Monday, December 23, 2024
Homeಶಿಕ್ಷಣಭಾಷಾ ಕೌಶಲ್ಯವೇ ಯಶಸ್ಸಿನ ದಾರಿ:ಪ್ರೊ ದಾದಪಿರ. ಬೀ ಸಿ

ಭಾಷಾ ಕೌಶಲ್ಯವೇ ಯಶಸ್ಸಿನ ದಾರಿ:ಪ್ರೊ ದಾದಪಿರ. ಬೀ ಸಿ


  • ದಾವಣಗೆರೆ : ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿ ಆಗಬೇಕೆಂದರೆ ಅದಕ್ಕೆ ತಕ್ಕಂತಹ ಉತ್ತಮ ಬಾಷಾ ಕೌಶಲ್ಯ ಗಳನ್ನು ಬೆಳೆಸಿಕೊಂಡಾಗ ಅದು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ದಾದಪಿರ ಬೀ ಸಿ ರವರು ಹೇಳಿದರು.
    ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಉದ್ಯೋಗ ಮತ್ತು ಕೌಶಲ್ಯ ಕೋಶದ ವತಿಯಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉನ್ನತಿ ಫೌಂಡೇಶನ ವತಿಯಿಂದ ನಡೆದ 30 ದಿನಗಳ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
    ಉದ್ಯೋಗ ಮಾರುಕಟ್ಟೆ ಎಂಬುದು ಕೌಶಲ್ಯಗಳ ಆಧಾರದ ಮೇಲೆ ಅವಲಂಬಿತವಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಭಾಷೆ ಯಾವುದಾದರೂ ಪರವಾಗಿಲ್ಲ ಅದರ ಪ್ರಭುತ್ವ ಸಾಧಿಸುವುದು ತುಂಬಾ ಮುಖ್ಯ ಹಾಗಾಗಿ ಈ ತರಹದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಅವುಗಳನ್ನು ಗಳಿಸಿಕೊಂಡರೆ ನೀವು ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು. ಸಂವಹನ ಕೌಶಲ್ಯ ಕಲಿಕೆ ಸಂದರ್ಶನ ಎದುರಿಸುವಿಕೆ ಇಂಥ ಮುಂತಾದ ಕೌಶಲ್ಯಗಳನ್ನು ಈ ತರಹದ ಕಾರ್ಯಕ್ರಮಗಳಿಂದ ಕಾಲೇಜಿನಲ್ಲಿ ಆಯೋಜನೆ ಮಾಡಿದಾಗ ಅದರ ಪ್ರಯೋಜನ ಪಡೆದುಕೊಂಡು ಯಶಸ್ವಿಯಾಗಲು ಕರೆ ನೀಡಿದರು.

ಪ್ಲೇಸ್ಮೆಂಟ್ ಸೆಲ್ ನ ಸಂಚಾಲಕರಾದ ಪ್ರೊ ವೆಂಕಟೇಶ ಬಾಬುರವರು ಮಾತನಾಡುತ್ತಾ ಉನ್ನತಿ ಫೌಂಡೇಶನ್ ಪ್ರತಿವರ್ಷ ಕಾಲೇಜಿನಲ್ಲಿ 30 ದಿನಗಳ ಕಾರ್ಯಗಾರವನ್ನು ಹಮ್ಮಿಕೊಂಡಿರುತ್ತೇದೆ ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಉದ್ಯೋಗ ಕೌಶಲ್ಯ ತರಬೇತಿಗಳು ಜೀವನ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯನ್ನು ಬರೀ ಪಾಠ ಪ್ರವಚನಗಳಿಂದ ಅಷ್ಟೇ ಅಲ್ಲದೆ ಚಟುವಟಿಕೆಗಳ ಮೂಲಕ ಗುಂಪು ಚರ್ಚೆಗಳ ಮೂಲಕ ಕ್ರಿಯಾತ್ಮಕವಾಗಿ ಕಲಿಯಬಹುದು ಎಂಬುದನ್ನು ಈ ಕಾರ್ಯಗಾರದ ಮೂಲಕ ಅವರಿಗೆ ಮನವರಿಕೆ ಮಾಡಿ ಮುಂದಿನ ಉದ್ಯೋಗ ಮಾರುಕಟ್ಟೆಗೆ ಸದೃಢಗೊಳ್ಳುವಲ್ಲಿ ಬೇಕಾಗುವ ಎಲ್ಲಾ ರೀತಿಯ ಕೌಶಲ್ಯಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ಪ್ರತಿ ವರ್ಷ ಕಾಲೇಜಿನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಆ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಪ್ರೊ ರಾಜ್ ಮೋಹನ್ ಎನ್ ಆರ್ ರವರು ಮಾತನಾಡುತ್ತಾ ಉನ್ನತಿ ಸಂಸ್ಥೆಯು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ತರಹದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಈ ತರ ಕಾರ್ಯಕ್ರಮಗಳು ಬೇರೆ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೋಸ್ಕರ ಆಯೋಜನೆ ಮಾಡುವುದಿಲ್ಲ ಸರ್ಕಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೌಶಲ ಅಭಿವೃದ್ಧಿ ಕಾರ್ಯಗಾರಗಳನ್ನು ಮಾಡುತ್ತಿರುವುದು ಸ್ವಾಗತ. ವಿದ್ಯಾರ್ಥಿಗಳು ತಮಗೆ ಉತ್ತಮವಾಗಿ ಸ್ಪಂದಿಸಿ ಪ್ರಯೋಜನ ಪಡೆದುಕೊಂಡರು ಎಂದು ಹೇಳಿದರು.
ಪ್ರೊ ನರೇಶ್ ಯು ಸಿ ರವರು ಮಾತನಾಡುತ್ತಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮವಾಗಿ ಪಾಲ್ಗೊಂಡರೆ ಏನನ್ನಾದರೂ ಕಲಿಯಲು ಸಾಧ್ಯ ಆಗ ಕ್ರಿಯಾತ್ಮಕತೆ ಹೊಸತನ ತಮ್ಮಲ್ಲಿ ಮೂಡಿ ಬರಲು ಅದು ಸಹಾಯವಾಗುತ್ತದೆ ಹಾಗಾಗಿ ಕಲಿಯುವಾಗ ಒಳಗೊಳ್ಳುವಿಕೆ ತುಂಬಾ ಅನುಕೂಲ ಮಾಡುತ್ತದೆ ಅದನ್ನು ಮುಂದೆ ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಉನ್ನತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಪವನ್ ಮತ್ತು ಅಪೂರ್ವ ರವರು ಕಾರ್ಯಕ್ರಮದ ಉದ್ದೇಶ ಮತ್ತು ಧ್ಯೇಯಗಳನ್ನು ಹೇಳಿದರು
ಕಾರ್ಯಕ್ರಮ ಕುರಿತು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅದಿತಿ ರವರು ನಿರೂಪಿಸಿದರು. ಕಾರ್ತಿಕ್ ಸ್ವಾಗತಿಸಿದರು ಸಮೀರ ರವರು ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments