ದಾವಣಗೆರೆ:ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ ಅಲ್ಯೂಮಿನಿ ಅಸೋಸಿಯೇಷನ್ (ರಿ) ವತಿಯಿಂದ ಕರ್ನಾಟಕ ಸಂಭ್ರಮ ೫೦ನೇ ಸುವರ್ಣ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಸಿದ್ದಗಂಗಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ಜಸ್ಟಿನ್ ಡಿಸೌಜಾ. ಮುಖ್ಯಸ್ಥರು ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ ದಾವಣಗೆರೆ ಇವರು ಕನ್ನಡ ಭುವನೇಶ್ವರಿಯ ಛಾಯಾಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಎಲ್ಲರನ್ನು ಉದ್ದೇಶಿಸಿ ಕನ್ನಡ ಭಾಷೆಯ ಬಗ್ಗೆ ಮತ್ತು ಚಿತ್ರಕಲಾ ಕ್ಷೇತ್ರದ ಬಗ್ಗೆ ಮಾತನಾಡುತ್ತಾ ಪ್ರತಿಯೊಬ್ಬರು ಶಬ್ದಕೋಶವನ್ನು ಅರ್ಥಪೂರ್ಣವಾಗಿ ಅಭ್ಯಾಸ ಮಾಡಬೇಕು ಕನ್ನಡ ಸಾಹಿತ್ಯ ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸುವುದರ ಜೊತೆಗೆ ದಾವಣಗೆರೆಯ ದೃಶ್ಯ ಕಲಾ ಕಾಲೇಜಿನ ವಿದ್ಯಾರ್ಥಿಗಳ ಸಮಾಜಕ್ಕೆ ಕೊಟ್ಟ ಕೊಡುಗೆಗಳನ್ನು ನೆನಪಿಸುತ್ತ ಕಾಲೇಜಿನಲ್ಲಿ ಕಲಿತ ಕಲೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ಹೆಸರನ್ನು ತರುತ್ತಿರುವ ಕಾರ್ಯವನ್ನು ಸಂದರ್ಭದಲ್ಲಿ ತಿಳಿಸಿದರು ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಜೊತೆಗೂಡಿ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಚಿತ್ರಕಲಾ ಕ್ಷೇತ್ರದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಮಾತನಾಡಿದರು.ಮುಖ್ಯ ಅತಿಥಿಯಾಗಿ ಡಾ| ಜೈ ರಾಜ ಎಂ ಚಿಕ್ಕ ಪಾಟೀಲ ಪ್ರಾಚಾರ್ಯರು ವಿಶ್ವವಿದ್ಯಾನಿಲಯ ದೃಶ್ಯಕಲಾ ವಿದ್ಯಾಲಯ ಇವರು ಆಗಮಿಸಿದ್ದರು.
ಕಲಿಸುವ ಗುರುವಿನ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸುವುದರ ಜೊತೆಗೆ ಚಿತ್ರ ಕಲಾಕ್ಷೇತ್ರದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನೆನಪಿಸಿದ ಪ್ರತಿಯೊಂದು ಅರ್ಥಪೂರ್ಣವಾದಂತಹ ಕೆಲಸಗಳಿಗೆ ಬೆಂಬಲವನ್ನು ಸೂಚಿಸಿದರು ಇದೇ ಸಂದರ್ಭದಲ್ಲಿ ಚಿತ್ರ ಕಲಾವಿದರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿತ್ತು ಈ ವರ್ಷ 2023 ರ ಸಾಲಿನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಡಾ| ರವೀಂದ್ರ ಎಸ್ ಕಮ್ಮರ. ಶ್ರೀಯುತ ಶಿವಶಂಕರ್ ಶಿಲ್ಪ ಕಲಾವಿದರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಶ್ರೀಯುತ ರವೀಂದ್ರ ಎಸ್ ಅರಳುಗುಪ್ಪಿ ಚಿತ್ರ ಕಲಾವಿದರು ನಿರ್ದೇಶಕರು ನಟರು. ಮಹಾನಗರ ಪಾಲಿಕೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ಶ್ರೀ ರವಿರಾಜ್ ಜಿ ಹುಲಗೂರ ಚಿತ್ರ ಕಲಾವಿದರು ಈ ವರ್ಷದ ಕರ್ನಾಟಕ ಸಂಭ್ರಮ ಲಾಂಛನ ವಿಜೇತರು ಇವರಿಗೆ ಈ ಸಂದರ್ಭದಲ್ಲಿ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು ವಿಶೇಷವಾಗಿಮಕ್ಕಳು ರಚಿಸಿದ ಚಿತ್ರಕಲೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ವರ್ಷ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರದ ಶಾಲೆಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರ್ ವೈ. ವಹಿಸಿಕೊಂಡಿದ್ದರು ಮತ್ತು ಸಿದ್ದಗಂಗಾ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮಕ್ಕಳು ಶಿಕ್ಷಕರಿಂದ ವೃಂದ ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ ಅಲ್ಯೂಮಿನಿ ಅಸೋಸಿಯೇಷನ್ ನ ಹಳೆಯ ವಿದ್ಯಾರ್ಥಿಗಳು ಮತ್ತು ಸಮಿತಿಯ ರಾಘವೇಂದ್ರ ನಾಯಕ .ರಾಮು. ಪ್ರಶಾಂತ್ ಚಂದ್ರಶೇಖರ್ ಎಸ್ ಸಂಗಾ ಚಂದ್ರಶೇಖರ್ ತಗ್ಗಿನಮಠ ಉಪಸ್ಥಿತರಿದ್ದರು