ವಿಜಯನಗರ: ಹರಪ್ಪನಹಳ್ಳಿಯಲ್ಲಿ ಭಾರತ್ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಆಗ್ರಹಿಸಿ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ರವರು ಹರಪನಹಳ್ಳಿ ಗೆ ಬಂದಾಗ ಸಲ್ಲಿಸಿದರು.
ವಿವಿಧ ಬೇಡಿಕೆಗಳು
1.ಹರಪನಹಳ್ಳಿ ತಾಲೂಕಿಗೆ ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿ ಉದ್ಘಾಟನೆಯಾದರು 60 ಕೆರೆಗಳಿಗೆ ನೀರುಬಾರದೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಜೇಬು ಮಾತ್ರ ತುಂಬಿರುತ್ತದೆ ಕೂಡಲೇ ಕಾಮಗಾರಿಯನ್ನು ಪರಿಶೀಲಿಸಿ 60 ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ನೆನೆಗುದಿಗೆ ಬಿದ್ದಿರುವ ಬ್ರಿಡ್ಜ್ ಅಂಡ್ ಬ್ಯಾರೇಜ್ ತುರ್ತಾಗಿ ಮಾಡಿ ಹರಪನಹಳ್ಳಿ ತಾಲೂಕ ನೀರಾವರಿ ಪ್ರದೇಶವನ್ನಾಗಿ ಮಾಡಬೇಕು.
2..ಈ ಹಿಂದೆ ನಮ್ಮ ತಾಲೂಕಿನ ಬಡ ರೈತರು ಬಗ್ಗರ್ ಹುಕ್ಕುಂ ನಮ್ಮೂನೆ 57 ರಲ್ಲಿ ಸಾವಿರಾರು ರೈತರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೆ ಹಕ್ಕು ಪತ್ರ ನೀಡಬೇಕು
3..ಹರಪನಹಳ್ಳಿ ತಾಲೂಕು ಅರಸೀಕೆರೆಯಲ್ಲಿ ವಿದ್ಯುತ್ ಪ್ರಸರಣ ಘಟಕ ಕಾಮಗಾರಿ 3 ವರ್ಷದಿಂದ ಪ್ರಾರಂಭವಾಗಿ ಕೆಲ ರೈತರಿಗೆ ಸರಿಯಾದ ವೈಜ್ಞಾನಿಕ ಪರಿಹಾರ ನೀಡಿದೆ ಕಾಮಗಾರಿಯನ್ನು ತಡೆದಿದ್ದು ಕೂಡಲೇ ಅರಸೀಕೆರೆ ಪ್ರಸರಣ ಘಟಕಕ್ಕೆ ಭೇಟಿ ನೀಡಿ ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸಬೇಕು
4..ತಾಲೂಕಿನ ಅನಂತನಹಳ್ಳಿ ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜ್ ಆವರಣದಲ್ಲಿ ನಿರ್ಮಿಸಿರುವ ಮೂರು ವಸತಿ ನಿಲಯಗಳನ್ನು ಪ್ರಾರಂಭಿಸದೆ ಬಾಳು ಬಿದ್ದು ಹಾಳಾಗುತ್ತಿದ್ದರು ಪ್ರಾರಂಭಿಸದೆ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಕೂಡಲೇ ಬಾಳು ಬಿದ್ದು ಹಾಳಾಗುತ್ತಿರುವ ಹಾಸ್ಟೆಲ್ ಗಳನ್ನು ಸರಿಪಡಿಸಿ ಪ್ರಾರಂಭಿಸಬೇಕು
5..ಕಾರ್ಮಿಕ ಇಲಾಖೆಗೆ ಸ್ವಂತ ಕಟ್ಟಡ ಇಲ್ಲ ಬಾಡಿಗೆಯಲ್ಲಿ ನಡೆಸುತ್ತಿದ್ದಾರೆ ಕಾರ್ಮಿಕ ಅಧಿಕಾರಿಗಳು ಪ್ರಭಾರಿ ಅಧಿಕಾರಿ ಯಾಗಿದ್ದು ನಮ್ಮ ತಾಲೂಕಿಗೆ ಪೂರ್ಣಾವಧಿ ಕಾರ್ಮಿಕ ಅಧಿಕಾರಿಗಳು ಸ್ವಂತ ಕಟ್ಟಡವಾಗಬೇಕು
6..ನಮ್ಮ ತಾಲೂಕಿನ ಹಾಸ್ಟೆಲ್ ಗಳಿಗೆ ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗೆ ಅರ್ಜಿ ಸಲ್ಲಿಸಿದ್ದು 100 ರಿಂದ 200 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಕ್ಕಿದೆ ಅದಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಮಾದರಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ಹಾಗೂ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿಗಳ ಸಂಖ್ಯಾ ಅನುಗುಣವಾಗಿ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು
7..ಹರಪನಹಳ್ಳಿ ನಗರದಲ್ಲಿ ನಗರ ಸಾರಿಗೆ ಪ್ರಾರಂಭಿಸಬೇಕು
8..ಹರಪ್ಪನಹಳ್ಳಿ ನಗರದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯಾ ಅನುಗುಣವಾಗಿ ಕಟ್ಟಡ ವ್ಯವಸ್ಥೆ ಮೂಲಭೂತ ಸೌಕರ್ಯ ಕಲ್ಪಿಸಬೇಕು
9..ಹರಪನಹಳ್ಳಿ ತಾಲೂಕಿನ ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ವೃತ್ತಿಪರ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಸತಿ ನಿಲಯ ಪ್ರಾರಂಭಿಸಬೇಕು
10..ತಾಲೂಕಿನಲ್ಲಿ ಜೆಜೆಎಂ ಮನೆಮನೆಗೆ ಗಂಗೆ ಯೋಜನೆಯಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡಬೇಕು
11..ಒಂಟಿತನ ಬಂಡಿ ಅಮಾಲರಿಗೆ ಪ್ರತ್ಯೇಕ ಬಡಾವಣೆ ಮಾಡಿ ವಸತಿ ಕಲ್ಪಿಸಬೇಕು ಉಚಿತವಾಗಿ ಎತ್ತುಗಳಿಗೆ ಮೇವು ನೀರಿನ ಘಟಕ ನಿರ್ಮಾಣ ಮಾಡಬೇಕು
12..ಹರಪನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು
ಇನ್ನಿತರ ಬೇಡಿಕೆಗಳನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿಯಾದ,ಕಾಂ. ಗುಡಿಹಳ್ಳಿ ಹಾಲೇಶ್, ಕಾಂ..ಬಳಿಗನೂರು ಕೊಟ್ರೇಶ್, ಕಾಂ. ದಾದಾಪೀರ್, ಕಾಂ..ನಟರಾಜಪ್ಪ, ಕಾಂ..ಪಂಪಣ್ಣ, ಕಾಂ…ಹನುಮಂತಪ್ಪ ಇನ್ನಿತರರು ಭಾಗವಹಿಸಿದ್ದರು.