ವಿಜಯಪುರ: ಚಾಮರಾಜನಗರ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿ ಊಟಕ್ಕೆ ದಲಿತ ಮಹಿಳೆಯನ್ನು ನೇಮಕ ಮಾಡಿದರೆಂಬ ಒಂದೇ ಕಾರಣಕ್ಕೆ 21,ಮಕ್ಕಳನ್ನು ಶಾಲೆಯಿಂದ ಪೋಷಕರು ಕರೆದೊಯ್ದ ಅಮಾನವೀಯ ವಿಷಯವನ್ನು ಮಾಧ್ಯಮಗಳಲ್ಲಿ ನೋಡಿ ಕಾಂಗ್ರೆಸ್ ಯುವ ನಾಯಕ,ಅಹಿಂದ ಪರ ಸದಾ ತುಡಿಯುವ ಸಮಾನತೆಗಾಗಿ ಹಪಹಪಿಸುತ್ತಿರುವ ಸೋಮನಾಥ ಕಳ್ಳಿಮನಿಯವರು ಕಳವಳ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25,ನೇ ಸಾಲಿನಲ್ಲಿ ಸುಮಾರು 22,ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕ್ಕಾಗಿ ಪ್ರವೇಶ ಪಡೆದಿದ್ದರು.ಆ ಸರ್ಕಾರಿ ಶಾಲೆಯ ಬಿಸಿಊಟಕ್ಕೆ ದಲಿತ ಮಹಿಳೆಯನ್ನು ನೇಮಕ ಮಾಡಿದ್ದಾರೆಂಬಕಾರಣಕ್ಕೆ ಪೋಷಕರು ಸುಮಾರು21,ವಿದ್ಯಾರ್ಥಿಗಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗಿದ್ದು ಒಬ್ಬನೇ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದಾನೆಂಬ ವಿಷಯ ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜ್ಞಾನ,ಶಿಕ್ಷಣ,ಧಾರ್ಮಿಕತೆ ಮುಂದುವರೆದಂತೆ ಜಾತಿ ಅನಿಷ್ಟ ಪದ್ಧತಿಗಳು ನಿರ್ಮೂಲನೆ ಯಾಗಿ ಸಮಸಮಾಜ ಕಂಡು ಬೆಳಕಾಗಬೇಕಿತ್ತು ಆದರೆ ಇಂಥಾ ದಿನಗಳಲ್ಲಿಯೂ ಸಹ ಸಮಾನತೆ ಎಂಬುದು ಬೆಂಕಿಯಂತಾಗುತ್ತಿರುವುದು ಮಾನವ ಕುಲದ ದುರಂತ ವೆಂದರು.
ಸೋಮನಾಥ ಕಳ್ಳಿಮನಿಯವರು ವಿಜಯಪುರ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀ ಮತಿ ಸುಜಾತ ಕಳ್ಳಿಮನಿಯವರ ಪತಿಯವರು ಸಾಮಾಜಿಕ ಚಿಂತನೆ,ಜನಪರ ಕಾಳಜಿ,ಅಹಿಂದವರ್ಗದ ದ್ವನಿಯಾಗಿ ಮೇಲ್ವರ್ಗದ ಅಧಿಕಾರಶಾಹಿಗಳಿಗೆ ನುಂಗಲಾರದ ಬಿಸಿತುಪ್ಪದಂತಾಗಿದ್ದಾರೆ.ಇವರ ಸಮಾಜಪರ ಅಹಿಂದ ಪರ ಹೋರಾಟಕ್ಕೆ ಸ್ಲಾಘಿಸೋಣ.
ಬೆಳಕಾಗಬೇಕಾದ ಸಮಾನತೆ ಬೆಂಕಿಯಾಗ್ತಿದೆ ಸೋಮನಾಥ ಕಳ್ಳಿಮನಿ ಕಳವಳ
RELATED ARTICLES