ದಾವಣಗೆರೆ ಆ.15:ನೂತನ ಸರ್ಕಾರವು ರಾಜ್ಯದ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ 5 ಗ್ಯಾರಂಟಿಗಳನ್ನು ರೂಪಿಸಿ
ಜಾರಿಗೊಳಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತದಿಂದ ಏರ್ಪಡಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ತಮ್ಮ ಸ್ವಾತಂತ್ರ್ಯೋತ್ಸವ
ಸಂದೇಶದಲ್ಲಿ ತಿಳಿಸಿದರು. ಅಗಸ್ಟ್-15 ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮತ್ತು ಬ್ರಿಟಿಷರ
ದಾಸ್ಯದಿಂದ ಮುಕ್ತಗೊಳಿಸಿದ ದಿನ ಇದಾಗಿದೆ. ಬ್ರಿಟಿಷರ ದಾಸ್ಯದಲ್ಲಿದ್ದ ದೇಶವನ್ನು ಮುಕ್ತಗೊಳಿಸಲು ಮಹಾತ್ಮ
ಗಾಂಧೀಜಿಯವರ ನೇತೃತ್ವದಲ್ಲಿ ಪಂಡಿತ್ ಜವಾಹರಲಾಲ್ ನೆಹರು, ಸುಭಾಶ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯ್
ಪಟೇಲ್. ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್,ಬಿಪಿನ್ ಚಂದ್ರಪಾಲ್, ಭಗತ್ ಸಿಂಗ್, ಸುಖದೇವ್, ರಾಜಗುರು
ಮುಂತಾದವರು ನಡೆಸಿದ ಅವಿರತ ಹೋರಾಟದ ಫಲವಾಗಿ ಸ್ವಾತಂತ್ರ್ಯ ಪಡೆಯುವಲ್ಲಿ ಸಫಲವಾಯಿತು. ಇಂತಹ
ಮಹಾನೀಯರನ್ನು ಈ ಸುಸಂದರ್ಭದಲ್ಲಿ ನೆನೆಯುತ್ತ ಅವರಿಗೆ ನಮನಗಳನ್ನು ಸಲ್ಲಿಸುವುದು ನಮ್ಮ ನಿಮ್ಮೆಲ್ಲರ
ಕರ್ತವ್ಯವಾಗಿದೆ ಎಂದರು.
1942 ರಲ್ಲಿ;ಬ್ರಿಟಿಷರ ಭಾರತ ಬಿಟ್ಟು ತೊಲಗಿ; ಚಳುವಳಿಯಲ್ಲಿ ದಾವಣಗೆರೆಯಲ್ಲಿ ನಡೆದ ಹೋರಾಟ ಅತ್ಯಂತ
ಪ್ರಮುಖವಾದದು. ದಾವಣಗೆರೆ ನಗರದಲ್ಲಿನ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ, ನಿಂಗಪ್ಪ,
ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಇವರುಗಳು ಅಂದು ಬ್ರಿಟಿಷರ ಗುಂಡಿಗೆ
ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾವಿಂದು ನೆನಪಿಸಿಕೊಳ್ಳುತ್ತ ಅವರಿಗೂ ಸಹ ನಮನಗಳನ್ನು
ಸಲ್ಲಿಸೋಣ ಎಂದರು.
ಶಕ್ತಿ ಯೋಜನೆ: ರಾಜ್ಯದ ಎಲ್ಲಾ ಮಹಿಳೆಯರು ಆರ್ಥಿಕ ಮಿತಿ ಇಲ್ಲದೇ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ, ಈಶಾನ್ಯ, ವಾಯುವ್ಯ ಸಾರಿಗೆ ಸೇರಿದಂತೆ ಎಲ್ಲಾ ಸಾರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸುವ ಸೌಲಭ್ಯವನ್ನು ನೀಡುವ
ಸಂಬಂಧ “ಶಕ್ತಿ ಯೋಜನೆಯನ್ನು ಜೂನ್ 11 ರಿಂದ ಜಾರಿಗೊಳಿಸಲಾಗಿದೆ. ದಾವಣಗೆರೆ ವಿಭಾಗದಲ್ಲಿ ಜೂನ್, ಜುಲೈನಲ್ಲಿ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಒಟ್ಟು 53,20,749 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಮೂಲಕ ರೂ.
13,16,20,254 ಗಳ ಪ್ರಯೋಜನ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆ : ಜಿಲ್ಲೆಯಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ 45664 ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. 14 ಕೆ.ಜಿ
ರಾಗಿ ಹಾಗೂ 21 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಆದ್ಯತಾ ಕುಟುಂಬದ (Pಊಊ) 1121525 ಸದಸ್ಯರಿಗೆ 5 ಕೆ.ಜಿ
ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಒಬ್ಬ ಸದಸ್ಯರಿಗೆ 2 ಕೆ.ಜಿ ರಾಗಿ ಹಾಗೂ 3 ಕೆ.ಜಿ ಅಕ್ಕಿಯನ್ನು ವಿತರಣೆ
ಮಾಡಲಾಗುತ್ತಿದೆ.ಸರ್ಕಾರದ ಆದೇಶದಂತೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ
ಐದು ಕೆ.ಜಿ.ಆಹಾರಧಾನ್ಯ ವಿತರಣೆ ಮಾಡುವ ಭರವಸೆಯಂತೆ ಪ್ರತಿ ಕೆ.ಜಿ.ಗೆ ರೂ.34 ರಂತೆ ಐದು ಕೆ.ಜಿಗೆ ರೂ.170 ಗಳನ್ನು
ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗಿದೆ. ಜುಲೈ ತಿಂಗಳಲ್ಲಿ 2,88,207 ಫಲಾನುಭವಿಗಳಿಗೆ ರೂ.16,67,85,130/-
ಗಳ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆ : ಗೃಹಜ್ಯೋತಿ
ಯೋಜನೆ;ಯು ಕರ್ನಾಟಕ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ರಾಜ್ಯದಲ್ಲಿ ಪ್ರತಿ
ಮನೆಗೆ ರಾಜ್ಯ ಸರ್ಕಾರದ ಪ್ರತಿ ತಿಂಗಳಿಗೆ ಗರಿಷ್ಠ 200,ಯುನಿಟ್‍ಗಳವರೆಗೆ ಉಚಿತವಾಗಿ ನೀಡಲಾಗುತ್ತದೆ. ಆಗಸ್ಟ್ 1
ರಿಂದ (ಜುಲೈ ಮಾಹೆಯ ವಿದ್ಯುತ್ ಬಳಕೆ) ಜಾರಿಗೆ ಬಂದಿದ್ದು, ಅರ್ಹತೆಯ ಮಿತಿಯಲ್ಲಿ ಇರುವ ಎಲ್ಲಾ ಫಲಾನುಭವಿಗಳು
ಆಗಸ್ಟ್-1 ಶೂನ್ಯ ಬಿಲ್ಲನ್ನು ಪಡೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಜುಲೈ 27 ರವರೆಗೆ ಗೃಹ ಜ್ಯೋತಿ ಯೋಜನೆಗೆ
3,48,260 ಸಂಖ್ಯೆಯ ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, ಆಗಸ್ಟ್-1 ರಿಂದ ಈ ಯೋಜನೆಯ ಸೌಲಭ್ಯವನ್ನು
ಪಡೆಯುತ್ತಿದ್ದಾರೆ.ಗೃಹಲಕ್ಷ್ಮಿ ಯೋಜನೆ: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬದಲ್ಲಿನ
ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು 27 ನೇ ಆಗಸ್ಟ್ 2023
ರಂದು ಲೋಕಾರ್ಪಣೆ ಮಾಡುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 3.50 ಲಕ್ಷ ಫಲಾನುಭವಿಗಳು ಯೋಜನೆಯ
ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಯುವನಿಧಿ: ನಿರುದ್ಯೋಗಿ ಯುವ ಜನರಿಗೆ ಪದವೀಧರರಿಗೆ 3
ಸಾವಿರ ಮತ್ತು ಡಿಪ್ಲೊಮಾ ಪಾಸ್ ಆದವರಿಗೆ ರೂ.1500 ರೂ.ಗಳನ್ನು ಪ್ರತಿ ತಿಂಗಳು ನೀಡುವ ಮೂಲಕ
ಉದ್ಯೋಗ ಪಡೆಯುವಲ್ಲಿ ಅರ್ಥಿಕ ಭದ್ರತೆ ಒದಗಿಸುವ ಯುವ ನಿಧಿ ಯೋಜನೆಯನ್ನು ಶೀಘ್ರದಲ್ಲಿಯೇ
ಅನುಷ್ಠಾನ ಗೊಳಿಸಲಾಗುವುದು ಎಂದರು.
ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 2.51,241 ಜನರು ಪಿಂಚಣಿ ಪಡೆಯುತ್ತಿದ್ದಾರೆ.
ದಾವಣಗೆರೆ ನಗರಕ್ಕೆ ನಿರಂತರ ನೀರು ಸರಬರಾಜು ಮಾಡಲು ಜಲಸಿರಿ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಹಂತ
ಹಂತವಾಗಿ ಎಲ್ಲಾ ಬಡಾವಣೆಗಳಲ್ಲಿ ನೀರು ಪೂರೈಸಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದಾವಣಗೆರೆಯನ್ನು ಇನ್ನು ಹೆಚ್ಚು
ಸುಂದರ, ಪರಿಸರಸ್ನೇಹಿ, ಜನಸ್ನೇಹಿ ನಗರವನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ : ನರೇಗಾ ಯೋಜನೆಯಡಿ ಈ ವರ್ಷ 35 ಲಕ್ಷ
ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಜುಲೈ ಅಂತ್ಯಕ್ಕೆ 15.44 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ ರೂ. 48.21 ಕೋಟಿ
ಕೂಲಿ ಹಣ ಪಾವತಿಸಿದೆ. ಅಮೃತ್ ಸರೋವರ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 150 ಕೆರೆಗಳ ಅಭಿವೃದ್ಧಿ ಕಾರ್ಯವನ್ನು
ಕೈಗೊಂಡಿದ್ದು, ಇದುವರೆಗೂ 125 ಕೆರೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅಮೃತ ಗ್ರಾಮ
ಪಂಚಾಯಿತಿ ಯೋಜನೆಯಡಿ ಮೊದಲ ಹಂತದಲ್ಲಿ 27 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದ್ದು, ಈ ಪಂಚಾಯಿತಿಗಳಿಗೆ
ಪ್ರೋತ್ಸಾಹಧನವಾಗಿ ಪ್ರತಿ ಪಂಚಾಯತಿಗೆ ರೂ.25.00 ಲಕ್ಷ ಬಿಡುಗಡೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ 194 ಗ್ರಾಮ
ಪಂಚಾಯಿತಿಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಮ್) ಯೋಜನೆಯಡಿ 99,217 ಮಹಿಳಾ
ಸದಸ್ಯರನ್ನು ಒಳಗೊಂಡ, 8,560 ಗುಂಪುಗಳ ಸ್ವ ಸಹಾಯ 194 ಒಕ್ಕೂಟಗಳನ್ನು ರಚನೆ ಮಾಡಿ ರೂ 57.29
ಕೋಟೆ ಸಮುದಾಯ ಬಂಡವಾಳ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಈಗ ಸಮುದಾಯ ಬಂಡವಾಳವಾಗಿ ಪ್ರಸ್ತುತ
ಜಿಲ್ಲೆಯಲ್ಲಿ ಅಂದಾಜು ರೂ. 200 ಕೋಟಿ ವಹಿವಾಟು ನಡೆಸುತ್ತಿವೆ. ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗಳಿಗೆ ನಳ
ಸಂಪರ್ಕ ಕಲ್ಪಿಸಲು ನಾಲ್ಕು ಹಂತದಲ್ಲಿ 161639 ಮನೆಗಳಿಗೆ ನಲ್ಲಿ ನೀರು ಕಲ್ಪಿಸಲು 882 ಕಾಮಗಾರಿಗಳನ್ನು ರೂಪಿಸಿದೆ. ಇದರಲ್ಲಿ
495 ಕಾಮಗಾರಿಗಳು ಪೂರ್ಣವಾಗಿದ್ದು, 387 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಮುಂಗಾರು ಹಂಗಾಮಿನಲ್ಲಿ ಸಾರಸಾರಿ 205 ಮೀ.ಮೀ ಮಳೆ ಇದ್ದು, ವಾಸ್ತವಿಕವಾಗಿ 221 ಮಿ.ಮೀ ಮಳೆ ಆಗಿದ್ದು ಶೇ.8 ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ನೊಂದಣಿ ಮಾಡಿಕೊಂಡ ಜಿಲ್ಲೆಯ
ರೈತರಿಗೆ ಪ್ರತಿ ಕಂತಿಗೆ ರೂ.2,000 ರಂತೆ ಒಟ್ಟು ರೂ. 470.03,ಕೋಟಿ ಮೊತ್ತ ರೈತರ ಖಾತೆಗೆ ಬಂದಿರುತ್ತದೆ.
ತೋಟಗಾರಿಕೆಯಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ
ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.ತೋಟಗಾರಿಕೆಯನ್ನು ಪೆÇ್ರೀತ್ಸಾಹಿಸಲು ಇಲಾಖೆಯ ಮೂಲಕ
ರಾಷ್ಟ್ರೀಯ ತೋಟಗಾರಿಕೆ ಮಿಷನ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ
ಇತರೆ ಯೋಜನೆಗಳ ಮೂಲಕ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸಹಾಯಧನ ನೀಡಲಾಗುತ್ತಿದೆ
ಎಂದರು.
ಪಥಸಂಚಲನದಲ್ಲಿ ಭಾಗವಹಿಸುವ ತಂಡಗಳ ವಿವರ: ಡಿ.ಎ.ಆರ್ ಪೊಲೀಸ್ ತಂಡ ಸಹದೇವಪ್ಪ ಬಂಡಿ ವಡ್ಡರ್, ನಾಗರಿಕ ಪೊಲೀಸ್ ತಂಡ ಮಹದೇವ ಸಿದ್ದಪ್ಪ ಭತ್ಯೆ, ಗೃಹ ರಕ್ಷಕ ದಳ ಹಾಲೇಶ್, ಅರಣ್ಯ ರಕ್ಷಕ ಅಂಜಿನಪ್ಪ, ಅಬಕಾರಿ ದಳ ಶ್ರೀಕಾಂತ್
ಧಾರಣಿ, ಅಗ್ನಿ ಶಾಮಕ ದಳ ಅವಿನಾಶ್, ಎನ್‍ಸಿಸಿ ಕಾಲೇಜು ವಿಭಾಗದಿಂದ ಜಿಎಫ್‍ಜಿಸಿ ಕಾಲೇಜಿನ ಶಿವಕುಮಾರ್ ನೇತೃತ್ವ, ಎವಿಕೆ
ಕಾಲೇಜಿನ ಪ್ಲಟೂನ್ ಕಮಾಂಡೆರ್ ಕುಮಾರಿ ಸೃಷ್ಠಿ, ಡಿಆರ್‍ಆರ್ ಕಾಲೇಜುನ ಪ್ಲಟೋನ್ ಕಮಾಂಡೆರ್ ಕೆ.ಆರ್ ಅಭಿಷೇಕ್
ನಾಯಕ್, ಜಿಎಂಐಟಿ ಕಾಲೇಜಿನ ಪ್ರತೀಕ್, , ಡಿಆರ್‍ಎಂ ಕಾಲೇಜಿನ ದರ್ಶನ್ಎಂ.ಎಂ, ಎ.ಆರ್.ಜಿ ಕಾಲೇಜಿನ ಯುವರಾಜ್ ಡಿ.ಬಿ, ಸೆಂಟ್ ಪಾಲ್ಸ್ ಸೂಲ್ಕಿನ ಹೈಸ್ಕೂಲ್ ವಿಭಾಗದ ಪ್ರತೀಕ್ಷ, ಬಾಪೂಜಿ ಎಸ್‍ಪಿಸಿ ಸ್ಕೂಲ್ ಗೋವಧನ್, ಸಿದ್ದಗಂಗಾ ಗೈಡ್ ಟ್ರೂಪ್ ರೋಷಣಿ,
ಆರ್.ಎಂ.ಎಸ್.ಎ ನಿಟ್ಟುವಳ್ಳಿ ಸೇವಾದಳ ಬಿಂದು ಆರ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಟ್ರೂಪ್ ಸ್ವಪ್ನ, ಬಾಪೂಜಿ ಸಿಬಿಎಸ್‍ಇ ಬಾಲಕಿಯರ ವಿಭಾ ಯಶಸ್ವಿ, ಪೊಲೀಸ್ ಪಬ್ಲಿಕ್ ವಸತಿ ಶಾಲೆ ಸುಜಯ್ ಎಸ್.ಗೌಡ, ಜೈನ್
ಪಬ್ಲಿಕ್ ಸ್ಕೂಲಿನ ಪೃಥ್ವಿ, ಆರ್.ವಿ.ಜಿ.ಕೆ ಡಿಸ್ಟಿಕ್ಟ್ರ್ ಸ್ಕೌಟ್ಸ್ ಟ್ರೂಪ್ ಅಜಯ್,ಸರ್ಟಿಫೈಡ್ ಸ್ಕೂಲ್ ಮಂಜುನಾಥ, ಸಿದ್ದಗಂಗಾ ಟ್ರೂಪ್ ಶಶಾಂಕ್,ಪುಷ್ಪಾ ಮಹಾಲಿಂಗಪ್ಪ ಶಾಲೆಯ ಖುಷಿ, ತರಳಬಾಳು ಶಾಲೆಯ ಸಿಂಚನಾ ವೈ.ಜಿ, ಸೆಂಟ್ ಪಾಲ್ಸ್ ಸೆಂಟ್ರಲ್ ಸ್ಕೂಲ್ ಅಧವಿಕಾ.ಪಿ,ಮೌನೇಶ್ವರ ಡಪ್ ಅಂಡ್ ಡಂಬ್ ಸ್ಕೂಲ್ ಮಹೇಶ್ ಮತ್ತು ಆರ್.ವಿ.ಕೆ ಹೈಸ್ಕೂಲ್‍ನ ಮೌನಿಕಾ ನೇತೃತ್ವದಲ್ಲಿ ಪಥಸಂಚಲನಾ
ನಡೆಯಿತು.
ಬಹುಮಾನಗಳಿಸಿದ ತುಕಡಿಗಳು: ಗೃಹ ರಕ್ಷಕ ದಳ
ಪ್ರಥಮ ಸ್ಥಾನ, ಅರಣ್ಯ ಇಲಾಖೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಎಸ್.ಸಿ.ಸಿ ಯೂನಿಟ್ ಕಾಲೇಜು ವಿಭಾಗದಲ್ಲಿ
ಪ್ರಥಮ ಸ್ಥಾನ ಜಿಎಂಐಟಿ ಕಾಲೇಜು, ಡಿಆರ್‍ಎಂ ಸೈನ್ಸ್ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಎನ್‍ಸಿಸಿ ವಿಭಾಗದಿಂದ
ಮೌನೇಶ್ವರ ಡಪ್ ಅಂಡ್ ಡಂಬ್ ಸ್ಕೂಲ್ ಪ್ರಥಮ ಸ್ಥಾನ, ಆರ್.ಎಂ.ಎಸ್.ಎ ನಿಟ್ಟುವಳ್ಳಿ ಸೇವಾದಳ ದ್ವಿತೀಯ ಸ್ಥಾನ, ಹೈಸ್ಕೂಲ್
ವಿಭಾಗದಿಂದ ಪುಪ್ಪಾ ಮಹಾಲಿಂಗಪ್ಪ ಶಾಲೆ ಪ್ರಥಮ ಸ್ಥಾನ,ತರಳಬಾಳು ಹೈಸ್ಕೂಲ್ ಗರ್ಲ್ ದ್ವಿತೀಯ ಸ್ಥಾನ, ಪ್ರೈಮರಿ
ವಿಭಾಗದಿಂದ ಪೊಲೀಸ್ ಪಬ್ಲಿಕ್ ಸ್ಕೂಲ್ ಕೊಂಡಜ್ಜಿ ಪ್ರಥಮ ಸ್ಥಾನ, ಜೈನ್ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನವನ್ನು
ಪಡೆದಿರುತ್ತಾರೆ.ಉತ್ತಮ ಸಮವಸ್ತ್ರ; ಪ್ರಥಮ ಸ್ಥಾನ ಸೆಂಟ್ ಪಾಲ್ಸ್ ಸೆಂಟ್ರಲ್ ಕಾಲ್ರ್ಸ ಸ್ಕೂಲ್, ದ್ವಿತೀಯ ಸ್ಥಾನ ಸರ್ಟಿಪೈಡ್ ಸ್ಕೂಲ್ ದಾವಣಗೆರೆ.ಸ್ವಾತಂತ್ರ್ತ ಹೋರಾಟಗಾರರಿಗೆ ಸನ್ಮಾನ: ಸೌಭಾಗ್ಯ ಕೋಂ ಎನ್
ರುದ್ರೇಶ್ ಚನ್ನಗಿರಿ, ಶಾಂತ ಕೋಂ ರಾಮಕೃಷ್ಣ ರೆಡ್ಡಿ ಹರಿಹರ, ಶಿವಲಿಂಗಸ್ವಾಮಿ ತಂದೆ ಚಿಕ್ಕ ವೀರಪ್ಪ ದಾವಣಗೆರೆ,
ವೀರಪ್ಪ ತಂದೆ ಮಲ್ಲಪ್ಪ ದಾವಣಗೆರೆ, ಚನ್ನಬಸಪ್ಪ ತಂದೆ ಮಲ್ಲಪ್ಪ ದಾವಣಗೆರೆ ಇವರುಗಳಿಗೆ ಸಚಿವರು ಸನ್ಮಾನಿಸಿ
ಗೌರವಿಸಿದರು.
ವಿದ್ಯಾರ್ಥಿಗಳಿಂದ ಆಕರ್ಷಕ ದೇಶಭಕ್ತಿ ಗೀತೆಗಳ ನೃತ್ಯ ರೂಪಕ; ಲಲಿಲ್ ಇಂಟರ್ ನ್ಯಾಷನಲ್ ಶಾಲೆಯಿಂದ ವಂದೇ ಮಾತರಂ,
ಸೆಂಟ್ ಮೇರೀಸ್ ಶಾಲೆ ವಿನೋಬನಗರ ಇವರಿಂದ ಚಕ್ ದೇ ಇಂಡಿಯಾ, ನಿಂಚನ ಪಬ್ಲಿಕ್ ಶಾಲೆ, ನಿಟ್ಟುವಳ್ಳಿ ಇವರಿಂದ ಗಾಂಧಿ
ಗೋಖಲೆ ಶಾಂತಿ ಇಂಡಿಯಾ, ಸಿದ್ದಗಂಗಾ ವಿದ್ಯಾ ಸಂಸ್ಥೆಯಿಂದ ಸಂಕೋಲೆಯಿಂದ ಸ್ವಾತಂತ್ರ್ಯದೆಡೆಗೆ ರೂಪಕ
ಪ್ರದರ್ಶನ ಮತ್ತು ಜೈನ್ ವಿದ್ಯಾಲಯದಿಂದ ಜಾಗ್ ಹಿಂದೂಸ್ತಾನ್ ಕಾರ್ಯಕ್ರಮವನ್ನು ಸಾವಿರಾರು ವಿದ್ಯಾರ್ಥಿಗಳಿಂದ
ಪ್ರದರ್ಶನ ಮಾಡಲ್ಪಟ್ಟಿತು.
ಕಿರು ಹೊತ್ತಿಗೆ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ನೂತನ ಸರ್ಕಾರದ ಗ್ಯಾರಂಟಿ
ಯೋಜನೆಗಳ ಕುರಿತ ನುಡಿದಂತೆ ನಡೆದಿದ್ದೆವೆ ಎಂಬ ಕಿರು ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ
ಗೊಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಜಿ.ಹೆಚ್. ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಪೂರ್ವ
ವಲಯ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಡಾ;ಕೆ.ತ್ಯಾಗರಾಜನ್,ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ, ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.