ನಗರದ ಪ್ರತಿಷ್ಠಿತ ಎ.ಆರ್.ಎಂ ಪ್ರಥಮ ರ‍್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ದಿನಾಂಕ : ೧೨.೧೦.೨೦೨೩ ರಂದು ೨೦೨೩-೨೪ನೇ ಶೈಕ್ಷಣಿಕ ಸಾಲಿನ ಪ್ರಥಮ ರ‍್ಷದ ಬಿ.ಎ. ಬಿ.ಕಾಂ ವಿದ್ಯರ‍್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಉದ್ಘಾಟನಾ ಸಮಾರಂಭವನ್ನು ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ ಶಿವಕುಮಾರ ಕಣಸೋಗಿಯವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತಾಡಿದ ಅವರು ‘ ವಿದ್ಯರ‍್ಥಿಗಳಲ್ಲಿ ಶಿಸ್ತು ಬಹುಮುಖ್ಯ. ಪ್ರತಿದಿನ ಎದ್ದ ತಕ್ಷಣ ಏನಾದರೊಂದು ಕೆಲಸಮಾಡಬೇಕು. ಕೆಲಸ ಕಸ ಹೊಡೆಯುವುದರಿಂದಾದರೂ ಪರವಾಗಿಲ್ಲ. ಹೀಗೆ ನೀವು ಮಾಡಿದ್ದೇ ಆದಲ್ಲಿ ಪರಿರ‍್ತನೆ ಖಂಡಿತ. ಹಾಗಿಯೇ ಬೆಳಗಿನ ಜಾವ-೩.೪೫ ರಿಂದ ೫.೩೦ ಸಮಯ ತುಂಬಾ ಪ್ರಾಶಸ್ತ್ಯವಾದ ಕಾಲ. ಗಾಂಧಾರಿ, ಮಾಂಧಾರಿ ಕಾಲ. ಆ ಕಾಲದಲ್ಲಿ ಓದಿನ ಧ್ಯಾನ ಮಾಡಬೇಕು. ಇದರಿಂದ ಜ್ಞಾನ, ಕ್ರಿಯೆಯ, ಶಕ್ತಿಬರುತ್ತದೆ. ಇದನ್ನು ಮಾಡುವುದರಿಂದ ಇಡೀ ದಿನ ಹುಮ್ಮಸ್ಸು, ಚೈತನ್ಯ, ಬರುತ್ತದೆ ಎಂದು ನುಡಿದರು. ಮುಂದುವರೆದು ಜೀವನದಲ್ಲಿ ಸಕಾರಾತ್ಮಕ ಬೆಳವಣಗೆ ಬೆಳಸಿಕೊಳ್ಳಬೇಕು.ಗುರಿ ಮುಟ್ಟುವ ಸಂಕಲ್ಪ ಮಾಡಬೇಕು. ಕ್ರಿಯೆ ಎಂದರೆ ಜ್ಞಾನ, ಜ್ಞಾನವೆಂದರೆ ಕ್ರಿಯೆ. ಇವೆರಡು ಒಂದಕ್ಕೊಂದು ಪೂರಕವಾಗಿ ಬರುತ್ತವೆ. ಪರಿರ‍್ತನೆಗೆ ಅನುಭವ ಬೇಕು. ಆ ಅನುಭವ ಬರಬೇಕಾದರೆ ನೀವು ಕಲಿಯಬೇಕು. ಕಲಿಯಬೇಕೆಂಬ ಶಪತವನ್ನು ಇಂದೇ ಮಾಡಿಕೊಳ್ಳಿ. ಅದರಂತೆ ಮೂಲಕ ನಡೆದುಕೊಳ್ಳಿ. ನಿಮ್ಮ ಜೀವನ ಭದ್ರಮಾಡಿಕೊಳ್ಳಿ. ಕಲಿಯಲಿಕ್ಕೆ ನಾನಾ ಮರ‍್ಗಗಳಿವೆ. ನಾನಾ ಕೌಶಲಗಳಿವೆ. ಅವುಗಳನ್ನು ಹುಡುಕಲು ಮತ್ತು ಅಳವಡಿಸಿಕೊಳ್ಳಲು ನೀವು ಇಂದೇ ನರ‍್ಧಾರಮಾಡಿ. ನರ‍್ಧಾರ ಬಹಳ ಮುಖ್ಯ ಎಂದು ಹೇಳಿದರು. ಇದರ ಜೊತೆಯಲ್ಲಿ ವಿದ್ಯರ‍್ಥಿಗಳಿಗೆ ಪತ್ರಿಕೋದ್ಯಮದ ಮಹತ್ವವನ್ನು ತಿಳಿಸಿಕೊಟ್ಟರು.
ವೇದಿಕೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎನ್. ಲಿಂಗಣ್ಣ ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರು.ಐಕ್ಯೂಎಸಿ ಸಂಚಾಲಕರಾದ ಅಂಜಿನಪ್ಪ ಡಿ. ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ತ್ರಿವೇಣಿ, ವಿದ್ಯರ‍್ಥಿ ಪ್ರತಿನಿಧಿಗಳಾದ ನಿಖಿಲ್, ರ‍್ಶನ್, ಉಪನ್ಯಾಕರಾದ ಬಸವರಾಜ ವಿ ದಮ್ಮಳಿ, ಮನೋಹರ ಎಸ್.ಬಿ. ಮೊಹಮ್ಮದ್ ರಿಯಾಜ್. ನಾಗರಾಜು. ಜಿ. ಮಂಜುಳ. ಬೋಧಕೇತರರಾದ ಷಣ್ಮುಖಪ್ಪ ಮುನಿಸಿದ್ದಳ್ಳವರ,ಶಾರದಮ್ಮ, ಶಂಭು, ಫಕೀರಪ್ಪ ಮತ್ತು ವಿದ್ಯರ‍್ಥಿಗಳು ಉಪಸ್ಥಿತಿತರಿದ್ದರು.
ಕಾಡಜ್ಜಿ ಶಿವಪ್ಪ ಸ್ವಾಗತಿಸಿದರು. ಮೌನೇಶ್ವರ ಟಿ ಎನ್ ವಂದಿಸಿದರು. ಶಾಂತನಾಯ್ಕ ಹೆಚ್. ನಿರೂಪಿಸಿದರು.