Tuesday, January 14, 2025
Homeಸಾರ್ವಜನಿಕ ಧ್ವನಿಬೀಳುವ ಸ್ಥಿತಿಯಲ್ಲಿ ನಿಂತ ಮರಗಳು : ಭಯದ ಭೀತಿಯಿಂದ ಸಂಚರಿಸುವ ವಾಹನ ಸವಾರರು.

ಬೀಳುವ ಸ್ಥಿತಿಯಲ್ಲಿ ನಿಂತ ಮರಗಳು : ಭಯದ ಭೀತಿಯಿಂದ ಸಂಚರಿಸುವ ವಾಹನ ಸವಾರರು.

ಜಗಳೂರು:ಈ ಮರಗಳು ಆಗೊ ಈಗೋ ಬಿಳುವ ಸ್ಥಿತಿಯಲ್ಲಿದ್ದು ಜನರು ಭಯದ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿರೊದು ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಹೊರವಲಯದ ಕೊಟ್ಟೂರು ಮುಖ್ಯ ರಸ್ತೆಯಲ್ಲಿ ಕಂಡುಬಂದಿದೆ.

ಹೌದು ಪಟ್ಟಣದ ಹೊರವಲಯದ ಕೊಟ್ಟೂರು ಮುಖ್ಯ ರಸ್ತೆಯಲ್ಲಿ ಕಳೆದ ಒಂದುವರೆ ವರ್ಷಗಳ ಹಿಂದೆ ಮರಕ್ಕೆ ಬೆಂಕಿ ತಗುಲಿ ಒಣಗಿದೆ . ಆದರೆ ಮಳೆಗಾಲ ಆರಂಭವಾಗಿದ್ದು ಬಿರುಗಾಳಿಗೆ ಮರ ಯಾವಾಗ ಬೀಳುತ್ತೊ ಗೊತ್ತಿಲ್ಲಾ ಆದರೆ ಈ ರಸ್ತೆ ಮಾರ್ಗದಲ್ಲಿ ದಿನನಿತ್ಯ ಲಾರಿ, ಟ್ರಕ್, ಬಸ್ , ಆಟೊ ಸೇರಿದಂತೆ ಅನೇಕ ರೀತಿಯ ನೂರಾರು ವಾಹನಗಳು ಓಡಾಡುತ್ತಿದ್ದು ಯಾವ ಸಮಯದಲ್ಲಿ ಮರ ಬೀಳುತ್ತೆ ಎಂಬ ಭಯದಿಂದ ಸಾರ್ವಜನಿಕರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೆ ವೇಳೆ ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ ಮಾತನಾಡಿದ ಅವರು ಕಳೆದ ಒಂದುವರೆ ವರ್ಷಗಳ ಹಿಂದೆ ಮರಕ್ಕೆ ಬೆಂಕಿ ತಗುಲಿ ಮರ ಒಣಗಿ ಬಿಳುವ ಸ್ಥಿತಿಯಲ್ಲಿದ್ದು ಇದಕ್ಕೆ ಸಂಭಂಧಿಸಿದ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಿ ಮುಂದಾಗುವ ಅನಹುತ ತಪ್ಪಿಸಬೇಕೆಂದು ಆಗ್ರಹಿಸಿದ್ದರೆ.

ಮತ್ತೊಂದೆಡೆ ಕೊಟ್ಟೂರು ರಸ್ತೆಯಲ್ಲಿರುವ ತ್ಯಾಜ್ಯ ಕಸ ವಿಲೇವಾರಿ ಘಟಕದ ಸಮೀಪ ಮರ ಒಂದು ಬಾಗಿ ಬೀಳುವ ಸ್ಥಿತಿಯಲ್ಲಿ ಇದ್ದು ಇದರಿದ ದೊಡ್ಡ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು. ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಮರ ತೆರವುಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಬೇಕಿದೆ.

ಇನ್ನಾದರು ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಮರ ತೆರವು ಮಂದಾಗವ ಅನಾಹುತಕ್ಕು ಮುನ್ನ ಮುಂಜಾಗ್ರತೆ ವಹಿಸಿ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರ ಕಾದುನೋಡಬೇಕಿದೆ.

ವರದಿ:- ಎಂ.ಡಿ. ಅಬ್ದುಲ್ ರಖೀಬ್

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments