ದಾವಣಗೆರೆ, ಏ. 22 – ನಗರದ ಪಿ.ಬಿ.ರಸ್ತೆಯಲ್ಲಿರುವ ಕೋದಂಡರಾಮ ದೇವಸ್ಥಾನದಲ್ಲಿ ದಿ. 21ರ ಭಾನುವಾರ ಬೆಳಿಗ್ಗೆ ಶ್ರೀ ಸೀತಾ ಸಮೇತ ಶ್ರೀ ರಾಮಚಂದ್ರ ಸ್ವಾಮಿಗೆ ಮಹಾಭಿಷೇಕ ಪೂಜಾದಿಗಳು ಹಾಗೂ ಶ್ರೀ ಸೀತಾಮಾತೆಗೆ ಗೌರಿ ಪೂಜೆ. ಕುಂಕುಮಾರ್ಚನೆ, ಸುಮಂಗಲೀಯರಿಗೆ ಬಾಗಿಣ ಶಾಸ್ತ್ರ ಹಾಗೂ ಶ್ರೀ ರಾಮಚಂದ್ರ ದೇವರಿಗೆ ಕಾಶೀ ಯಾತ್ರಾದಿ ಪೂರ್ವಕ ಮಧುಪರ್ಕ ಮತ್ತು ಮಧ್ಯಾಹ್ನ 11:36 ರಿಂದ 12:26 ರವರೆಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಕಲ್ಯಾಣೋತ್ಸವ ನಂತರ ಕನ್ಯಾದಾನ ಮಾಂಗಲ್ಯಧಾರಣಾದಿ ಹಾಗೂ ಮಹಾಪೂಜಾದಿ ಕಾರ್ಯಕ್ರಮಗಳು ನೆರವೇರಿತು.
ಈ ಸಂದರ್ಭದಲ್ಲಿ ರಾಜನಹಳ್ಳಿ ಹನುಮಂತರಾಜು ಹಾಗೂ ಕುಟುಂಬದವರು ಉಪಸ್ಥಿತರಿದ್ದರು.