾಡು) ಎನ್ನಬೇಕೆ ಮತ್ತಷ್ಟು ಗಾಬರಿಗೊಂಡು ವಜು ಮಾಡಿಕೊಳ್ಳಲು ಹೋದೆನು ಕೈಕಾಲು ಮುಖ ಮೂಗು, ಕಣ್ಣು, ಕಿವಿ ಬಾಯಿ ತೋಳೆದುಕೊಳ್ಳಲು ಅದರದೆ ಆದ ಒಂದು ಪದ್ದತಿ ಇದೆ ಆದರೆ ನನಗೆ ತಿಳಿಯದೆ ಹಿಂದಿನದು ಮುಂದೆ , ಮುಂದಿನದು ಹಿಂದೆ ಮಾಡುತ್ತಾ ಮುಖ ತೊಳೆಯಲು ಪ್ರಾರಂಭಿಸಿದೆ . ತಪ್ಪು ತಫ್ಪಾದ ನನ್ನ ಕ್ರಮವನ್ನು ಕಂಡ ನನ್ನ ಹಿಂದೆ ಪಾಲಿಗೆ ನಿಂತಿದ್ದ ವೃದ್ದ ಕೆಂಡಮಂಡಲನಾದ ಒಂದೆ ಸವನೆ ಬಯ್ಯಲು ಪ್ರಾರಂಭಸಿದ "ಅರೆ ಸಾಲೆ ಇತನಾ ಬಡಾ ಹುವ್ವಾಹೈ ತುಝೆ ವಜು ಕರನೆ ನಹಿ ಆತಾ ಹೈ. ಮುಹಪೆ ದಾಡಿ ಔರ್ ಮುಂಚ ಆಯಾ ಹೈ ನಮಾಜ ಪಡ್ತಾ ನಹಿ ಕುಚ್ಚ ನಹಿ , ಖಾಲಿ ಪಿರ್ತೆ ಖೆಲ್ತೆ ಜಾತೆ ಮಗರ ಅಲ್ಲಾಕಾ ದುವಾ ಮಂಗನೆ ಆತಾನಹಿ " ಅಂತಾ ತುಂಬಾ ಬಯ್ಯಲು ಸುರುವಿಟ್ಟುಕೊಂಡ .ನಾನೊ ನಾಚಿಕೆ ಅವಮಾನದಿಂದ ಕುಗ್ಗಿ ಹೊದೆ ಹಿಂದಕ್ಕೆ ತಿರುಗಿ ಗೆಳೆಯ ಜಮೀಲ್ ನೆಡೆಗೆ ನೊಡಿದರೆ ಅವನೊ ಮುಸಿ ಮುಸಿ ನಗುತ್ತಿದ್ದಾನೆ . ಮ್ಲಾನನಾಗಿ ನಾನು ಸಣ್ಣದಾಗಿ ನಗಲು ಪ್ರಯತ್ನ ಮಾಡದೆ ಆ ವೃದ್ದ ಮತ್ತಷ್ಟು ಸಿಟ್ಟಗೆ ಬಂದು ಬಯ್ಯುತ್ತಿದಗದಾನೆ ಸುತ್ತಲು ನಿಂತ ಜನ ತಮಾಷೆ ಎಂಬಂತೆ ನೊಡುತ್ತಿದ್ದಾರೆ ಅವರು ನಗುತ್ತಿದ್ದಾರೆ ಆ ವೃದ್ದನೊ ಅವನಿಗೆ ಇನ್ನಷ್ಟು ಪ್ರತ್ಸಾಹ ಸಿಕ್ಕಂತಾಗಿ........ ಮುಂದುವರೆಯುವುದು (ಅಣ್ಣಾರಾಯ ಈಳಗೇರ್).