ವಿಜಯಪುರ:
ಪ್ರತಿಯೊಬ್ಬರ ಬದುಕಿನಲ್ಲೂ ಒಂದಲ್ಲ ಒಂದು ಬಾರಿ ಮಧುರನೆನಪುಗಳಿಂದ ತೊಯ್ದು ತೊಟ್ಟಿಕ್ಕುವ ವಿದಾಯದ ಆರ್ದ್ರ ಘಳಿಗೆಯಾಂದು ಒಮ್ಮೆಯಾದರೂ ಹಾದು ಹೋಗಿರದೆ ಇರಲಾರರು. ಅದು ತವರು ಮನೆಯಿಂದ ತಂಗಿಯನ್ನು ಕಳಿಸಿಕೊಡುವ ಭಾವನಾತ್ಮಕ ಸನ್ನಿವೇಶವೇ ಆಗಿರಬಹುದು, ಓದಿದ ಶಾಲೆ, ಕಾಲೇಜನ್ನು ಬಿಟ್ಟು ಹೊರಬರುವ ಕೊನೆಯ ದಿನವೇ ಇರಬಹುದು, ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಬಿಡುಗಡೆಯ ಘಳಿಗೆಯೇ ಆಗಿರಬಹುದು, ಈಗ ಆ ಕ್ಷಣದ ನೆನಪಾದರೂ ಸಾಕು – ಅಂದು ಎದೆಯಾಳದಲ್ಲಿ ತುಂಬಿ ಬಂದಿದ್ದ ಭಾವೋದ್ವೇಗವನ್ನು ನೆನೆದು ಇಂದೂ ಕೂಡ ಮನವೊಮ್ಮೆ ನವಿರಾಗಿ ಕಂಪಿಸದೆ ಇರಬಹುದು.
ಒಲ್ಲದ ಮನಸ್ಸಿನಿಂದ ಬಿಡುಗಡೆಗೊಂಡ ಗುರುಮಾತೆ ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಹೊನ್ನುಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಯ ಸಮಾಜ ವಿಜ್ಞಾನ ವಿಷಯದ ಗುರುಮಾತೆಯರಾದ ಶ್ರೀಮತಿ ವಿ ಬಿ ಐನಾಪುರ ಗುರುಮಾತೆಯರು.ಇವರು ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿಜಯಪುರ ಜಿಲ್ಲೆಯ ಜುಮಾನಾಳ ಸರ್ಕಾರಿ ಪ್ರೌಢಶಾಲೆ ಗೇ ವರ್ಗಾವಣೆಯಾದ ಕಾರಣದಿಂದ ತಾವು ಕಳೆದ 16 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ ಬೀಳ್ಕೊಡುಗೆ ಸ ಮಾರಂಭ ಸಂದರ್ಭದಲ್ಲಿ ಶಾಲೆಯ ಎರಡುನೂರ ಐವತ್ತು ವಿದ್ಯಾರ್ಥಿನಿಯರು ಗುರುಮಾತೆಯರ ಮುತ್ತಿಗೆ ಹಾಕಿ ತಬ್ಬಿಕೊಂಡು ಗಳ ಗಳನೆ ಅತ್ತು ಕಣ್ಣೀರು ಕೋಡಿ ಹರಿಸಿದ್ದು ಶಿಕ್ಷಕಿಯರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಕಳೆದ 16 ವರ್ಷದಿಂದ ಹೊನ್ನುಟಗಿ ಗ್ರಾಮದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆತೆಯಿಂದ ಮುದ್ದು ಮಕ್ಕಳೊಂದಿಗೆ ಮಕ್ಕಳ ತರ ಬೆರೆತು ಎಷ್ಟು ಜನ ತಂದೆ- ತಾಯಿ ಅವರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳಿಗೆ ತಾಯಿ ಸ್ವರೂಪದ ಪ್ರೀತಿ ತೋರಿ
ಕೇವಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸದೆ ಪ್ರತಿಯೊಂದು ಮಗವಿಗೂ ತಾಯಿ ಪ್ರೀತಿ ಹಾಗೂ ತಂದೆಯ ವಾತ್ಸಲ್ಯ ನೀಡಿ ತಮ್ಮ ಸ್ವಂತ ಮಕ್ಕಳಂತೆ ತಿಳಿಹೇಳಿ ಮಕ್ಕಳಿಗೆ ಮನ ಮುಟ್ಟುವಂತೆ ಪಾಠ ಪ್ರವಚನ ಭೋದಿಸುತ್ತಿದರು. ಹಾಗೂ ಅವರ ಸ್ವಭಾವ ಸತತವಾಗಿ 17 ವರ್ಷ ಹೊನ್ನುಟಗಿ ಗ್ರಾಮದಲ್ಲಿಯೇ ಸೇವೆ ಸಲ್ಲಿಸಿದರು ಯಾವದೇ ಒಂದು ದಿನವೂ ಕೂಡ ತಮ್ಮ ವಿಷಯದಲ್ಲಿ ಮಕ್ಕಳಿಗೆ ಕೊರತೆಯಾಗದಂತೆ ಪಾಠ ಭೋದಿಸಿ ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಈ ಶಾಲೆಯಿಂದ ವರ್ಗಾವಣೆಯಾಗಿದರು. ಈ ವರ್ಗಾವಣೆಯು ಸಮಸ್ತ ಗ್ರಾಮಸ್ಥರಿಗೂ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ಶಾಲಾ ಶಿಕ್ಷಕರ ವೃಂದಕು ಅತ್ಯಂತ ದುಃಖದ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ವರ್ಗಾವಣೆಯಾದ V B ಐನಾಪುರ ಗುರುಮಾತೆ ಅವರು ಮಾತನಾಡಿ, ಅನೇಕ ನನ್ನ ವಯಕ್ತಿಕ ಕಾರಣಗಳಿಂದ ಈ ಶಾಲೆಯಿಂದ ವರ್ಗಾವಣೆ ಆಗಿ ಹೊರಟಿದ್ದೇನೆ ಕೇವಲ ನನ್ನ ಶಿಕ್ಷಕ ವೃತ್ತಿಯಿಂದ ನಿಮ್ಮೂರಿಂದ ವರ್ಗಾವಣೆ ಆಗೇದೇನೆ ಹೊರತು ನಿಮ್ಮೂರಿನ ಎಲ್ಲ ನನ್ನ ಮುತ್ತು – ರತ್ನ ದಂತೆ ಇರುವ ವಿದ್ಯಾರ್ಥಿಗಳು ಹಾಗೂ ಸಮಸ್ತ ಊರಿನ ಗ್ರಾಮಸ್ಥರ ಮನ್ನಸ್ಸಿನಿಂದಲ್ಲ ಎಂದು ಭಾವುಕಾರಾಗಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಅನೇಕ ಜನ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಅತ್ಯಂತ ಭಾವುಕದಿಂದ ಕಣ್ಣೀರು ಸುರಿಸಿ ಮಾತನಾಡಿದರು. ಕೆಲವು ಸಮಯಗಳ ಕಾಲ ವಿದ್ಯಾರ್ಥಿನಿಯರು ಗುರುಮಾತೆಯರ ಕೊರಳಿಗೆ ಮುಗಿ ಬಿದ್ದು ಮೇಡಂ ನೀವು ನಮ್ಮೂನು ಬಿಟ್ಟು ಹೋಗಬೇಡಿ ಎಂದು ಅತ್ಯಂತ ಭಾವುಕರಾಗಿ ವಿದ್ಯಾರ್ಥಿಗಳ ಜೊತೆಗೆ ಕೆಲವು ಸಮಯಗಳ ಕಾಲ ಗುರುಮಾತೆಯರು ಭಾವುಕರಾಗಿ ಕಣ್ಣೀರು ಸುರಿಸಿದರು.
ಹೃದಯ ಸ್ಪರ್ಶಿ ಬೀಳ್ಕೊಡು ಸಮಾರಂಭದಲ್ಲಿ ಶಾಲೆಯ ಮುಖ್ಯಗುರುಮಾತೆಯರಾದ ಶ್ರೀಮತಿ U N ತೋರವಿ ಹಾಗೂ ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ G U ಕಾಯಪುರೆ ಗುರುಮಾತೆಯರು ಹಾಗೂ ಕನ್ನಡ ಭಾಷೆ ಶಿಕ್ಷಕರಾದ ಶ್ರೀ ಶಿವರಾಜ್ ಬಿರಾದಾರ ಹಾಗೂ ಚಿತ್ರಕಲಾ ಶಿಕ್ಷಕರಾದ S S ವಲಗುಂದ, ಹಾಗೂ ವಿಜ್ಞಾನ ವಿಷಯದ ಶಿಕ್ಷಕರಾದ G V ಕುಲಕರ್ಣಿ ಹಾಗೂ ಗಣಿತ ಶಿಕ್ಷಕರಾದ G M ಪಾಟೀಲ ಗುರುಗಳು ಹಾಗೂ ಎಲ್ಲ ಗುರು ವೃಂದ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.