ದಾವಣಗೆರೆ.ಅ.18- ಕಕ್ಕರಗೊಳ್ಳದ ವಿನಯ್ ಕುಮಾರ್ ಜಿ.ಬಿ. ಅಭಿಮಾನಿ ಬಳಗದ ಆಶ್ರಯದಲ್ಲಿ ವಿಕಲಚೇತನರಿಗೆ ವೀಲ್ ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಸಮಾರಂಭವನ್ನು ದಿನಾಂಕ 19-10-2023ರ ಗುರುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಎಸ್.ಎಸ್. ಬಡಾವಣೆಯ ‘ಎ’ ಬ್ಲಾಕ್‌ನಲ್ಲಿರುವ ಜನಸಂಪರ್ಕ ಕಚೇರಿ, ಸಂ.2415/45, 10ನೇ ಅಡ್ಡ ರಸ್ತೆ, ಅಥಣಿ ಕಾಲೇಜು ರಸ್ತೆಯ ಕೊನೆಯ ಭಾಗದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಹದಡಿ, ಹೊಸನಾಯಕನಹಳ್ಳಿ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ವಿದ್ಯಾವರೇಣ್ಯ ಮುರುಳೀಧರ ಸ್ವಾಮಿಗಳು ಹಾಗೂ ತಾಲೂಕಿನ ಶ್ರೀಕ್ಷೇತ್ರ ಯರಗುಂಟೆಯ ಶ್ರೀ ಗುರುಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಶ್ರೀ ಪರಮಪೂಜ್ಯ ಪರಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಬೆಂಗಳೂರಿನ ಇನ್‌ಸೈಟ್: ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿರುವ ವಿನಯ್ ಕುಮಾರ್ ಜಿ.ಬಿ. ಕಕ್ಕರಗೊಳ್ಳ ಇವರು ಉಪಸ್ಥಿತರಿರುವರು.
ಈಗಾಗಲೇ ನೊಂದಾಯಿಸಿರುವ ಫಲಾನುಭವಿಗಳು ಕಾರ್ಯಕ್ರಮದ ಮುನ್ನ ಹಾಜರಿರಲು ಕೋರಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿನಯ್ ಕುಮಾ ಅಭಿಮಾನಿಗಳು, ಯುವಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.