ವಿಜಯಪುರ:ದಿನಾಂಕ:30/11/2023 ರಂದು ಕನಕದಾಸರ ಜಯಂತಿಯನ್ನು ವಿಜಯಪುರ ಜಿಲ್ಲಾಡಳಿತದಿಂದ ಆಚರಿಸಲು ಅಪರಜಿಲ್ಲಾಧಿಕಾರಿಗಳು ವಿಜಯಪುರ ಇವರ ಅಧ್ಯಕ್ಷತೆಯಲ್ಲಿ ಕನಕ ಜಯಂತ್ಯೋತ್ಸವ ಆಚರಣೆಯ ಸಿದ್ಧತಾ ಸಭೆಯು ನಡೆಯಿತು. ಈ ಪೂರ್ವಸಿದ್ಧತಾಸಭೆಯಲ್ಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶ ಕರಾದ ನಾಗರಾಜ, ಸರ್ವ ಸಮಾಜದ ಮುಖಂಡರು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಜಯಂತ್ಯೋತ್ಸವ ಯಶಸ್ವಿಯಾಗಿ ನಡೆಸಲು ಸಲಹೆ ಸೂಚನೆಗಳನ್ನು ನೀಡಿದರು.
ಕನಕದಾಸರ ಜಯಂತ್ಯುತ್ಸವದಲ್ಲಿ ವಿಜಯಪುರ ನಗರದ ಹಾಲುಮತ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೊರಿದರೆಂದು ಈ ಸಭೆಯಲ್ಲಿ ಭಾಗವಹಿಸಿದ್ದ ಶ್ರೀ ದೇವಕಾಂತ ಬಿಜ್ಜರಗಿಯವರು ತಿಳಿಸಿದ್ದಾರೆ.