ಗಾಂಧಿವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಅವರ ಹುಟ್ಟೂರು ಗೊರೂರಿನಲ್ಲಿ ಅರಕಲಗೂಡು ತಾಲೂಕು ಸಾಹಿತ್ಯ ಪರಿಷತ್ತಿನ ವತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಗೊರೂರರನ್ನು ಹತ್ತಿರದಿಂದ ಬಲ್ಲವರಾಗಿರುವ ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡರು ಮೆರವಣಿಗೆ ಜಾಥಾಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನೆಯ ಮುಂಭಾಗದಲ್ಲಿ ಚಾಲನೆ ನೀಡಿದರು.
ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂಜಿಆರ್ ಅರಸು ಅವರು ಧ್ವಜಾರೋಹಣ ನೆರವೇರಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ.ನಂ. ಲೋಕೇಶ್ ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರದೊಂದಿಗೆ ಗೊರೂರಿನ ಪ್ರಮುಖ ಬೀದಿಗಳಲ್ಲಿ ಜರುಗಿದ ಜಾಥಾಕ್ಕೆ ವೀರಗಾಸೆ ಸೇರಿದಂತೆ ಕಲಾತಂಡಗಳು ಗಮನ ಸೆಳೆದವು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೊರೂರರ ಮಗಳು ವಸಂತಿ ಮೂರ್ತಿ (ಕೆನಡಾ) ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದ ನಮ್ಮ ತಂದೆಯವರು ವಿದ್ಯಾಭ್ಯಾಸ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡು ಅನುಭವಿಸಿದ ಬದುಕಿನ ಘಟನೆಗಳನ್ನು, ಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ
ಘಟನೆಯನ್ನು ಮತ್ತು ಗೊರೂರ ವಿನೋದ ಭಾವದ ನಡವಳಿಕೆಗಳ ಬಗ್ಗೆ ವಿವರಿಸಿದರು.
ತಂದೆಯವರ ಜನ್ಮದಿನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ವಗ್ರಾಮದಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಭಾವುಕರಾಗಿ ಮಾತನಾಡಿದರು.
ಅರಕಲಗೂಡು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಂದರೇಶ್ ಡಿ. ಉಡುವೇರೆ ಅವರು ಮಾತನಾಡಿ, ಪುಟ್ಟ ಹಳ್ಳಿ ಗೊರೂರನ್ನು ವಿಶ್ವಮಾನ್ಯ ಮಾಡಿರುವ ಗೊರೂರ ಸಾಧನೆ ಮಹತ್ವದ್ದು. ಹಾಗಾಗಿ ಮುಂದಿನ ವರ್ಷ 120ನೇ ಜನ್ಮದಿನಕ್ಕೆ ಗ್ರಾಮದಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪಿಸುವ ಕೆಲಸ ಆಗಬೇಕಿದೆ. ಶಾಸಕರು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ಸಕಲೇಶಪುರ ಕ್ಷೇತ್ರ ಶಾಸಕರಾದ ಸಿಮೆಂಟ್ ಮಂಜು ಅವರು ಮಾತನಾಡಿ, ಗಾಂಧೀಜಿಯವರ ಅನುಯಾಯಿಯಾಗಿದ್ದ ಗೊರೂರರು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಹೆಸರು ಚಿರಸ್ಥಾಯಿಯಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಪ್ರತಿಮೆ ಸ್ಥಾಪನೆ ನನ್ನ ಕರ್ತವ್ಯ ಎಂದು ಭಾವಿಸಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಶಸ್ತಿ ಪ್ರಧಾನ : ಎನ್. ಎಲ್. ಚನ್ನೇಗೌಡರಿಗೆ ಗೊರೂರು ಸಂಪತ್ ಅಯ್ಯಂಗಾರ್ ಪ್ರಶಸ್ತಿ, ಗೊರೂರು ಪಂಕಜ ಅವರಿಗೆ ಡಾ. ಕಿ.ರಂ.ನಾಗರಾಜು ಪ್ರಶಸ್ತಿ, ಸುಂದರೇಶ್ ಡಿ. ಉಡುವೇರೆ ಅವರಿಗೆ ಸಾರ್ವಭೌಮ ಡಾ.ಅ.ನ.ಕೃ ಪ್ರಶಸ್ತಿ, ಬರಾಳು ಶಿವರಾಮು ಅವರಿಗೆ ಎಸ್. ವಿ. ರಂಗಣ್ಣ ಪ್ರಶಸ್ತಿ, ಗೊರೂರು ಅನಂತರಾಜು ಅವರಿಗೆ ಎಸ್.ಕೆ.ಖರೀಮ್ ಖಾನ್ ಪ್ರಶಸ್ತಿ, ಸೌಮ್ಯಶ್ರೀ ಮತ್ತು ಗೌರಿಶಂಕರ್ ಅವರಗಳಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿಯನ್ನು ಶಾಸಕರಾದ ಸಿಮೆಂಟ್ ಮಂಜು ಅವರು ಪ್ರದಾನ ಮಾಡಿದರು.
ಸಾಹಿತಿ ಸೌಮ್ಯಶ್ರೀ ಅವರು “ನಾ ಕಂಡಂತೆ ಗೊರೂರು” ಕುರಿತು ಗೊರೂರ ಬದುಕು ಬರಹಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಿದರು.
ಗೊರೂರು ಪಂಕಜ ಸ್ವಾಗತ ಭಾಷಣ ಮಾಡಿದರು. ಶಿಕ್ಷಕ ಮಂಜು ಅವರು ಎಲ್ಲರನ್ನು ವಂದಿಸಿದರು. ಶಿಕ್ಷಕಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಕಮಲಾ ನರಸಿಂಹ ವಹಿಸಿದ್ದರು. 50ಕ್ಕೂ ಹೆಚ್ಚು ಕವಿಗಳು ಕುರಿತು ಕವಿತೆಗಳನ್ನು ವಾಚಿಸಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲೋಹಿತ್, ಚುಟುಕು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ದ್ರಾಕ್ಷಾಯಿಣಿ ಮುರುಗನ್,
ಮಳಲಿ ಹರೀಶ್ ಕುಮಾರ್, ಪ್ರೇಮಾ ಮಂಜುನಾಥ್, ಡಾ. ಶ್ರೀನಿವಾಸ್, ರತ್ನಹಾಲಪ್ಪ ಗೌಡ, ಭೋಜರಾಜು, ಗೊರೂರು ಅನಂತರಾಜು, ಲೇಖಕ ರಾಜು, ರೇಣುಕಮ್ಮ ಗುರುಸ್ವಾಮಿ, ನಾಯಕರಹಳ್ಳಿ ಮಂಜೇಗೌಡ, ಬಂಗಾರಿ ಗೌಡ, ಮಾಜಿ ಸೈನಿಕರಾದ ಚಂದ್ರಶೇಖರ್, ಜಿಟಿ ಮಂಜುನಾಥ್, ವಿನಯ್ ಗುರುಸ್ವಾಮಿ, ವೇದಮೂರ್ತಿ, ಹೇಮರಾಜು, ನಿತಿನ್, ಪದ್ಮ ಮೂರ್ತಿ, ಪ್ರೇಮ ಮಂಜುನಾಥ್, ವಸಂತ ಹುಲ್ಲೇರ, ಗ್ರಾಮಸ್ಥರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಸ್ತ್ರೀಶಕ್ತಿ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸರ್ಕಾರಿ ಪ್ರೌಢಶಾಲೆ, ಹೆಚ್.ಆರ್.ಪಿ. ಶಾಲೆ, ವಿವೇಕಾನಂದ ಶಾಲೆಯ ಮಕ್ಕಳು ಗೊರೂರರ ಕುರಿತ ನೃತ್ಯ, ನಾಟಕ, ಗಾಯನ ಮೆಚ್ಚುಗೆಗೆ ಪಾತ್ರವಾಯಿತು.