ಮೂಡಲಗಿ: ನ,04-ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಶ್ರೀ ಗಿರಿಮಲ್ಲೇಶ್ವರ ಆಶ್ರಮದ 108 ನೆಯ ಸಮರ್ಥ ಸದ್ಗುರು ಶ್ರೀ ಮಾದವಾನಂದ ಪ್ರಭುಜಿ ಅವರ ಜನ್ಮ ಜಯಂತಿ ಜರುರುಗಿತು. ಜಾತಿ ಬೇಧ ಭಾವ ಮಾಡದೆ ಸಕಲ ಜೀವರಾಶಿಗಳ ಲೇಸನ್ನೇ ಬಯಸಿದವರು ಸಮರ್ಥ ಸದ್ಗುರು ಮಾಧವಾನಂದರು. ಕರ್ಣಾಟಕ ಏಕೀಕರಣ ಗೋವಾ ಚಳುವಳಿ ಮಾಡಿದ ಮಹಾನ ಪುರುಷರು ಸಾಕಷ್ಟು ಅಂತರ್ಜಾತಿ ವಿವಾಹ ಮಾಡಿಸಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿ ಜಗತ್ತನ್ನು ಉದ್ದಾರಮಾಡಿದ್ದಾರೆ ಅಂತಹ ಮಹಾತ್ಮರ ಮಾರ್ಗದರ್ಶನದಲ್ಲಿ ಸಾಗಿ ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ನಾಗನೂರ ಕಾವ್ಯಾಶ್ರೀ ಅಮ್ಮನವರು ಹೇಳಿದರು. ಹಳ್ಳೂರಗ್ರಾಮದ ಶ್ರೀ ಗಿರಮಲ್ಲೆಶ್ವರ ಆಶ್ರಮದಲ್ಲಿ ನಡೆದ ಸಮರ್ಥ ಸದ್ಗುರು ಶ್ರೀ ಮಾಧನಂದ ಪ್ರಭೂಜಿಯವರ 108 ನೇ ಜನ್ಮ ಜಯಂತಿ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ಬಡವ ದಿನ ದಲಿತರ ಬಾಳಿಗೆ ಬೆಳಕಾಗಿ ಸಾಮಾಜದ ಹಿತರಕ್ಷಣೆ ಶ್ರಮ ಪಟ್ಟವರು ಹೆಸರು ಅಜರಾಮರವಾಗಿರುತ್ತದೆ. ತಂದೆ ತಾಯಿಯಲ್ಲಿ ಮೊದಲು ಸಂಸ್ಕಾರ ನೀತಿ ಧರ್ಮ ವಿದ್ದರೆ ಮಕ್ಕಳು ಕೂಡಾ ಸನ್ಮಾರ್ಗದಲ್ಲಿ ಸಾಗುತ್ತಾರೆ. ಆಸ್ತಿ ಅದಿಕಾರ ಅಂತಸ್ತುಕ್ಕಿಂತ ಸಂಸ್ಕಾರವಿದ್ದರೆ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನ ದೊರೆಯುತ್ತದೆ.ಪ್ರತಿಯೊಬ್ಬರಲ್ಲಿ ದೇವರಿದ್ದಾನೆ ನಿಷ್ಕಾಮ ಭಕ್ತಿ ದೇವರಿಗೆ ಸಲ್ಲುತ್ತದೆ. ಗುರುವಿನ ಹಸ್ತ ಮಸ್ತಕದ ಮೇಲೆವಿರಬೇಕು. ಸ್ತ್ರೀಯರು ತೊಟ್ಟಿಲ ತೂಗುವ ಕೈ ಜಗತ್ತನ್ನು ತೂಗುವ ಶಕ್ತಿ ಅವರಲ್ಲಿದೆ. ತಾಯಿ ಪಾದದಲ್ಲಿ ಸ್ವರ್ಗವನ್ನೇ ಕಾಣಬಹುದು ಸ್ವರ್ಗ ನರಕ ಬೇರಿಲ್ಲ ನಾವು ಮಾಡಿದ ಪಾಪ ಪುಣ್ಯದ ಪಲ ಅನುಭವಿಸಬೇಕಾಗುತ್ತದೆ. ದುಸ್ಟ ವೈರಿಗಳು ಕಾಡಿದರೂ ದೇವರ ದಯೆ ಒಂದಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಒಬ್ಬರು ಮೇಲೆ ಒಬ್ಬರು ಇಟ್ಟಂತ ನಂಬಿಕೆ ವಿಶ್ವಾಸ ಕಳೆದುಕೊಳ್ಳಬಾರದು ಅನುಮಾನ ಪಡುವುದು ಒಳ್ಳೆಯದಲ್ಲ ಎಂದು ಹೇಳಿದರು. ಭರತೇಶ ಉಪಾದ್ಯೆ ಮಾತನಾಡಿ ಮೊಬೈಲ ಧಾರಾವಾಹಿ ನೋಡಿ ಇತ್ತೀಚಿಗೆ ಜನರು ದಾರಿ ತಪ್ಪುತ್ತಿದ್ದಾರೆ. ಪುರಾಣ ಪ್ರವಚನ ಮಹಾತ್ಮರ ಮಾತುಗಳನ್ನು ಕೇಳಿ ಸನ್ಮಾರ್ಗದಲ್ಲಿ ಸಾಗಬೇಕು. ಸಾಕಷ್ಟು ಜನ ದುಡಿಯದೆ ಯಾರ ಹೆಸರು ಹೇಳಿಕೊಂಡು ಬೇರೆಯವರ ಜೊತೆ ವಿನಾಕಾರಣ ತಿರುಗಾಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸತ್ಯದ ಕಾಯಕ ಮಾಡಿ ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಸುಖ ಜೀವನ ನಡೆಸಲು ಸಾಧ್ಯ. ಶರೀರವನ್ನು ನಾವೂ ಕಾಪಾಡಿ ಕೊಂಡು ಹೋಗಬೇಕು. ಪುಣ್ಯವಂತರಿಗೆ ಮಾತ್ರ ಆದ್ಯಾತ್ಮ ತಿಳಿಯುತ್ತದೆ. ಆತ್ಮ ಶಕ್ತಿಯಿಂದ ಜಗತ್ತನ್ನೆ ಗೆಲ್ಲಬಹುದೆಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಅವರಿಗೆ ಮಾದವಾನಂದ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಬಾಳಯ್ಶಾ ಹಿರೇಮಠ. ಲಕ್ಷ್ಮಣ ಹೊಸಮನಿ.ಕಲ್ಲಪ್ಪ ಹುಬ್ಬಳ್ಳಿ. ದುಂಡಪ್ಪ ಕತ್ತಿ. ಲಕ್ಷ್ಮಣ ಕೂಲಿಗೊಡ. ಬಸವರಾಜ ಕೌಜಲಗಿ.ಗಿರಮಲ್ಲ ಸಂತಿ. ಸಂಗಪ್ಪ ದುರದುಂಡಿ. ಅಶೋಕ ಕಾಗೆ.ರಮೇಶ ಬಿರಾದಾರ. ಸೇರಿದಂತ ಅನೆಕರಿದ್ದರು.ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ ,ನಿರೂಪಸಿದರು. ಶಿಕ್ಷಕ ಅಶೋಕ ಹೆಗ್ಗಾನಿ ವಂದಿಸಿದರು.