Thursday, August 21, 2025
Homeಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಗಾಯಕಿ ಹಾಡು ಹಕ್ಕಿ ಮಂಜುಳಾಗೆ ಬೇಕಿದೆ ಆರ್ಥಿಕ ನೆರವು

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಗಾಯಕಿ ಹಾಡು ಹಕ್ಕಿ ಮಂಜುಳಾಗೆ ಬೇಕಿದೆ ಆರ್ಥಿಕ ನೆರವು

ಹಾವೇರಿ:ಒಂದುಕಾಲದಲ್ಲಿ ಸರಕಾರಿ ಶಾಲೆಯಲ್ಲಿ ಬಿಸಿ ಅಡುಗೆ ಮಾಡುತ್ತಾ ಬದುಕು ಕಟ್ಟಿಕೊಂಡು ಬಿಡುವಿನ ವೇಳೆಯಲ್ಲಿ ನೆಲ, ಜಲ ನಾಡು, ನುಡಿ ಪರಿಸರ ಹಾಗೂ ದೇಶಕ್ಕಾಗಿ ಮಡಿದ ಮಹನೀಯರ ಬಗ್ಗೆ ಹಲವಾರು ಗೀತೆಗಳನ್ನು ರಚಿಸಿ ಹಾಡುವ ಮೂಲಕ ಜನಮನದಲ್ಲಿ ನೆಲೆಗೊಂಡು, ನಮ್ಮ ಹೊಳಲಿನ ಸುರಭಿ ಮೆಲೋಡಿಸ್ ಸೇರಿದಂತೆ ನಾಡಿನ ಹಲವಾರು ತಂಡಗಳಲ್ಲಿ ಜಾತ್ರೆ ಮದುವೆ, ಶುಭ ಸಮಾರಂಭಗಳಲ್ಲಿ ತನ್ನ ಸುಶ್ರಾವ್ಯ ಕಂಠದಿಂದ ಹಾಡುವ ಮೂಲಕ ಎಲ್ಲರನ್ನು ರಂಜಿಸಿದ ಹಾವೇರಿ ಜಿಲ್ಲೆ ನೆಗಳೂರು ಗ್ರಾಮದ ಶ್ರೀಮತಿ ಮಂಜುಳಾ ಕೊಪ್ಪದ ಇವರ ಬದುಕು ಈಗ ಸಂಕಷ್ಟದಲ್ಲಿದೆ

ಅದೇಕೊ ಭಗವಂತ ಒಳ್ಳೆಯ ಸುಮಧುರ ಕಂಠ ಕೊಟ್ಟು ಕ್ಯಾನ್ಸರ್ ಎಂಬ ಕಾಯಿಲೆಯನ್ನು ಕೊಟ್ಟುಬಿಟ್ಟಿದ್ದಾನೆ. ಕಳೆದೆರಡು ವರ್ಷಗಳಿಂದ ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಗಾಯಕಿ, ನಾನಾ ಕಡೆ ಹಾಡುತ್ತಲೆ ಬಂದ ಅಲ್ಪ ಹಣದಿಂದ ಬದುಕು ಕಟ್ಟಿಕೊಂಡಿದ್ದಳು. ಏತನ್ಮದ್ದೆ ನಾಡಿನ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸುಮಾರು ಮೂರ್ನಾಲ್ಕು ಲಕ್ಷ ಹಣ ಖರ್ಚು ಮಾಡಿದ್ದಾರೆ. ಪತಿ ಪಕ್ಕೀರೇಶ ಕೂಲಿ ಕೆಲಸ ಮಾಡುತ್ತಲೆ ಸತಿಯ ಚಿಕಿತ್ಸೆಗಾಗಿ ಅವರಿರತ ಶ್ರಮಿಸುತ್ತಿದ್ದಾನೆ. ಆದರೆ ದಿನೆ ದಿನೆ ಕಾಯಿಲೆ ಉಲ್ಬಣವಾಗುತ್ತಾ ಹೋದಾಗ ಕಳೆದ ತಿಂಗಳು ಮಂಗಳೂರಿನ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡು ಬಂದಿದ್ದಾಳೆ. ಡಾಕ್ಟರ್ ಕಾಯಿಲೆ ವಾಸಿಯಾಗುವ ಸಂಪೂರ್ಣ ಭರವಸೆಯನ್ನು ನೀಡಿದ್ದಾರಾದರೂ ಗಾಯಕಿಗೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.
ಇನ್ನು ಒಂದುವರೆ ತಿಂಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಬೇಕಿದೆ. ಆದ್ದರಿಂದ ಗಾಯಕಿಯ ಹೆಚ್ಚಿನ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದ್ದು, ಸಹೃದಯಿಗಳು ಕಲಾಭಿಮಾನಿಗಳು ತಮ್ಮ ಕೈಲಾದ ಮಟ್ಟಿಗೆ ಗಾಯಕಿಗೆ ಸಹಾಯ ಮಾಡಬೇಕೆಂದು ಕೋರಿಕೆ.

ಗಾಯಕಿಯ ಸಹಾಯಾರ್ಥವಾಗಿ ಸದ್ಯದಲ್ಲೆ ಹೊಳಲು ಗ್ರಾಮದಲ್ಲಿ ನಮ್ಮ ಸುರಭಿ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಕನ್ನಡ ಕೋಗಿಲೆ ವಿನ್ನರ್ ಖಾಸಿಂ ಅಲಿ, ಹಾಗೂ ಕು. ಮಹನ್ಯ, ಸರಿಗಮಪ ಖ್ಯಾತಿ ಕು.ರುಬಿನಾ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸುವರು.

ನೊಂದ ಜೀವಕ್ಕೆ ಸಹಾಯ ಮಾಡುವವರು ಬ್ಯಾಂಕ್ ಖಾತೆ ಅಥವಾ ಪೊನ್ ಪೆ ಮೂಲಕ ಮಾಡಬಹುದು.

ಗಾಯಕಿಯ ಬ್ಯಾಂಕ್ ಹೆಸರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ನೆಗಳೂರು
ಖಾತೆ ಹೆಸರು ಮಂಜುಳಾ ಪಕ್ಕಿರೇಶ ಕೊಪ್ಪದ
ಖಾತೆ ಸಂಖ್ಯೆ, 89030381487

iFSC KVGB೦೦೦7208
ಪೋನ್, ಪೆ ನಂಬರ್. 9741269639

ವಂದನೆಗಳೊಂದಿಗೆ
ನಿಮ್ಮ
ಹೆಚ್.ಸುಭಾಸಚಂದ್ರ
ಸಾಹಿತಿ, ಗಾಯಕ ಹಾಗೂ ಪತ್ರಕರ್ತರು, ಹೊಳಲು.
ಮೊ.9902693845.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments