ದಾವಣಗೆರೆ ಫೆ ೧೦:ನಾಲ್ಕನೇ ತರಗತಿಯಿಂದಲೇ
ಯೋಗ ಕಲಿತು ರಾಜ್ಯ ಅಂತಾರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ನೇಪಾಳ,ವಿಯೆಟ್ನಾಂ, ಗಳಲ್ಲಿ ಸತತ
ಯೋಗ ಸ್ಪರ್ಧೆ ಗಳಲ್ಲಿ ಹಲವು ಚಿನ್ನದ ಪದಕ, ಬೆಳ್ಳಿ ಪದಕ
ಗೆದ್ದು ದಾವಣಗೆರೆ ಜಿಲ್ಲೆಗೇ ಕೀರ್ತಿ ಪತಾಕೆ ಹಾರಿಸಿದ ಹರಿಹರದ ಸೃಷ್ಟಿ ಕೆ ವೈ ಇದೇ ಫೆ ೩-೬ ವರೆಗೂ ರಾಜಸ್ಥಾನದ ಜಯಪುರದಲ್ಲಿ ನೆಡೆದ
ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ಯಲ್ಲಿ ಕರ್ನಾಟಕ ವನ್ನು
ಪ್ರತಿನಿಧಿಸಿದ ಸೃಷ್ಟಿ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ
ಕರ್ನಾಟಕ ರಾಜ್ಯದಿಂದ ೮ ಕಿರಿಯ ಯೋಗ ಪಟುಗಳು
ಸ್ಪರ್ಧೆ ಯಲ್ಲಿ ಬಾಗವಹಿಸಿದ್ದು ದಾವಣಗೆರೆ ಜಿಲ್ಲೆಯ ಹರಿಹರದ ಸೃಷ್ಟಿ ಹಾಗೂ ನಮಿತಾ ಎಂಬ ಕಿರಿಯ ವಿಭಾಗದಲ್ಲಿ ಸ್ಪರ್ಧೆ ಯಲ್ಲಿ
ಭಾಗವಹಿಸಿದ್ದರು. ಅದರಲ್ಲಿ ಸೃಷ್ಟಿ ಯೋಗ ದಲ್ಲಿ ನಾಲ್ಕನೇ ಸ್ಥಾನ ಪಡೆದ ಏಕೈಕ ಭಾಲ ಯೋಗ ಪಟು ಆಗಿದ್ದಾರೆ.
ಸೃಷ್ಟಿಯ ಈ ಸಾಧನೆಗೆ ಸ್ವತಃ ಯೋಗ ಶಿಕ್ಷಕಿ ಯಾಗಿರುವ
ದಾವಣಗೆರೆ ಇಪ್ಟಾ ಕಲಾ ತಂಡದ ಉಪಾಧ್ಯಕ್ಷೆ ಕಲಾವಿದೆ ಶಾಂಭವಿ ರವರ ಏಕೈಕ ಪುತ್ರಿ.ಹರಿಹರ ಈಕೆ ಅಭ್ಯಾಸ ಮಾಡೋ ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ
ದಾವಣಗೆರೆ ಹಿರಿಯ ಪತ್ರಕರ್ತ ಪವಿತ್ರ ಪ್ರಜಾ ಸಂಪಾದಕ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್ ಕೆ ಒಡೆಯರ್,
ವರದಿಗಾರ ಕೂಟದ ಅಧ್ಯಕ್ಷ ಕೆ ಏಕಾಂತಪ್ಪನವರ ಸಂಪಾದಕತ್ವದ ಮಲ್ನಾಡವಾಣಿ ಪತ್ರಿಕೆ ಬಳಗ , ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಸಂಘಟಕ ಕಲಾವಿದ ಹೋರಾಟಗಾರ ಪುರಂದರ್ ಲೋಕಿಕೆರೆ,ಓ ಎನ್ ಸಿದ್ದಯ್ಯ,
ಇನ್ ಸೈಟ್ಸ್ ಐಎಎಸ್ ದಾವಣಗೆರೆ ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ರವರು ದಾವಣಗೆರೆ ಜಿಲ್ಲೆಯ
ಭಾರತೀಯ ಜನ ಕಲಾ ಸಮಿತಿ ಇಪ್ಟಾ ಕಲಾ ತಂಡ ಕಲಾವಿದರು
ಹರಿಹರ ಆರ್ಯಭಟ ಕಬ್ಬಡಿ ಸಂಸ್ಥೆ ನಿಜಗುಣ ಸೇರಿದಂತೆ
ಹಲವು ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ರಾಷ್ಟ್ರ ಮಟ್ಟದಲ್ಲಿ ಸೃಷ್ಟಿ ಸಾಧನೆಗೆ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ..