ವಿಜಯಪುರ:ವಿಜಯಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷ ಅಬ್ಯರ್ಥಿ ಪ್ರೋಫೆಸರ್ ರಾಜು ಆಲಗೂರವರ ಚುನಾವಣಾಪ್ರಚಾರ ಬಿರುಸುಗೊಂಡಿದೆ.ವಿಜಯಪುರ ಲೋಕಸಭಾಕ್ಷೇತ್ರದ ನಾಗಠಾಣ ದಲ್ಲಿ ನಡೆದ ವಿಜಯಪುರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಗ್ರೆಸ್ ಸಮಿತಿ ಪ್ರಧಾನಕಾರ್ಯದರ್ಶಿ ಶ್ರೀ ಸೋಮನಾಥ ಕಳ್ಳಿಮನಿ ಮಾತನಾಡಿ, ಈ ಸಲ ಏನಾದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಬರಲಿದ್ದು ಪ್ರಜಾಪ್ರಭುತ್ವ ನಾಶವಾಗಲಿದೆ.ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಸೋಲಬೇಕು. ಯುವಕರಿಗೆ ಧರ್ಮದ “ಸಿಹಿ ಲೇಪಿತ ವಿಷ ಗುಳಿಗೆ” ಕೊಟ್ಟು ಅವರ ಜೀವನ ನಾಶ ಮಾಡುತ್ತಿದ್ದಾರೆ. ಕಾರಣ ಯುವಕರು ರೈತರು ಮಹಿಳೆಯರು ಜಾಗೃತರಾಗಿ ಮತದಾನ ಮಾಡಿ ತಮ್ಮ ಭವಿಷ್ಯಕ್ಕಾಗಿ ಮತ್ತು ಪ್ರಗತಿಗಾಗಿ ಗ್ಯಾರಂಟಿಗಳೊಂದಿಗೆ ಮುನ್ನಡೆಯಲು ಕಾಂಗ್ರೆಸ್ ಜೊತೆ ಕೈಜೋಡಿಸಬೇಕೆಂದು ಮತಯಾಚನೆಯವೇಳೆ ಹೇಳಿದ್ದಾರೆ.