ದಾವಣಗೆರೆ ಆ ೧೫:ಗಾಂಧೀಯವರು ೧೯೪೨ ಆಗಸ್ಟ್ 8 ರಂದು ನೆಡೆಸಿದ ಕ್ವಿಟ್ ಇಂಡಿಯಾ ಚಳುವಳಿ ಕೇವಲ ೫೦ ಜನ ಸ್ವಾತಂತ್ರ್ಯ ಹೋರಾಟಗಾರರಿಂದ ಆರಂಭವಾಗಿ ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದೇ ಕೊನೆಗೆ ಬ್ರಿಟಿಷರು ಆಗಸ್ಟ್ ೧೫ ಕ್ಕೆ ನಮಗೆ ಸ್ವಾತಂತ್ರ್ಯ ಸಿಗಲು ಇಂದಿಗೆ ೭೭ರ ಸ್ವಾಂತತ್ರ್ಯೋವ ದಿನ ಆಚರಣೆಗೆ ನಾಂದಿಯಾಯಿತು.
ಎಂದು ಹಿರಿಯ ಮಾಧ್ಯಮ ಪತ್ರಕರ್ತ ಲೋಕಿಕೆರೆ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ
ಪುರಂದರ ಲೋಕಿಕೆರೆ ಅಭಿಪ್ರಾಯ ಪಟ್ಟರು
ಅವರು ಸೊಸೈಟಿ ಆವರಣದಲ್ಲಿ ಹಮ್ಮಿಕೊಂಡಿದ್ದ
ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಗಾಂಧಿ ಅಂಬೇಡ್ಕರ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ವಲ್ಲಭಭಾಯ್ ಪಟೇಲ್,ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್ ರವರಂತಹ ನೇತೃತ್ವದಲ್ಲಿ ನಡೆದ ಬೃಹತ್ ಆಂದೋಲನ
ನಂತರ ಅಂಬೇಡ್ಕರ್ ರಚಿಸಿದ ಸಂವಿಧಾನ ಆಶಯ ಮೇಲೆ ಕೆಳವರ್ಗದ ಜನರ ನಡುವೆ ಸಮ ಸಮಾಜದ ಕನಸು ಕಾಣುತ್ತಾ ಪರಿಶಿಷ್ಟರಿಗೆ ಮತದಾನ ಹಕ್ಕು ಕಾಯ್ದೆ ಮೂಲಭೂತ ಸೌಲಭ್ಯ ಹಕ್ಕುಗಳ ಬಗ್ಗೆ ಅವರ ಸ್ವಾತಂತ್ರ್ಯ ವಾಗಿ ಬಾಳಲು
ಸಂವಿಧಾನ ಬದಲಿಸೋ ತಿರಚುವ ಪ್ರಯತ್ನ ಗಳ
ನಡುವೆ ಹಿಂದಿನ ಮಹಾನ್ ಚೇತನಗಳ ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷೆ ಮಂಜಮ್ಮ ನಿರ್ದೇಶಕರಾದ ಭೀಮಕ್ಕರ ನಾಗರಾಜ್ ಏಕಪ್ಪರ ತಿಪ್ಪಣ್ಣ ಉಮೇಶ್ ಲಕ್ಷಣ ಸುರೇಶ್
ಸಣಿಯಪ್ಳ ವೀರಣ್ಣ, ಮಾಜಿ ಅಧ್ಯಕ್ಷ ಗ್ರಾ.ಪಂ.ಶಿವಮೂರ್ತಿ ಪೆನ್ನೆಜ್ಜರ ಅಂಜಿನಪ್ಪ,ಪಂ ಸದಸ್ಯ ರಾದ ಉಮೇಶ್ ಅಭಿಷೇಕ್, ಟಿ ಹೆಚ್ ಮೂರ್ತಿ,
ಗ್ರಾಮದ ಹಿರಿಯರಾದ ಕೋರಿ ಜಯಪ್ಪ ಜರಿಕಟ್ಟೆ ಮಲ್ಲಪ್ಪ ನವರು ಉಪಸ್ಥಿತರಿದ್ದರು
ಆರಂಭದಲ್ಲಿ ಸೊಸೈಟಿ ಕಾರ್ಯ ನಿರ್ವಹಾಧಿಕಾರಿ ಪ್ರಸನ್ನ ಕುಮಾರ್ ಧ್ವಜಾರೋಹಣ ಮಾಡಲು ಅಧ್ಯಕ್ಷ ರಿಗೆ ಆಹ್ವಾನ ನೀಡಿ ಎಲ್ಲರನ್ನು ಸ್ವಾಗತಿಸಿದರು ಮಾರಾಟ ಸಹಾಯಕ ಹಾಲೇಶ್
ಧ್ವಜವನ್ನು ಏರಿಸಿ ಆವರಣ ಶೃಂಗರಿಸಿದ್ದು ವಿಶೇಷ ಎನಿಸಿತ್ತು.