ದಾವಣಗೆರೆ- ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಇಂದು ಬೆಳಗ್ಗೆ ಎ ವಿ ಕಮಲಮ್ಮ ಕಾಲೇಜ್ ರಸ್ತೆಯ ಗುರುಭವನ ಬಳಿ ತಮಿಳುನಾಡಿಗೆ ನೀರು ಹರಿಸಲು ಕಾರಣವಾದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಭೂತ ದಹನ ದಹಿಸಿದರು.

ನಂತರ ಈ ಮೂವರುಗಳ ಅಣಕು ಕೈಲಾಸ ಸಮರಾಧನೆ ನಡೆಸಲಾಯಿತು ಹಾಗೂ ಸ್ಥಳದಲ್ಲೇ ತಿಥಿ ವಡೆ ಪಾಯಸ ಪುಳಿಯೋಗರೆ ಊಟ ಸವಿಯಲಾಯಿತುಕರವೇ ಜಿಲ್ಲಾ ಅಧ್ಯಕ್ಷ ಎಂಎಸ್ ರಾಮೇಗೌಡ ಮಾತನಾಡಿ ಕಾವೇರಿ ತೀರದ ಭಾಗದ ಜನರಿಗೆ ಸಮಸ್ಯೆ ಉಂಟಾಗಿದೆ ಮತ್ತು ಬೆಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಬೆಂಗಳೂರು ಮೈಸೂರು ಮಂಡ್ಯ ಭಾಗದ ರೈತರಿಗೆ ಬೆಳೆಗಳಿಗೆ ನೀರಿಲ್ಲ ಇಂಥ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರ ತಮಿಳ್ ನಾಡಿಗೆ ನೀರು ಬಿಡುವಂತೆ ಆದೇಶ ಮಾಡಿದೆ ಅಂತ ಹೇಳಿ ರಾತ್ರರಾತ್ರಿ ಪ್ರತಿದಿನ ನೀರು ಬಿಡುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯದ 28 ಸಂಸದರ ಕಾವೇರಿ ವಿಚಾರದಲ್ಲಿ ಧ್ವನಿ ಎತ್ತದೆ
ಇರುವುದನ್ನು ಕರವೇ ಖಂಡಿಸುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಮತ್ತು ರಾಹುಲ್ ಗಾಂಧಿ ಜೊತೆ ಸೌಹಾರ್ದತವಾಗಿ ಮಾತನಾಡಿ ಬಗೆಹರಿಸುವ ಕೆಲಸ ಮಾಡಬೇಕಾಗಿದೆ.

ಇದರ ಜೊತೆಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳನ್ನ ಸಭೆ ಕರೆದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು ಮಧ್ಯಪ್ರವೇಶಸಿ ಶಾಂತಿಯುತವಾಗಿ ಮಾತನಾಡಿ ಕಾವೇರಿ ಸಮಸ್ಯೆ ಬಗೆಹರಿಸುವುದು ಈಗ ಪ್ರಸ್ತುತವಾಗಿದೆ ಇಲ್ಲವಾದರೆ ಕೇಂದ್ರ ಸರ್ಕಾರ ವಿರುದ್ಧ ಅಕ್ಟೋಬರ್ 10ರಂದು ದೆಹಲಿ ಚಲೋ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಬಿಜೆಪಿಯವರು ಕಾವೇರಿ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದಾರೆ ಅದೇ ರೀತಿ ದೆಹಲಿಯಲ್ಲಿ ಬಿಜೆಪಿಯವರು ಕಾವೇರಿ ನಿರ್ವಾಣ ಪ್ರಾಧಿಕಾರ ಕಚೇರಿ ಎದುರು ಯಾಕೆ ಪ್ರತಿಭಟನೆ ಮಾಡುತ್ತಿಲ್ಲ ದಮ್ಮು- ತಾಕತ್ತು ಅನ್ನುವರು ದೆಹಲಿಯಲ್ಲಿ ಹೋರಾಟ ಮಾಡಿ ತೋರಿಸಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಇದೇ ಕೆಲಸ ನಿಟ್ಟಿನಲ್ಲಿ ಕರವೇ ದೆಹಲಿಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರನ್ನ ರಾಜ್ಯದ್ಯಕ್ಷರಾದ ನಾರಾಯಣಗೌಡ ನೇತೃತ್ವದಲ್ಲಿ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು ಈ ಸಂದರ್ಭದಲ್ಲಿ ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಬಸಮ್ಮ .ಮಂಜುಳಮ್ಮ .ಶಾಂತಮ್ಮ. ಸಾಕಮ್ಮ . ಗೋಪಾಲ್ ದೇವರ ಮನಿ.ಬ್ಯಾಟರಿ ಜಬಿವುಲ್ಲಾ .ಜಿಎಸ್ ಸಂತೋಷ್ .ಜ ಎಸ್ ಬಿವುಲ್ಲಾ ಖಾನ್ ಭಾಷಾ ದಾದರ್ . ನಿಜಮ್ ಬಿಲಾಲ್ .ದಾದಾಪೀರ್. ಪೈಲ್ವಾನ್. ತನ್ವೀರ್ .ಗಿರೀಶ್ ಕುಮಾರ್ .ರವಿ ಕುಮಾರ್. ಲೋಕೇಶ್ ಎನ್ ಬಿ ಎ.ಅಭಿಷೇಕ್.ಎ.ಈಶ್ವರ್ .ಆಟೋ ರಫೀಕ್. ಖಾದರ್ ಭಾಷಾ .ಧೀರೇಂದ್ರ ನಾಗರಾಜ್. ತುಳಸಿರಾಮ್ .ಬಸವರಾಜ್. ಸಂಜು. ವಿನಯ್ .ಸಾಗರ್ .ಅಕ್ಷಯ್. ಗುರುಮೂರ್ತಿ .ಅಲ್ಲಾಭಕ್ಷಿ .