ಜಗಳೂರು .ದಿನಾಂಕ:15.09.2023. ಜಮೀನುಗಳಲ್ಲಿ ಕಷ್ಟ ಪಟ್ಟು ದುಡಿಯುವ ರೈತಾಪಿ ಜನರಿಗೆ ನೆಮ್ಮದಿ ನೀಡುವ ಸ್ಥಳಗಳೇ ದೇವಸ್ಥಾನಗಳು ಮತ್ತು ಈ ಧಾರ್ಮಿಕ ಕೇಂದ್ರಗಳನ್ನು ಸ್ವಚ್ಚವಾಗಿರಲು ನೋಡಿಕೊಳ್ಳಿ ಎಂದು ಶಾನುಭೋಗ ವೆಂಕಟ ರಾವ್ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ್ ಶ್ರೀ ಜಿ ಕೆ ನಾಗರಾಜ ರಾವ್ ರವರು ಹೇಳಿದರು.ಅವರು ಇಂದು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಶ್ರೀ ದುರ್ಗಾoಬಿಕ ದೇವಸ್ತಾನಕ್ಕೆ ಪ್ರತಿಷ್ಟಾನದ ವತಿಯಿಂದ ಧನ ಸಹಾಯವನ್ನು ನೀಡಿ ಮಾತನಾಡಿದರು.ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಜಿ ವಿ ಕೃಷ್ಣ ಮೂರ್ತಿ ರಾವ್ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀ ಸಣ್ಣ ತಿಪ್ಪಣ್ಣ, ಕಾರ್ಯದರ್ಶಿ ಶ್ರೀ ಮಂಜಪ್ಪ , ಉಪಾಧ್ಯಕ್ಷರಾದ ಶ್ರೀ ಗುರುಸಿದ್ದಪ್ಪ ಸದಸ್ಯರಾದ ಶ್ರೀ ಶಿವಣ್ಣ, ಶಾಂತಪ್ಪ ರಂಗಪ್ಪ, ಶಿವಮೂರ್ತಿ ತಿಪ್ಪೇಸ್ವಾಮಿ ಇತರ ಸದಸ್ಯರು ಹಾಗೂ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.