ಮೂಡಲಗಿ: ಆ,05-ನಗರದ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೋವಿ ಜೋಳದ ರಾಶಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶ್ರೀಗಳು ಚಾಲನೆ ಕೊಟ್ಟರು. ಹಳ್ಳಿಯ ಸೊಗಡಿನ ನೆನಪಿಗೆ ಮರುಕಳಿಸುವ ಕಾರ್ಯಕ್ರಮ ಇದಾಗಿತ್ತು.ಚಕ್ಕಡಿಯಲ್ಲಿ ಮೆರವಣಿಗೆ ಟಗರು,ದತ್ತಿ ಕುಣಿತ ಇನ್ನು ಅನೇಕ ವಾದ್ಯವೃಂದವು ಪಾಲ್ಗೊಂಡಿದ್ದವು.
ಕರ್ನಾಟಕದಲ್ಲಿ ಜಾನಪದ ಹುಟ್ಟಿದೆ ಅಂದು,ಇಂದು ಅದೆ ಜಾನಪದ ನಶಿಸಿ ಹೋಗುತ್ತಿರುವುದು ವಿಪರ್ಯಾಸ.ಕಟ್ಟೆ ಮೇಲೆ ಕುಳಿತ ಕೆಲ ಪ್ರೇಕ್ಷಕರು ಹೇಳುತ್ತಾರೆ ಇಂದು ಬರುವ ಜಾಣರ ಪದ ಅಲ್ಲ,ಕೋಣರಪದ ಅನ್ನುತ್ತಾರೆ.ಅದು ಸತ್ಯ ಅನಿಸುತ್ತದೆ.
ಈ ಕಾರ್ಯಕ್ರಮ 2018 ರಲ್ಲಿ “ಹಳ್ಳಿ ಹಬ್ಬ” ಅಂತ ಆರಂಭಿದ್ದೇವು.ಇದು ಸ್ವತಃ ವಿದ್ಯಾರ್ಥಿಗಳೆ ಅವರ ಸ್ವ ಪ್ರಯತ್ನದಿಂದ ಹಣ ಸಂಗ್ರಹ ಮಾಡಿ ಅತೀ ಉತ್ಸುಕರಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ.ಇದು 5 ನೆಯ ವರ್ಷದ ಕಾರ್ಯಕ್ರಮ. ಭಾರತ ದೇಶದ ಸಂಸ್ಕ್ರತಿ ಉಸಿರಾಡುವುದೆ ಜಾನಪದ ಸೊಗಡಿನಿಂದ.ಭಾರತ ವನ್ನು ಪಾಶ್ಚಿಮಾತ್ಯ ದೇಶಗಳು ಗುರ್ತಿಸುವುದು ನಮ್ಮ ಸಾಂಪ್ರದಾಯಿಕ ಉಡುಗೆ,ತೊಡುಗೆ,ನಮ್ಮ ಆಹಾರ ಪದ್ಧತಿ ಮತ್ತು ನಮ್ಮ ಸಂಸ್ಕೃತಿ ನೋಡಿ ಗೌರವದಿಂದ ಕಾಣುತ್ತಾರೆ ಎಂದು ಪ್ರಾಸ್ತಾವಿಕವಾಗಿ ಸಂಜೀವಕುಮಾರ ಗಾಣಿಗೇರ ಮಾತನಾಡಿದರು.

ಸಾವಿರಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಈ ರೀತಿ ಹಳೆಯ ಸಂಪ್ರದಾಯದಂತೆ ಕಾರ್ಯಕ್ರಮ ಆಯೋಜನೆ ನಾನು ಕಂಡಿಲ್ಲ. ಹಳ್ಳಿಯ ಬೋಜನ ,ವಿದ್ಯಾರ್ಥಿಗಳು/ನಿಯರ,ಗುರುಗಳು/ಗುರುಮಾತೆಯರು ಹಳ್ಳಿಯ ವೇಷ ಭೂಷಣ ಮತ್ತು ವೇದಿಕೆ ಕೂಡಾ ಅದೆ ರೀತಿಯಾಗಿ ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆ ಹಳೆಯ ನೆನಪಿಗೆ ಇಂದು ಕಾರಣ ವಾಗಿದೆ.ದೊಡ್ಡ ಗೌಡರ ಮನೆಗೆ ಬಂದಾಗ ಆಗಿದೆ ನನಗೆ ನಿಮ್ಮೆಲ್ಲರ ವೇಷಭೂಷಣ ನೋಡಿ.ಜಾನಪದ ಮತ್ತು ಜನಪದ ಅಂದ್ರೆ ನಿಮಗೆ ತಿಳಿದಿಲ್ಲ.ನೋಡ್ರಿ ನಮ್ಮ ಜಾನಪದ ಹಿಂದಿನ ನಮ್ಮ ಹಿರಿಯರನ್ನು ನೋಡಿದರೆ ಕೈ ಮುಗಿಬೇಕು ಅನಿಸುತ್ತದೆ.ಕೈ ಮಾಡುವ ಹಾಗೆ ವ್ಯಕ್ತಿ ಇರಬಾರದು,ನೋಡಿದಾಕ್ಷಣ ಕೈಮುಗಿಯು ಹಾಗೆ ಇರಬೇಕು ಅದೇ ಜಾನಪದ.(ಅವರ ವೇಷಭೂಷಣ ಹಾಗೆ ಇರುತ್ತಿತ್ತು).ಇಂದಿನ ಹಾಗೆ ಜಿನ್ಸ ಪ್ಯಾಂಟ್ ಹಾಕಿಕೊಳ್ಳುತ್ತಿರಲಿಲ್ಲ ಅಂದಿನವರು. ಜಾನಪದ ಶೈಲಿಯ ಬೋಜನ ಇಂದು ಮರೆ ಮಾಚುತ್ತಿರುವುದು.ಇಂದು ವಿದೇಶಿ ಆಹಾರಗಳಿಗೆ ಮನಸೋತಿದ್ದೇವೆ.ನಮ್ಮ ಸಂಸ್ಕೃತಿಗೆ ನಾವೇ ಬೆಲೆ ಕೊಡುತ್ತಿಲ್ಲ.ನಮ್ಮ ದೇಶಕ್ಕಾಗಲಿ,ನಮ್ಮ ಮನೆಗೆ ಆಗಲಿ ಸಂಸ್ಕೃತಿ ಬರುವುದು ಹೆಣ್ಣಿನಿಂದ, ಅವಳು ಮಾಡುವ ಅಡುಗೆ ಹಾಗೂ ವೇಷಭೂಷಣದಿಂದ.ಜಾನಪದ/ಹಳ್ಳಿಯ ಅಡುಗೆ ತಿಂದರೆ ಜಗಜಟ್ಟಿ ನೀವು ಆಗುವೀರಿ.ಮಣ್ಣಿನ ಪಾತ್ರೆ,ಬಾಳೆ ಎಲೆ,ಕಂಚು ಹೋದವು ಸ್ಟೀಲ್ ಪಾತ್ರೆ ಬಂತು ಅವು ಇಂದು ಕ್ರಮೇಣ ಮಾಯವಾಗಿ ಪ್ಲಾಸ್ಟಿಕ್ ಪ್ಲೇಟ್ ದಲ್ಲಿ ಊಟ ಮಾಡುತ್ತಿದ್ದೇವೆ.ನಮ್ಮ ಆರೋಗ್ಯ ಚೆನ್ನಾಗಿ ಇರುತ್ತಾ? ಇಂದು ನಿಂತು ಊಟ ಮಾಡುತ್ತಿದ್ದೇವೆ,ಹಿಂದಿನ ದಿನಗಳಲ್ಲಿ ಕುಳಿತು ಊಟ ಮಾಡುತ್ತಿದ್ದೇವು, ಎಷ್ಟು ವ್ಯತ್ಯಾಸ ಅಂದಿಗೂ ಇಂದಿಗೂ.ಶ್ರಮದ ಜೀವನ ಇಲ್ಲ,ಎಲ್ಲವು ವಿದ್ಯುತ್ ಮಯವಾಗಿದೆ. ಬೀಸುವ ಕಲ್ಲು ಎಲ್ಲಿ ಮರೆಯಾದವು ಒಳಕಲ್ಲು ನೆನಪಿನಿಂದ ದೂರಾಗಿ ಬಿಟ್ಟವು ಗ್ರಾಮೀಣ ಆಟಗಳು,ಸೀಮಂತ ಕಾರ್ಯಕ್ರಮದ ಸೋಬಾನೆ ಪದಗಳು,ಗಿ.. ಗೀ..ಗೀ ಪದಗಳು (ಲಾವಣಿಪದ)ಡೊಳ್ಳಿನ ಪದಗಳು ಕೇಳುವವರೆ ಇಲ್ಲ ಇಂದು.ಟಿ.ವಿ ಬಂದು ಸ್ವಲ್ಪ ಹಾಳಾಗಿತ್ತು,ಮೊಬೈಲ್ ಬಂದು ಮತ್ತಷ್ಟು ಕೆಟ್ಟಿತ್ತು ಯುವ ಜನತೆ. ಇಂದು ಎಲ್ಲವೂ ಉಲ್ಟಾ- ಪಲ್ಟಾ ಆಗಿದೆ ವೇಷಭೂಷಣದಲ್ಲಿ.ಹೆಣ್ಣು ಮಕ್ಕಳು ಸೀರೆಯನ್ನೇ ಮರೆತಾಗಿದೆ,ಚೂಡಿದಾರವೇ ಅವರ ಉಡುಗೆಯಾಗಿ ಬಿಟ್ಟಿದೆ.ಜಾನಪದ ಉಡುಗೆಗೆ ಮಹತ್ವ ಇದೆ ಅದಕ್ಕೆಯಾದ ಗೌರವ ಇದೆ.ಮಾತಿನ ಮದ್ಯ ಹಾಸ್ಯ ಚಟಾಕಿ ಪ್ರೇಕ್ಷಕರನ್ನು ಕಚಗುಳಿ ಇಡುತ್ತಿದ್ದವು ಮತ್ತು ಜಾನಪದ ಹಾಡು ಅವರ ಕಂಠದಿಂದ ಆಗಾಗ ಹೋರ ಬರುತ್ತಿದವು ಒಟ್ಟಿನಲ್ಲಿ ಜಾನಪದ ಸೊಗಡಿಗೆ ಅರ್ಥ ಪೂರ್ಣವಾಗಿ ಮನರಂಜನೆಯ ಹಾಗೆ ಅವರ ಮಾತಿನ ಕೌಶಲ್ಯದಿಂದ ಅಲ್ಲಿದ್ದ ಗುರುಗಳು ,ಗುರು ಮಾತೆಯರು ವಿದ್ಯಾರ್ಥಿ/ನಿಯರು ಇನ್ನುಳಿದವರು ನಕ್ಕು ನಲಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದು ಎಲ್ಲರಿಗೂ ಸುಮಾರು 4೦ ನಿಮಿಷಗಳ ವರೆಗೆ ಅವರ ಮಾತಿನ ಮೋಡಿಯಿಂದ ಆಕರ್ಷತರಾದ ಡಾll ವಾಯ್.ವಾಯ್.ಕೊಕ್ಕನವರ.
ಇಂದು ಕಾರ್ಯಕ್ರಮಕ್ಕೆ ಬಂದವರೆಲ್ಲರಿಗೂ ನಿಜವಾದ ಜಾನಪದ ಸೊಗಡನ್ನು ಉಣಬಡಿಸಿದರು ಡಾllವಾಯ್.ವಾಯ್.ಕೊಕ್ಕನವರ ಅವರ ಮಾತಿನ ಚಾತುರ್ತೆಯಿಂದ ಕಾರ್ಯಕ್ರಮ ಆರಂಭದಿಂದಲು ಸ್ವಲ್ಪ ವು ಬೇಜಾರ ಆಗದೆ ನಡೆಸಿಕೊಟ್ಟರು ಎಂದು
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಎಸ್.ಡಿ.ಗಾಣಿಗೇರ ನಗು ನಗುತಾ ಹೇಳಿದರು.
ಸಾನಿಧ್ಯ ಶ್ರೀ ಶ್ರೀಧರಬೋಧ ಸ್ವಾಮೀಜಿಯವರು ಆಶೀರ್ವದಿಸಿದರು.
ವೇದಿಕೆಯ ಮೇಲೆ ಆಸಿನರಾದ ಸಂಜು ಮೋಕಾಶಿ,ಚಂದ್ರು ಗಾಣಿಗ,ಡಾllರವಿ ಗಡದನವರ,ಬಿ.ಎಸ್.ರೆಸಗೊಪ್ಪ,ಶಿವಾಜಿ ಮುಲ್ಲಿಕ್,ಎ.ಜಿ.ಗಿರೆಣ್ಣವರ,ಶ್ರೀಶೈಲ ಭಜೇಂತ್ರಿ,ಗಾಯತ್ರಿ ಸಾಲೊಕೆ,ಶೀತಲ ತಳವಾರ,ಸಾವಿತ್ರಿ ಮಾಚಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ನಿಯರು ಕಾರ್ಯಕ್ರಮ ನಡೆದಿಕೊಟ್ಟರು.ಸಾವಿರಾರು ವಿದ್ಯಾರ್ಥಿಗಳು ನೆರೆದಿದ್ದರು.