Thursday, August 21, 2025
Homeಸಂಸ್ಕೃತಿಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮ

ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮ

ದಾವಣಗೆರೆ:ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಇದೇ ಶ್ರೀ ಮನೃಪ ಶಾಲಿವಾಹನ ಶಕೆ 1945ನೇ ಶ್ರೀ ಶೋಭಾಕೃತು ನಾಮ ಸಂವತ್ಸರದ ದಕ್ಷಿಣಯನೇ ಶರದೃತ್‌ ಅಶ್ವಯುಜ ಮಾಸ ಶುಕ್ಲಪಕ್ಷ ಪ್ರತಿಪದೆಯಿಂದ ವಿಜಯದಶಮಿಯವರೆಗೂ ಅಂದರೆ ದಿನಾಂಕ 15-10-2023 ನೇ ರವಿವಾರ ದಿಂದ ದಿನಾಂಕ 24-10-2023 ನೇ ಮಂಗಳವಾರ ದವರೆಗೆ ಪಂಚಾಮೃತಾಭಿಷೇಕ, ದುರ್ಗಾಹೋಮ ಮತ್ತು ಪುಷ್ಪಾಲಂಕಾರ ಪೂಜಾ ಕಾರ್ಯಕ್ರಮಗಳು ಇರುವ ಕಾರಣ ಸರ್ವಭಕ್ತಾಧಿಗಳು ತಮ್ಮ ಸೇವೆಯೊಂದಿಗೆ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಸಮಿತಿ ವಿನಂತಿಸಿದೆ.
ತಾ|| 15-10-2023 ನೇ : ರವಿವಾರ ಪ್ರತಿಪದೆಯಂದು ಪ್ರಾಥಃಕಾಲ ಗಣಪತಿ ಪೂಜೆ ಹಾಗೂ ಪುಣ್ಯಾಹ ವಾಚನ ಘಟಸ್ಥಾಪನೆ ಮತ್ತು ಧ್ವಜಾರೋಹಣ,
ಪ್ರತಿ ಐವಹ ಶ್ರೀ ಅಮ್ಮನವಲಗೆ ವೇದೋಕ್ತ ಪಂಚಾಮೃತಾಭಿಷೇಕ ಹಾಗೂ ವಿಶೇಷ ಅಲಂಕಾರ,
ತಾ|| 22-10-2023 ನೇ : ರವಿವಾರ ದಂದು
ತಾ|| 23-10-2023 ನೇ : ಸೋಮವಾರ ದಂದು
ದುರ್ಗಾಷ್ಠಮಿ ಆಯುಧ ಪೂಜಾ
ತಾ|| 24-10-2023 ನೇ : ಮಂಗಳವಾರ ದಂದು ವಿಜಯದಶಮಿ, ಹಾಗೂ ಸಂಜೆ 6-30ಕ್ಕೆ ಪಾಲಕಿ ಉತ್ಸವದೊಂದಿಗೆ ಬನ್ನಿ ಮುಡಿಯುವುದು ನಂತರ ಪ್ರಸಾದ ವಿನಿಯೋಗ ಇರುತ್ತದೆ.
ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿದಿನ ಸಂಜೆ 6-00 ರಿಂದ 7-00 ರವರೆಗೆ ಶ್ರೀ ಕಾಳಕಾದೇವಿ ಮಹಿಳಾ ಭಜನಾ ಮಂಡಳಿಯಿಂದ ಲತಾ ಸಹಸ್ರನಾಮ ಪಾರಾಯಣವನ್ನು ಹಾಗೂ ಸಂಜೆ 7-00 ರಿಂದ 9-00 ಗಂಟೆಯವರೆಗೆ ಶ್ರೀ ಡಿ. ಪರಮೇಶ್ವರಜಾ‌ ಮತ್ತು ಶ್ರೀ ಎನ್. ರಮೇಶಚಾರ್ ಇವರಿಂದ ಶ್ರೀದೇವಿಯ ಪಾರಾಯಣವನ್ನು ಏರ್ಪಡಿಸಲಾಗಿರುತ್ತದೆ. ನಂತರ ಶ್ರೀದೇವಿಗೆ ಮಹಾಮಂಗಳಾರತಿ ಮತ್ತು ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿನಿಯೋಗವಿರುತ್ತದೆ.
ಸರ್ವರಿಗೂ ಆದರದ ಸುಸ್ವಾಗತ | ಶ್ರೀ ಕಾಲಕಾದೇವಿ ವಿಶ್ವಕರ್ಮ ದೇವಸ್ಥಾನ ಅಡಳತ ಸಮಿತಿ ಟ್ರಸ್ಟ್ (ರಿ.) ದಾವಣಗೆರೆ ಪರವಾಗಿ, ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ : ದಸರಾ ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ಪಂಚಾಮೃತಾಭಿಷೇಕ ಮತ್ತು ಪೂಜಾ ಸೇವೆಗೆ ರೂ. 101/- ಪ್ರತಿ ಕುಟುಂಬದಿಂದ ಉತ್ಸವ ಮೂರ್ತಿಯ ಅಭಿಷೇಕ ಸೇವೆಗೆ ರೂ. 251/- ಶ್ರೀ ದುರ್ಗಾಹೋಮದ ಸೇವೆಗೆ ರೂ. 501/-, ಅಭಿಷೇಕ ವಿಶೇಷ ಅಲಂಕಾರ ಸೇವೆಗೆ ರೂ. 1001/- ಹಾಗೂ ಶ್ರೀ ದುರ್ಗಾಹೋಮ+ಅಭಿಷೇಕ+ವಿಶೇಷ ಅಲಂಕಾರ ಸೇವೆಗೆ ರೂ. 1501/-ಗಳನ್ನು ನಿಗದಿಪಡಿಸಲಾಗಿದ್ದು, ದುರ್ಗಾಷ್ಟಮಿ ದಿನದಂದು ದುರ್ಗಾಹೋಮವನ್ನು ಏರ್ಪಡಿಸಲಾಗಿರುತ್ತದೆ. ಸರ್ವ ಭಕ್ತಾಧಿಗಳು ಅಧಿಕೃತ ರಸೀದಿಯನ್ನು ಪಡೆದು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಬ್ರಹ್ಮಶ್ರೀ ಎ. ಟೀಕಾ ಆಚಾರ್ಯ ಇವರು ನಡೆಸಿಕೊಡುತ್ತಾರೆ ಎಂದು ಆಡಳಿತಮಂಡಳಿ ಪ್ರಕಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments