ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಬೆಂಗಳೂರು. ವತಿಯಿಂದ ಒಕ್ಕೂಟದ ರಾಜ್ಯಾಧ್ಯಕ್ಷರು ಶೋಷಿತ ಸಮುದಾಯಗಳ ಪ್ರಧಾನ ಸಂಚಾಲಕರಾದ. ಶ್ರೀ ಕೆಎಂ ರಾಮಚಂದ್ರಪ್ಪನವರು ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರು .ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕರಾದ ಶ್ರೀ ಮಾವಳ್ಳಿ ಶಂಕರ್ ಅವರ ನೇತ್ರತ್ವದಲ್ಲಿ. ಕೂಡಲೇ ಕಾಂತರಾಜ್ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಸ್ವೀಕರಿಸಬೇಕು ಮತ್ತು ಆ ಮೂಲಕ ಎಲ್ಲ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಬೇಕೆಂದು ಮತ್ತು ನಾಡಿನ ಎಲ್ಲಾ ದಲಿತ ಸಮುದಾಯ. ಹಿಂದುಳಿದ ವರ್ಗಗಳ ಸಮುದಾಯ .ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡು. ರಾಜ್ಯಮಟ್ಟದ ಶಕ್ತಿ ಸಮಾವೇಶವನ್ನು ದಾವಣಗೆರೆ ಅಥವಾ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಯಿತು. ಈ ಮಹಾ ಸಮಾವೇಶ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಂದ ಉದ್ಘಾಟಿಸಲು ನಿರ್ಣಯಿಸಲಾಯಿತು. ಈ ಸಭೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ. ಎಲ್ಲ ಸಮುದಾಯಗಳ ರಾಜ್ಯಾಧ್ಯಕ್ಷರುಗಳು. ಮುಖಂಡರುಗಳು. ಭಾಗವಹಿಸಿ ಸಲಹೆ ಸೂಚನೆ ನೀಡಿ. ಸಭೆ ಯಶಸ್ವಿಗೊಳಿಸಿದರು. ಎಂದು ಮಹಾಂತೇಶ ಎಸ್ ಕೌಲಗಿ. ರಾಜ್ಯ ಸಂಚಾಲಕರು. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಕಲ್ಬುರ್ಗಿ ಇವರು ತಿಳಿಸಿದ್ದಾರೆ.
ಕೂಡಲೇ ಕಾಂತರಾಜ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬೇಕೆಂದು ಅಗ್ರಹಿಸಿ ಅಹಿಂದ ಭೃಹತ್ ಶಕ್ತಿಸಮಾವೇಶಕ್ಕೆ ನಿರ್ಧಾರ
RELATED ARTICLES