ದಾವಣಗೆರೆ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ದಲಿತ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (DICCI) ವತಿಯಿಂದ ಉದ್ಯಮ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಸಾಲ ಸೌಲಭ್ಯ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಉದ್ಘಾಟಿಸಿದರು.
ಶಿಕ್ಷಣ-ಕೌಶಲ್ಯ ಒಬ್ಬ ವ್ಯಕ್ತಿಗೆ ಎರಡು ಕಣ್ಣುಗಳಿದ್ದಂತೆ
ದಾವಣಗೆರೆ: ಶಿಕ್ಷಣ ಮತ್ತು ಕೌಶಲ್ಯ ಒಬ್ಬ ವ್ಯಕ್ತಿಗೆ ಎರಡು ಕಣ್ಣುಗಳಿದ್ದಂತೆ. ಶಿಕ್ಷಣ ಪಡೆದರೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ದಲಿತ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (DICCI) ವತಿಯಿಂದ’ ಉದ್ಯಮ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಸಾಲ ಸೌಲಭ್ಯ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ
ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯದಿಂದ ಪ್ರತಿಯೊಬ್ಬ ವ್ಯಕ್ತಿಯೂ ಉದ್ಯಮಿಯಾಗಿ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ. ಅಂತಹ ಉದ್ಯಮಶೀಲತೆಯನ್ನು ತಲಾತಲಾಂತರದಿಂದ ಶೋಷಣೆಗೆ ಒಳಗಾದವರಿಗೆ ಕೌಶಲ್ಯ ಕೊಡಬೇಕೆಂದು ದೊಡ್ಡ ಮಟ್ಟದ ಕನಸು ಇಟ್ಟುಕೊಂಡು ಅದನ್ನು ಅನುಷ್ಠಾನ ಮಾಡುತ್ತಿರುವ ಡಿಐಸಿಸಿ ಸಂಸ್ಥೆಯು ದೇಶಕ್ಕೆ ಒಂದು ಬಲಿಷ್ಠತೆಯನ್ನು ತುಂಬಿದೆ ಎಂದರು.
ಡಿಐಸಿಸಿ ಸಂಸ್ಥೆಯ ಬೆಳವಣಿಗೆಯನ್ನು ನೋಡಿದರೆ ಕೇವಲ ಒಬ್ಬರ ಗೆಲುವಲ್ಲ. ದೇಶದ ಪ್ರತಿಯೊಬ್ಬರ ಮತ್ತು ಪ್ರಜಾಪ್ರಭುತ್ವದ ಗೆಲುವಾಗಿದೆ. ಒಂದು ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರಬೇಕಾದರೆ, ಅಭಿವೃದ್ಧಿಯ ಪಥದತ್ತ ಸಾಗಬೇಕಾದರೆ ಕೈಗಾರಿಕೆಗಳ ಅವಶ್ಯಕತೆ ತುಂಬ ಇರುತ್ತದೆ ಎಂದರು.
ಸರ್ಕಾರಿ ಸಂಸ್ಥೆಯಲ್ಲಿ ಕೇವಲ ಕೆಲವು ಜನರಿಗೆ ಉದ್ಯೋಗ ಕಲ್ಪಿಸಿ ಕೊಡಬಹುದು. ಆದರೆ ಖಾಸಗಿ ಕ್ಷೇತ್ರದ ಕೈಗಾರಿಕಾ ಉದ್ಯಮದಲ್ಲಿ ಸಾವಿರಾರು, ಲಕ್ಷಾಂತರ ಜನರಿಗೆ ಉದ್ಯೋಗ ಕೊಡಬಹುದಾಗಿದೆ. ಜೊತೆಗೆ ಇಲ್ಲಿನ ಸ್ಥಳೀಯ ಉತ್ಪಾದನೆ ಹೆಚ್ಚಾಗುವುದರಿಂದ ದೇಶದ ಜಿಡಿಪಿ ಅಧಿಕವಾಗುತ್ತದೆ. ಜಿಡಿಪಿ ಹೆಚ್ಚಾದರೆ, ಪ್ರತಿಯೊಬ್ಬ ವ್ಯಕ್ತಿಯ ತಲಾದಾಯ ಹೆಚ್ಚಾಗುತ್ತದೆ. ಇದರಿಂದ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಉದ್ಯಮಿಗಳಾಗಲು ಕಾರಣವಾಗುತ್ತದೆ ಎಂದರು.
ಬುಡಕಟ್ಟು ವಿಭಾಗದ DICCI ರಾಷ್ಟ್ರೀಯ ಅಧ್ಯಕ್ಷ
ಡಿ. ರಾಜಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್ ಎಸ್ ಸಿ.-ಎಸ್.ಟಿ. ಹಬ್ ಶಾಖಾ ಮುಖ್ಯಸ್ಥರಾದ ಎ. ಕೋಕಿಲಾ, ಕೆ.ಎಸ್.ಎಫ್.ಸಿ. ಶಾಖಾ ಮುಖ್ಯಸ್ಥ ಮಾಲತೇಶ್ ಬಿ. ಹಮ್ಮಿಗಿ, ದಲಿತ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (DICCI) ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ವೈ. ಕಬ್ಬೂರು,
ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರಿ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಂ, ಬೇಬಿ ಸುನೀತಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಣಾಧಕಾರಿ, ದಾವಣಗೆರೆ, ಬೆಳ್ಳಿ ಗಂಗಾಧರ್ ಸೇರಿದಂತೆ ಇನ್ನಿತರರಿದ್ದರು.