ಇಲಕಲ್: ಶ್ರೀ ಸಿದ್ದರಾಮೇಶ್ವರ ಮಹಿಳಾ ಶಿಕ್ಷಣ ಕ್ರೀಡಾ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (ರಿ) ಗುಡೂರ (ಎಸ್.ಸಿ)ತಾ|| ಇಲಕಲ್ಲ ಜಿ|| ಬಾಗಲಕೋಟ ಇವರು
161 ನೇ ಶ್ರೀ ಸ್ವಾಮಿ ವಿವೇಕಾನಂದರ ಮತ್ತು 851 ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ-2024 ಯನ್ನು ನಿಯೋಜಿಸಲಾಗಿದೆ.
ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ
: ಸ್ಪರ್ಧೆಯ ನಿಯಮಗಳು :
- ಚಿತ್ರವು A4 ಅಳತೆಯಲ್ಲಿ ಡ್ರಾಯಿಂಗ್ ಹಾಳೆಯಲ್ಲಿ ಇರುವುದು. ಸಣ್ಣ ಅಳತೆಯ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
- ಚಿತ್ರದ ಹಿಂಬದಿಯಲ್ಲಿ ವಿಧ್ಯಾರ್ಥಿಯ ಹೆಸರು, ಶಾಲೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸುವುದು.
- ಚಿತ್ರಗಳು 28-01-2024 ರ ಒಳಗೆ ಅಂಚೆ, ಅಥವಾ, ಕೊರಿಯರ್. ಮೂಲಕ ಕಳಿಸುವುದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
- ಬಹುಮಾನಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳನ್ನು ಕಾರ್ಯಕ್ರಮದ ದಿನ ಸನ್ಮಾನಿಸಲಾಗುವುದು.
- ಪ್ರತಿ ವಿಭಾಗದಲ್ಲಿ ಸಮಾನ 3 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ಹಾಗೂ ಅತ್ಯುತ್ತಮ 10 ಕಲಾಕೃತಿಗಳಿಗೆ ಮೆಚ್ಚಿಗೆ ಪ್ರಶಸ್ತಿ ಪತ್ರಗಳು, ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ನಿಡಲಾಗವುದು.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
: ಚಿತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಶ್ರೀ ಸಿದ್ದರಾಮೇಶ್ವರ ಮಹಿಳಾ ಶಿಕ್ಷಣ ಕ್ರೀಡಾ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (ರಿ) ಗುಡೂರ (ಎಸ್.ಸಿ) 587202 ತಾ॥ ಇಲಕಲ್ಲ ಜಿ॥ ಭಾಗಲಕೋಟ
ಹುನಗುಂದ ರೋಡ್, ಸಿದ್ದರಾಮೇಶ್ವರ ದೇವಸ್ಥಾನ ಹಲಕುರ್ಕಿ ಕಾಂಪ್ಲೇಕ್ಸ್
ಸಂಪರ್ಕಿಸಿ : ಶ್ರೀ ಮಹಾಂತೇಶ ಎಚ್. ಹಲಕುರ್ಕಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳ ಪುರಸ್ಕೃತರು- 9663772606