Saturday, December 21, 2024
Homeಶಿಕ್ಷಣಎಚ್ಚರವಿದ್ದರೆ ರಾಜ ಮೈಮರೆತರೆ ಭೀಕ್ಷುಕರಾಗುತ್ತೀರಿ ಈಗಿನ ಯುವ ಸಮೂಹ ಸದಾ ಎಚ್ಚರವಾಗಿರಬೇಕು:ಡಾ.ಶಿವಯೋಗಿ ಸ್ವಾಮಿ

ಎಚ್ಚರವಿದ್ದರೆ ರಾಜ ಮೈಮರೆತರೆ ಭೀಕ್ಷುಕರಾಗುತ್ತೀರಿ ಈಗಿನ ಯುವ ಸಮೂಹ ಸದಾ ಎಚ್ಚರವಾಗಿರಬೇಕು:ಡಾ.ಶಿವಯೋಗಿ ಸ್ವಾಮಿ

ದಾವಣಗೆರೆ:    ದಿನಾಂಕ:೨೬.೧೨.೨೦೨೩ರಂದು ಸರ್.ಎಂ.ವಿ.ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸರ್.ಎಂ.ವಿ.ವೈಭವ್-೨೦೨೩   
 ಶ್ರೀಯುತ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಡಾ.ಶಿವಯೋಗಿ ಸ್ವಾಮಿ, ಶ್ರೀಯುತ ಶ್ರೀಧರ್ ಎಸ್.ಜೆ ಇವರು ಉದ್ಘಾಟಿಸಿದರು ನಂತರ ಉದ್ಘಾಟಕರ ನುಡಿಗಳನ್ನು ಶ್ರೀಯುತ ಕ್ಯಾಪ್ಟನ್ ಗಣೇಶ್ ರವರು ಮಾತನಾಡುತ್ತಾ ದೇಶ-ಭಾಷೆ, ರಾಷ್ಟçಭಕ್ತಿ ಎಲ್ಲಾ ಮಕ್ಕಳಲ್ಲಿ ಬೆಳೆಯಬೇಕು, ನನ್ನ ದೇಶ ನನ್ನ ಕನಸು ಎಂಬ ಗುರಿ ಇರಬೇಕು. ಮೇರಿ ಕಾಮ್ ಅವರ ಸಾಧನೆಯ ಬಗ್ಗೆ ಹೇಳಿದರು. ಮೊಬೈಲ್ ಸ್ಮಾರ್ಟ್ ಆದಂತೆ ವಿದ್ಯಾರ್ಥಿಗಳು ಸ್ಮಾರ್ಟ್ ಆಗಬೇಕಲ್ಲವೇ? ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ವಿಜ್ಞಾನಿಗಳ ಕೊರತೆಯನ್ನು ಎದುರಿಸುತ್ತಿದೆ ಅಂತಹ ಕೊರತೆಯನ್ನು ವಿದ್ಯಾರ್ಥಿಗಳಾದ ನೀವು ಈಡೇರಿಸಬೇಕು ಮತ್ತು ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ದೇಶ ಸೇವೆಗೆ ನಿಲ್ಲುತ್ತೇವೆಂದು ನೀವೆಲ್ಲಾ ಸಂಕಲ್ಪ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.  
ನಂತರ ಮುಖ್ಯ ಅತಿಥಿಗಳಾದ ಡಾ.ಶಿವಯೋಗಿ ಸ್ವಾಮಿ ರವರು ಮಾತನಾಡಿ ರಾಜ-ಭೀಕ್ಷುಕನ ಕಥೆಯನ್ನು ಹೇಳುತ್ತಾ ಎಚ್ಚರವಿದ್ದರೆ ರಾಜ ಮೈಮರೆತರೆ ಭೀಕ್ಷುಕರಾಗುತ್ತೀರಿ ಈಗಿನ ಯುವ ಸಮೂಹ ಸದಾ ಎಚ್ಚರವಾಗಿರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ಇಡೀ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾದ ಹಾಗೂ ಓಇಇಖಿ ಇಘಿಂಒ ನಲ್ಲಿ ೭೨೦/೬೮೦ಅಂಕಗಳನ್ನು ಪಡೆದು ಉನ್ನತ ದರ್ಜೆಯಲ್ಲಿ ವೈದ್ಯಕೀಯ ವಿಭಾಗಕ್ಕೆ ದಾಖಲಾದ ಕು.ಸಾಗರ ಹೆಚ್.ಪಿರವರಿಗೆ ರೂ.೩,೦೦,೦೦೦/-ಗಳ ಬಹುಮಾನವನ್ನು ಕೊಡಲಾಗಿತು ಹಾಗೆಯೇ ಕು.ಶ್ರೀನಿವಾಸ ಬಸವನಗೌಡ ಮಾಲೀಪಾಟೀಲ್ ಇವರಿಗೆ ರೂ.೨,೦೦,೦೦೦/-ಗಳ ಮತ್ತು ವಾಣಿಜ್ಯ ವಿಭಾಗದಲ್ಲಿ ಕು.ಪ್ರೀತಿ ಯು ರವರು ೬೦೦/೫೯೦ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದಕ್ಕೆ ರೂ.೧,೦೦,೦೦೦/-ಗಳನ್ನು ಬಹುಮಾನವಾಗಿ ಕೊಡಲಾಗಿತು ಹಾಗೆಯೇ ಉನ್ನತ ಶ್ರೇಣಿಯಲ್ಲಿ IIಖಿ, IIIಖಿ,  ಂIಒS ಗಳಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ದಾಖಲಾದ ೧೨ ಜನ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ವತಿಯಿಂದ ಐಂPಖಿಔP  ಗಳನ್ನು ವಿತರಿಸಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಶ್ರೀಯುತ ಜಗನ್ ಸರ್ ರವರು ಸ್ವಾಗತವನ್ನು ಕೋರಿದರು. ಶ್ರೀಯುತ ಸುರೇಶ್ ಸರ್ ರವರು ವಂದನಾರ್ಪಣೆ ಮಾಡಿದರು. ಶ್ರೀಯುತ ಪ್ರದೀಪ್ ಸರ್ ರವರು ಅತಿಥಿಗಳ ಪರಿಚಯ ಮಾಡಿಕೊಟ್ಟರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದAತಹ ಶ್ರೀಯುತ ಶ್ರೀಧರ್ ಎಸ್.ಜೆ ಸರ್ ರವರು ಮಾತನಾಡಿ ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ವಿದ್ಯಾರ್ಥಿಗಳ ಏಳಿಗೆ ಸಾಧ್ಯ ಹಾಗೂ ಸರ್.ಎಂ.ವಿ. ಸಂಸ್ಥೆ ನಡೆದು ಬಂದ ದಾರಿ ಹಾಗೂ ಸಾಧನೆಯ ಬಗ್ಗೆ ಹೇಳಿದರು. ಶ್ರೀಯುತ ಸೈಯದ್ ಸಂಷೀರ್ ಸರ್ ರವರು ಸಾಧನೆಗೈದ ವಿದ್ಯಾರ್ಥಿಗಳ ಬಗ್ಗೆ ವಿವರಿಸಿ ಹೇಳಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವರಾಜ ಎಂ ಸರಾಪದ ಅವರು ನಡೆಸಿಕೊಟ್ಟರು. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments