ದಾವಣಗೆರೆ:ಜಿಲ್ಲೆಯ ಪ್ರತಿಷ್ಠಿತ ಸಮುದಾಯಗಳಲ್ಲೊಂದಾದ ಹಾಲಮತ(ಕುರುಬ)ಸಮುದಾಯದ ಶತಮಾನಗಳತ್ತ ಇತಿಹಾಸಹೊಂದಿದ ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ನಿರ್ದೇಶಕರುಗಳ ಆಯ್ಕೆಗಾಗಿ ಚುನಾವಣೆಯನ್ನು ಪ್ರಕಟಿಸಲಾಗಿದೆ.ಎಂದು ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಶ್ರೀಪ್ರಕಾಶ್ ಹೆಚ್.ಎಸ್.ಮಳಲಕೆರೆ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಲ್ಲಿ ಒಟ್ಟು4800(ನಾಲ್ಕುಸಾವಿರದ ಎಂಟುನೂರು)ಜನ ಸದಸ್ಯರಿದ್ದು ಸಂಘದ ಆಡಳಿತ ಮಂಡಳಿಗೆ ಮುಂದಿನ ಮೂರುವರ್ಷ ಆಡಳಿತಾವದಿಗೆ 21ಜನ ನಿರ್ದೇಶಕರನ್ನು ಆಯ್ಕೆಮಾಡಬೇಕಾಗಿರುತ್ತದೆ.ಆದಕಾರಣ ಇಂದಿನಿಂದ ಚುನಾವಣಾಪ್ರಕ್ರಿ ಪ್ರಾರಂಭವಾಗಿದ್ದು ಮಾರ್ಚ್ 15-2024ರಂದು ಬೆಳಿಗ್ಗೆ9ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆವರೆಗೆ ಮತದಾನ ನಡೆಯಲಿದೆ.ಈ ಮತದಾನದಲ್ಲಿ ಭಾಗವಹಿಸುವಸದಸ್ಯರುಗಳು ಸಂಘದ ಗುರುತಿನಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ.ಗುರುತಿನ ಚೀಟಿಪಡೆಯದೇ ಇರುವಂಥ ಸದಸ್ಯರುಗಳು 2024ಫೆಬ್ರುವರಿ20ರೊಳಗಾಗಿ ಸಂಘದ ತಮ್ಮ ಗುರುತಿನ ಚೀಟಿಯನ್ನು ಕಚೇರಿಯಲ್ಲಿ ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಘದ ಗೌರವ ಕಾರ್ಯದರ್ಶಿ ಯವರನ್ನು ಸಂಪರ್ಕಿಸಬಹುದೆಂದು ಕಾರ್ಯದರ್ಶಿ ತಿಳಿಸಿದ್ದಾರೆ.
ರಿಟರ್ನಿಂಗ್ ಅಧಿಕಾರಿಗಳು ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ (ರಿ). ದಾವಣಗೆರೆ ಇದರ ಚುನಾವಣಾ ವೇಳಾಪಟ್ಟಿ:
ಕರ್ನಾಟಕ ಸಂಘಗಳ ಕಾಯ್ದೆ ಮತ್ತು ನಿಯಮಗಳು 1960 ರ ರೀತ್ಯಾ ಮತ್ತು (ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ (ರಿ) ಇದರ ಬೈಲಾ ಪ್ರಕಾರ)
“ಚುನಾವಣಾ ನೋಟೀಸು
ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ (ರಿ), ದಾವಣಗೆರೆ ಈ ಸಂಘದ ಮುಂದಿನ 3 ವರ್ಷದ ಅವಧಿಗೆ ಪದಾಧಿಕಾರಿಗಳೂ ಸೇರಿದಂತೆ 21 ಜನ ಆಡಳಿತ ಮಂಡಳಿ ನಿರ್ದೇಶಕರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಯನ್ನು ಸಂಘದ ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ (ರಿ). ದಾವಣಗೆರೆ ಹದಡಿ ರಸ್ತೆ ಇಲ್ಲಿ ನಡೆಸುವ ಸಲುವಾಗಿ ನೋಟೀಸನ್ನು ಈ ಮೂಲಕ ನೀಡಲಾಗಿದೆ.ಚುನಾಯಿಸಬೇಕಾಗಿರುವ ನಿರ್ದೇಶಕರ ಸಂಖ್ಯೆ-21:
ಇದರಲ್ಲಿ ಅಧ್ಯಕ್ಷರು-01 ಸ್ಥಾನ, ಉಪಾಧ್ಯಕ್ಷರು-02, ಪ್ರಧಾನ ಕಾರ್ಯದರ್ಶಿ-01, ಖಜಾಂಚಿ-01, ನಿರ್ದೇಶಕರು-16
ಒಟ್ಟು-21
“ಚುನಾವಣಾ ವೇಳಾಪಟ್ಟಿ
(ಎ)ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರವನ್ನು ಸಲ್ಲಿಸಲು ಪ್ರಾರಂಭದ ದಿನಾಂಕ:22-02-2024 ಗುರುವಾರ 10ಗಂಟೆಯಿಂದ ಕಚೇರಿಯಲ್ಲಿ ಚುನಾವಣಾ ಅಧಿಕಾರಿ/ಅಧಿಕಾರಪಡೆದವರಿಗೆ ಸಲ್ಲಿಸುವುದು.
(ಬಿ)ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ:01-03-2024 ಮಧ್ಯಾಹ್ನ 3ಗಂಟೆಯವರೆಗೆ ಕಚೇರಿಯಲ್ಲಿ ಚುನಾವಣಾ ಅಧಿಕಾರಿ/ಅಧಿಕಾರಪಡೆದವರಿಗೆ ಸಲ್ಲಿಸುವುದು.
(ಸಿ)ರಿಟರ್ನಿಂಗ್ ಅಧಿಕಾರಿಯಿಂದ ನಾಮಪತ್ರಗಳ ಪರಿಶೀಲನೆ ದಿನಾಂಕ:02-03-2024 ಬೆಳಿಗ್ಗೆ 11ಗಂಟೆಗೆ ಸಂಘದ ಕಚೇರಿಯಲ್ಲಿ.
(ಡಿ)ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧವಾಗಿ ಮತಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ:ದಿನಾಂಕ:02-03-2024 ನಾಮಪತ್ರಗಳ ಪರಿಶೀಲನೆ ನಂತರ ಸಂಘದ ಕಚೇರಿಯಲ್ಲಿ.
(ಇ) ನಾಮಪತ್ರಗಳ ಹಿಂತೆಗೆದುಕೊಳ್ಳಲು ಕೊನೆಯ ದಿನ:ದಿನಾಂಕ:03-03-2024ರಂದು ಮಧ್ಯಾಹ್ನ3-00ಗಂಟೆಯವರೆಗೆ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸುವುದು.
(ಎಫ್)ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯ ಪ್ರಕಟಣೆ:ದಿನಾಂಕ:03-03-2024 ಮಧ್ಯಾಹ್ನ 3-00ಗಂಟೆಯನಂತರ ಸಂಘದ ಕಚೇರಿಯಲ್ಲಿ.
(ಜಿ)ರಿಟರ್ನಿಂಗ್ ಅಧಿಕಾರಿಯಿಂದ ಅಭ್ಯರ್ಥಿಗಳು ಅಪೇಕ್ಷಿಸಿದಲ್ಲಿ ಚಿಹ್ನೆಗಳ ಹಂಚಿಕೆ:ದಿನಾಂಕ:04-03-2024 ಮಧ್ಯಾಹ್ನ 4-00ಗಂಟೆಗೆ ಸಂಘದ ಕಚೇರಿಯಲ್ಲಿ.
(ಹೆಚ್) ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿಯ ಚಿಹ್ನೆಯೊಂದಿಗೆ ಪ್ರಕಟಣೆ:ದಿನಾಂಕ:05-03-2024 ಬೆಳಿಗ್ಗೆ11-00ಗಂಟೆಗೆ ಸಂಘದ ಕಚೇರಿಯಲ್ಲಿ.
(ಐ)ಮತದಾನದ ದಿನಾಂಕ ಮತ್ತು ಸಮಯ:ದಿನಾಂಕ:15-03-2024 ಶುಕ್ರವಾರ ಬೆಳಿಗ್ಗೆ9-00ಗಂಟೆಯಿಂದ ಸಂಜೆ4-00ಗಂಟೆಯವರೆಗೆ ಸಂಘದ ಕಚೇರಿಯಲ್ಲಿ.
(ಜೆ)ಮತ ಎಣಿಕೆಯ ದಿನ ಮತ್ತು ದಿನಾಂಕ:ಮತದಾನ ಮುಗಿದ ನಂತರ ಚುನಾವಣಾಧಿಕಾರಿಯಿಂದ ನೇಮಿಸಲ್ಪಟ್ಟ ಸಿಬ್ಬಂದಿ ವರ್ಗದವರಿಂದ
(ಕೆ)ಮತ ಎಣಿಕೆ ಮುಗಿದ ನಂತರ ಚುನಾವಣಾಧಿಕಾರಿಯಿಂದ ಫಲಿತಾಂಶ ಘೋಷಣೆ ಅಧಿಕಾರಿಯಿಂದ
ಸೂಚನೆ: ನಾಮಪತ್ರವನ್ನು ರಜದಿನ ಹೊರತುಪಡಿಸಿ ಪಡೆಯುವುದು ಮತ್ತು ಸಲ್ಲಿಸುವುದು
ಸೂಚನೆಗಳು:
- ಚುನಾವಣೆಯಲ್ಲಿ ಆಯ್ಕೆ ಮಾಡಬೇಕಾಗಿರುವ ಸ್ಥಾನಗಳ ಒಟ್ಟು ಸಂಖ್ಯೆ: 21
- ಇದರಲ್ಲಿ ಅಧ್ಯಕ್ಷ ಸ್ಥಾನ-01, ಉಪಾಧ್ಯಕ್ಷ ಸ್ಥಾನ- 02, ಪ್ರಧಾನ ಕಾರ್ಯದರ್ಶಿ ಸ್ಥಾನ-01, ಖಜಾಂಚಿ ಸ್ಥಾನ-01.
ನಿರ್ದೇಶಕರು-16 ಒಟ್ಟು-21
- ಆಡಳಿತ ಮಂಡಲಿಯ ನಿರ್ದೇಶಕರಾಗಿ ಚುನಾಯಿತರಾಗಲು ಸಹಕಾರ ಸಂಘಗಳ ಕಾಯ್ದೆ, ನಿಯಮ ಮತ್ತು ಸಂಘದ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನು ಹೊಂದಿರತಕ್ಕದ್ದು.
- ಆಡಳಿತ ಮಂಡಲಿಯ ನಿರ್ದೇಶಕರಾಗಿ ಚುನಾಯಿತರಾಗಲು ಸಹಕಾರ ಸಂಘಗಳ ಕಾಯ್ದೆ, ನಿಯಮ ಮತ್ತು ಸಂಘದ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಅನರ್ಹತೆಗಳನ್ನು ಹೊಂದಿರತಕ್ಕದ್ದಲ್ಲ. 4. ನಾಮಪತ್ರ ಸಲ್ಲಿಸುವಾಗ ಚುನಾವಣಾಠೇವಣಿ ಬಾಬ್ತು ರೂ 3000/- (ರೂಪಾಯಿಗಳು ಮೂರು ಸಾವಿರ ಮಾತ್ರ) ಗಳನ್ನು ಸಂದಾಯ ಮಾಡಿದ ಬಗ್ಗೆ ರಶೀದಿ ಲಗತ್ತಿಸುವುದು.
- ಚುನಾವಣಾ ಠೇವಣಿಯನ್ನು ಸಂಘಗಳ ನಿಯಮಗಳನ್ವಯ ಒಟ್ಟು ಚಲಾವಣೆಯಾದ, ಸಿಂಧುವಾದ ಮತಗಳಲ್ಲಿ 1/6 ಸಾಮಾನ್ಯ, 1/10 ಮೀಸಲು ಸ್ಥಾನಕ್ಕೆ ಸ್ಪರ್ದಿಸಿದ ಭಾಗದ ನಿಗದಿತ ಮತಗಳನ್ನು ಪಡೆಯದಿದ್ದಲ್ಲಿ ಸಂಘಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ನಾಮಪತ್ರಗಳನ್ನು ಬೆಳಗ್ಗೆ 11-00 ರಿಂದ ಮಧ್ಯಾಹ್ನ 3-00 ಗಂಟೆಯವರೆಗೆ ಸಂಘದ ಕಛೇರಿಯಲ್ಲಿ ಪಡೆಯಬಹುದು ಹಾಗೂ ಸದರಿ ವೇಳೆಯಲ್ಲಿ ಸಲ್ಲಿಸಬಹುದು.
- ಉಮೇದುವಾರರು ತಾವು ಇಷ್ಟಪಡುವ ಮೂರು ಚಿಹ್ನೆಗಳನ್ನು ಸೂಚಿಸಬಹುದು.ಅವುಗಳು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಚಿಹ್ನೆಗಳಾಗಿರಬಾರದು. ಆದರೆ ನಿಯಮ 5 (21) ರ ಪ್ರಕಾರ ಉಮೇದುವಾರರಿಗೆ ಚಿಹ್ನೆಗಳನ್ನು ನಿಗಧಿಪಡಿಸುವ ಅಂತಿಮ ಅಧಿಕಾರವು ಚುನಾವಣಾಧಿಕಾರಿಗಳಿಗೆ ಇರುತ್ತದೆ.
- ಮುಕ್ತ ಚುನಾವಣಾ ಚಿಹ್ನೆಗಳನ್ನು ಸಂಘದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
- ಉಮೇದುವಾರಿಕೆ ಸಲ್ಲಿಸಲ್ಪಡುವ ನಾಮಪತ್ರಗಳಿಗೆ ಒಬ್ಬ ಅರ್ಹ ಮತದಾರರಿಂದ ಸೂಚಿಸಲ್ಪಡಬೇಕು.
- ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಅಭ್ಯರ್ಥಿಯು ಹಾಜರಿರಬಹುದು.
- ಉಮೇದುವಾರಿಕೆ ವಾಪಸ್ಸಾತಿಗೆ ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ಖುದ್ದು ಅಭ್ಯರ್ಥಿ ನೀಡತಕ್ಕದ್ದು.
- ನಾಮಪತ್ರ / ಉಮೇದುವಾರಿಕೆ ಹಿಂತೆಗೆದುಕೊಳ್ಳುವ ನಮೂನೆಗಳನ್ನು ಸಂಘದ ಕಛೇರಿ ವೇಳೆಯಲ್ಲಿ ಪಡೆಯಬಹುದು. (ಸರ್ಕಾರಿ ರಜಾದಿನ ಹೊರತುಪಡಿಸಿ)
- ಮತದಾನದ ದಿನದಂದು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಎಂದು ಜಿ.ಎಸ್ ಬಸವರಾಜ ರಿಟರ್ನಿಂಗ್ ಅಧಿಕಾರಿ ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ (ರಿ), ದಾವಣಗೆರೆ ಜಿಲ್ಲೆ ಹಾಗೂ ತೋಟಗಾರಿಕಾ ಸಹಾಯಕರು, ತೋಟಗಾರಿಕೆ ಇಲಾಖೆ ದಾವಣಗೆರೆ ಇವರು ಪ್ರಕಟಣೆಯನ್ನು ಪತ್ರಿಕಾ ಗೋಷ್ಠಿಯಲ್ಲಿ ಸಘದ ಕಾರ್ಯದರ್ಶಿ ಬಿಡುಗಡೆಗೊಳಿಸಿದ್ದಾರೆ.