ದಾವಣಗೆರೆ:ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ. ಐ.ಕ್ಯೂ.ಎ.ಸಿ ಘಟಕ, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವುಗಳ ಸಹಯೋಗದಲ್ಲಿ ದಿನಾಂಕ:29.08.2025 ರಂದು ದಾವಣಗೆರೆಯ ನೇತಾಜಿ ಒಳಾಂಗಣ ಕ್ರೀಣಾಂಗಣದಲ್ಲಿ ಪುರುಷ ಮತ್ತು ಮಹಿಳೆಯರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮತ್ತು ದಾ ವಿ ವಿ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾರ್ಯಕ್ರಮವನ್ನು ವಿಶ್ರಾಂತ ದೈಹಿಕ ನಿರ್ದೇಶಕರಾದ ಡಾ ರಾಜಕುಮಾರ ಎಂ ಎಸ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಪ್ರೊ ಎನ್ ಲಿಂಗಣ್ಣ ವಹಿಸಿಕೊಂಡು ಮಾತನಾಡಿದ ಅವರು ಕ್ರೀಡೆ ಮಾನಸಿಕವಾಗಿ, ದೈಹಿಕವಾಗಿ ಮನುಷ್ಯರನ್ನು ಸದೃಢರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಆರೋಗ್ಯ, ಜ್ಞಾನ ಸಂಪಾದಿಸಿಕೊಳ್ಳಬೇಕೆಂದರು.
ಮುಂದುವರೆದು ಕ್ರೀಡೆ ಸ್ಪರ್ಧಾತ್ಮಕವಾಗಿ ಇರಬೇಕೆ ಹೊರತು ದ್ವೇಷದಿಂದ ಕೂಡಿರಬಾರದು. ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವ ಮುಖ್ಯವಾಗುತ್ತದೆ. ಇಲ್ಲಿಗೆ ಬಂದಿರುವ ಪ್ರತಿ ತಂಡವೂ ಗೆಲ್ಲುವುದಕ್ಕೆ ಬಂದಿರುವುದು. ಆದರೆ ಎಲ್ಲರೂ ಗೆಲ್ಲುವುದಕ್ಕೆ ಆಗುವುದಿಲ್ಲ. ಒಂದು ತಂಡವಷ್ಟೆ ಗೆಲ್ಲುತ್ತದೆ. ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.
ಮುಖ್ಯ ಅತಿಥಿಯಾಗಿ ಡಾ ಶಂಕ್ರಪ್ಪ ಸಿ, ಶ್ರೀ ಬಾಲಚಂದ್ರ ಬಿ ಆರ್ , ಪ್ರಾಂಶುಪಾಲರಾದ ಕಾಡಜ್ಜಿ ಶಿವಪ್ಪ ಸಿ. ಐ.ಕ್ಯೂ.ಎ.ಸಿ ಸಂಚಾಲಕ ಅಂಜಿನಪ್ಪ, ಡಿ. ಪಂದ್ಯಾವಳಿ ಸಂಘಟಕ ಬಸವರಾಜ ವಿ ದಮ್ಮಳಿ, ಪಿ ಜಿ ಸಂಯೋಜಕ ಮೌನೇಶ್ವರ ಟಿ ಎನ್, ಮಹಮ್ಮದ್ ರಿಯಾಜ್.ಮಂಜುಳಾ ಎಂ ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೋಧಕೇತರರಾದ ಷಣ್ಮಖಪ್ಪ ಎಂ, ಶಾಂತಪ್ಪ ಜಿ, ಫಕ್ಕೀರಪ್ಪ, ಶಂಭುಲಿಂಗ, ಚಂದ್ರಪ್ಪ ಡಿ ವಿವಿಧ ಕಾಲೇಜುಗಳಿಂದ ಬಂದ ದೈಹಿಕ ನಿರ್ದೇಶಕರಾದ ಡಾ.ಚಂದ್ರಶೇಖರ್, ಕಲ್ಲೇಶಪ್ಪ, ಡಾ ಶಿವಶಂಕರ, ಒಡೆಯರ್, ಸತೀಶ್,ಧನಂಜಯ ಆರ್. ಡಾ ಹರೀಶ್, ಸಂತೋಷ್. ಸದಾಶಿವಪ್ಪ, ಮುತ್ತೇಶ್, ಪುಂಡಲೀಕ, ಮೊದಲಾದವರು ಭಾಗವಹಿಸಿದ್ದರು.
ಭ್ಯಾಗ್ಯ ಪ್ರಾರ್ಥಿಸಿದರು. ಮನೋಹರ ಎಸ್ ಬಿ ಸ್ವಾಗತಿಸಿದರು. ಡಾ ರಾಕೇಶ್ ವಂದಿಸಿದರು. ಡಾ ವೀರೇಂದ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.