ದಾವಣಗೆರೆ : ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ ಡೆವಲಪ್ಮೆಂಟ್ ಫೌಂಡೇಶನ್ ತಮಿಳುನಾಡು ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ಡ ಡೆವಲಪ್ಮೆಂಟ್ ಫೌಂಡೇಶನ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಮೇ 31 ಮತ್ತು ಜೂನ್ 1 ರಂದು ನಡೆದ ಐದನೇ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳು ಗೋವಾದ ಡೆಕಾಥ್ಲಾನ್ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ತಂಡದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
1) 14ನೇ ವಯಸ್ಸಿನ ಬಾಲಕರ ವಿಭಾಗದಲ್ಲಿ ಹರಿಹರದ ಪ್ರಥಮ್ ಯು.ಎಂ. ಪ್ರಥಮ ಸ್ಥಾನ ಪಡೆಯುವುದರ ಮೂಲಕ ಸ್ವರ್ಣ ಪದಕ, 2) 14 ನೇ ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ಕುಮಾರಿ ಶ್ರೇಯ ಶಿವಪೂಜಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಸ್ವರ್ಣ ಪದಕ, 3) 17ನೇ ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಮೀನಾಕ್ಷಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಸ್ವರ್ಣ ಪದಕ, 4) 49ನೇ ಹಿರಿಯ ಪುರುಷರ ವಿಭಾಗದಲ್ಲಿ ಧಾರವಾಡ ಜಿಲ್ಲೆಯ ಹಿರೇಹೊನ್ನಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ, ಮಯೂರ ಗೌಡ ಎಸ್ ಪಾಟೀಲ್ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸ್ವರ್ಣ ಪದಕ, 5) 60 ವರ್ಷ ಪುರುಷರ ಹಿರಿಯರ ವಿಭಾಗದಲ್ಲಿ ಡಾಕ್ಟರೇಟ್ ಪುರಸ್ಕೃತರಾದ ಕೆ. ಜೈಮುನಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸ್ವರ್ಣ ಪದಕವನ್ನು ಗಳಿಸಿರುತ್ತಾರೆ.
ತಂಡದ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷರಾದ ಅಜಿತ್ ಕುಮಾರ್ ತಮಿಳುನಾಡು, ಇವರು ನೀಡಿದರು .
ವಿಜೇತರಾದವರಿಗೆ ರಾಜ್ಯದ ಮುಖ್ಯಮಂತ್ರಿಗಳು, ಕ್ರೀಡಾ ಸಚಿವರು ಹಾಗೂ ದಾವಣಗೆರೆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಹರಿಹರ ಶಾಸಕರಾದ ಬಿ.ಪಿ.ಹರೀಶ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷರಾದ ವಾಸುದೇವ ರಾಯ್ಕರ್, ಜಿಲ್ಲಾ ಕ್ರೀಡಾ ಅಧ್ಯಕ್ಷರಾದ ಕೆ. ದಿನೇಶ್ ಶೆಟ್ಟಿ, ದಾವಣಗೆರೆ ಸಪ್ತರಿಷಿ ಯೋಗದಾರ್ ಸ್ಪೋರ್ಟ್ಸ್ ಅಕಾಡೆಮಿಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
– ಕರಾಟೆ ವಿಭಾಗ –
1) 10ನೇ ವರ್ಷದ ಬಾಲಕರ ಕಾಟ ವಿಭಾಗದಲ್ಲಿ ವಿಶಾಖ್ ಸಿ. ಅಗಡಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸ್ವರ್ಣ ಪದಕ.
2) 13 ವರ್ಷದ ಬಾಲಕರ ಕಾಟ ವಿಭಾಗದಲ್ಲಿ ಕಾರ್ತಿಕ್ ಸಿ. ಅಗಡಿ ಪ್ರಥಮ ಸ್ಥಾನವನ್ನು ಗಳಿಸುವುದರ ಮೂಲಕ ಸ್ವರ್ಣ ಪದಕವನ್ನು ಗಳಿಸಿರುತ್ತಾರೆ.