Tuesday, December 24, 2024
Homeಸಂಸ್ಕೃತಿಸವನಹಳ್ಳಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ನಂದಿ ಬಸವಣ್ಣ ದೇವಸ್ಥಾನ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಉದ್ಘಾಟನೆ

ಸವನಹಳ್ಳಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ನಂದಿ ಬಸವಣ್ಣ ದೇವಸ್ಥಾನ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಉದ್ಘಾಟನೆ

ವಿಜಯಪುರ: ತಾಲ್ಲೂಕಿನ ಸವನಹಳ್ಳಿ ಗ್ರಾಮದಲ್ಲಿ ನೂತನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರ ಮವು ಗುರುವಾರ ನಡೆಯಿತು.
ಶ್ರೀಶೈಲ ಪೀಠದ ಜಗದ್ಗುರು ಗಳಾದ ಶ್ರೀ ಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯರ ಸನವಹಳ್ಳಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಿಂದ ಸನವಹಳ್ಳಿ ಗ್ರಾಮದ ಭಕ್ತರಿಂದ ಭವ್ಯವಾದ ಅಡ ಪಲ್ಲಕ್ಕಿ ಉತ್ಸವ ನಡೆಯಿತು 501 ಕುಂಭಮೇಳಕ್ಕೆ ಗೊಂಬೆಗಳ ಕುಣಿತ ಡೊಳ್ಳು ಕುಣಿತ ಬೃಹತ್ ಮೆರವಣಿಗೆ ಸಕಲವಾದ್ಯ ದೊಂದಿಗೆ ನೂತನ ನೂತನ ಮಲ್ಲಿಕಾರ್ಜುನ ದೇವಸ್ಥಾನದ ವರಿಗೆ ಆಗಮಿಸಿದರು.

ನಂತರ ಬೆಳಿಗ್ಗೆ 10 ಘಂಟೆಗೆ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಶಿವಾಜಾ ರ್ಯರ ಇವರ ಅಮೃತ ಹಸ್ತದಿಂದ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ನೂತನ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು

ಮಧ್ಯಾಹ್ನ 12 ಘಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಸಮಾರಂಭದ ಪ್ರಯುಕ್ತ ಧರ್ಮಸಭೆ ನಡೆಯಿತು.
ಮಲ್ಲಿಕಾರ್ಜುನ ದೇವಸ್ಥಾನವನ್ನು ಬಹಳ ಸುಂದರವಾಗಿ
ನಿರ್ಮಿಸಿದ್ದೀರಿ ಇದು ಸವನಹಳ್ಳಿಯ ಗ್ರಾಮದ ಬಹುದಿನಗಳ ಭಕ್ತರ ಕನಸು ಇವತ್ತಿನ ದಿನ ಈಡೇರಿದೆ ದೇವರಲ್ಲಿ ನಿಜವಾದ ನಂಬಿಕೆಯನ್ನು ಇಡಬೇಕು ಆದ್ದರಿಂದ ಮಲ್ಲಯ್ಯ ಕಾಣಲು ಸಾಧ್ಯ ಈ ಗ್ರಾಮ ಸನವಹಳ್ಳಿ ಅಲ್ಲ ಸುವರ್ಣ ಹಳ್ಳಿ ಒಂದಲ್ಲ ಒಂದು ದಿನ ಆಗುವುದು ಅನು ಮಾನ ಇಲ್ಲ ಶ್ರೀಶೈಲ ಪಾದಯಾತ್ರೆಯ ಭಕ್ತರಿಗಾಗಿ ವಿಶೇಷವಾಗಿ ಕಂಬಿ ಮಂಟಪ ಎಂಬ ವಿಶಾಲವಾದ ನಿರ್ಮಾಣ ಮಾಡುವುದು ಸುಮಾರು 500 ಮಲ್ಲಯ್ಯ ಕಂಬಿಗಳು ಮಂಟಪ ತಿಳಿದುಕೊಳ್ಳಲು ಕಂಬಿ ಶ್ರೀಶೈಲದಲ್ಲಿ ನಿರ್ಮಾಣ ಮಾಡ್ತಾ ಇದ್ದೇವೆ ಭಕ್ತರ ಸಾಕಾರದಿಂದ ಶ್ರೀಶೈಲದಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡ್ತಾ ಇದ್ದೇವೆ ಎಂದು ಶ್ರೀಶೈಲ ಶ್ರೀಗಳು ಹೇಳಿದರು.
ಸಂದರ್ಭದಲ್ಲಿ ಬಾಗಲಕೋಟ
ಮಠದ ಷ.ಬ್ರ ಶಿವಾಚಾರ್ಯರು ಡಾ.ಸಿದ್ದಲಿಂಗ ಚಿರಂತಿಮಠದ ವಿಭೂತಿಪುರ ಸಂಸ್ಥೆನ ಮಠ ಬೆಂಗಳೂರು ಷಬ್ರ ಡಾ ಶಿವಕುಮಾರ ಶಿವಾಚಾರ್ಯರು ಷಬ್ರ ಮಹಾಂತಲಿಂಗ ಶಿವಾಚಾರ್ಯರು ಮನಗೂಳಿ ಮಠ ಷಬ್ರ ಅಭಿನವ ಸಂಗನಬಸವ ಅಮರೇಶ್ವರ ಶಿವಾಚಾರ್ಯರು ಮಠ ಗುಳೇದಗುಡ್ಡ ಷಬ್ರ ನೀಲಕಂಠೇಶ್ವರ ಶಿವಾಚಾರ್ಯ ಹಿರೇಮಠ ಮುಳವಾಡ ಷಬ್ರ ಸಿದ್ದಲಿಂಗ ಶಿವಾಚಾರ್ಯರು ಜೈನಾಪುರದ ಷಬ್ರ ರೇಣುಕ ಶಿವಾಚಾರ್ಯರು ಕಲಾಣೇಶ್ವರ ಮಠ ಪ.ಪೂ.ಡಾ. ವಿವೇಕಾನಂದ ದೇವರು ತೊರವಿ ಶ್ರೀ ಮಠ ಪರಮ ಪೂಜ್ಯ ಅಭಿನವ ಮರುಗೇಂದ್ರ ದೇವರು ಆಗಮಿಸಿ ಆಶೀರ್ವಚನ ನೀಡಿದರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments