Wednesday, August 20, 2025
Homeದೇಶತಾಲೂಕಿನಾದ್ಯಂತ ಸಂವಿಧಾನ‌ಜಾಗೃತಿ ಜಾಥಾ ಅದ್ದೂರಿ ಸ್ವಾಗತ.

ತಾಲೂಕಿನಾದ್ಯಂತ ಸಂವಿಧಾನ‌ಜಾಗೃತಿ ಜಾಥಾ ಅದ್ದೂರಿ ಸ್ವಾಗತ.

ಜಗಳೂರು :ಪಟ್ಟಣದ ಚಳ್ಳಕೆರೆ ರಸ್ತೆಯಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದವರೆಗೆ ಸಂವಿಧಾನ ಜಾಗೃತಿ ಜಾಥ ಮೆರವಣಿಗೆ ನಡೆಸಲಾಯಿತು.

ಪಟ್ಟಣ ಸೇರಿದಂತೆ ದೊಣ್ಣೆಹಳ್ಳಿ,ಹಿರೇಮಲ್ಲನಹೊಳೆ,ಹನುಮಂತಾಪುರ,ಕೆಚ್ಚೇನಹಳ್ಳಿ ಗ್ರಾಮಪಂಚಾಯಿತಿ ಕೇಂದ್ರಸ್ಥಾನಗಳಲ್ಲಿ
ಮಕ್ಕಳು,ಕಲಾತಂಡಗಳು,ಅಂಗನವಾಡಿ ಆಶಾ ಕಾರ್ಯಕರ್ತೆಯರು,ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಅದ್ದೂರಿಯಾಗಿ ಸ್ವಾಗತಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ಸಾರ್ವಜನಿಕರಿಗೆ ಸಂವಿಧಾನ ಕುರಿತು ಜಾಗೃತಿ ಮೂಡಿಸಲಾಯಿತು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಮಾತನಾಡಿ,
 ‘ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮಹತ್ವ ಮತ್ತು ಆಶಯಗಳನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಸಂವಿಧಾನ ಜಾಗೃತಿಗಾಗಿ ಅರಿವಿನ ಸ್ತಬ್ದ ಚಿತ್ರ ಸಾಗುತ್ತಿದೆ.ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ದೇಶಕ್ಕೆ ಎಲ್ಲಾ ವರ್ಗದವರಿಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿದೆ.ಶ್ರೇಷ್ಠ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ತಮಟೆ ಬಾರಿಸುವ ಮೂಲಕ ಸಂವಿಧಾನ ಜಾಗೃತಿ ಜಾಥದಲ್ಲಿ ಸಂಭ್ರಮಿಸಿದರು.

ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಬೀರೇಂದ್ರಕುಮಾರ್,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಬಿಇಓ ಹಾಲಮೂರ್ತಿ,ಬಿಆರ್ ಸಿ ಡಿಡಿ ಹಾಲಪ್ಪ,ನಿಲಯ ಮೇಲ್ವಿಚಾರಕರಾದ ಸೋಮಣ್ಣ,ಮಹಾಬಲೇಶ್,ದೇವೇಂದ್ರಪ್ಪ,ಮಂಗಳಾ,ತಸ್ಲಿಂಬಾನು,ಪ.ಪಂ‌ಸದಸ್ಯ ದೇವರಾಜ್ ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ವಕೀಲ ಆರ್.ಓಬಳೇಶ್ ,ಪೂಜಾರ ಸಿದ್ದಪ್ಪ,ಓಬಣ್ಣ,ಕುಬೇಂದ್ರಪ್ಪ,ಸತೀಶ್ ಮಲೆಮಾಚಿಕೆರೆ ,ಮಾರುತಿ,ರಾಜಪ್ಪ ವ್ಯಾಸಗೊಂಡನಹಳ್ಳಿ,ಧನ್ಯಕಮಾರ್ ಎಚ್.ಎಂ ಹೊಳೆ,ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments