ದಾವಣಗೆರೆ:ನನ್ನ ಆತ್ಮೀಯ ಮಿತ್ರ ಮತ್ತು ನಮ್ಮ ಫ್ಯಾಮಿಲಿ ಫ್ರೆಂಡ್ಸ್ ಗ್ರೂಫಿನ ಹಾಗೂ ದಾವಣಗೆರೆ ಚಂದ್ರೋದಯ ಮಿಲ್ ಕಾರ್ಮಿಕರಾಗಿದ್ದ ದಿವಂಗತ ಶ್ರೀ ಶಿವಾನಂದ ಸೀತಿಮನಿ ಹಾಗೂ ಶ್ರೀಮತಿ ಶಾಂತಮ್ಮ ದಂಪತಿಗಳ ಸುಪುತ್ರ ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಮಗು ಶ್ರೀ ವೆಂಕಟೇಶ್ ಬಾಬು ಎಸ್.ರವರು ಪ್ರಸ್ತುತ ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ.
ಪ್ರೋ,ವೆಂಕಟೇಶ್ ಬಾಬು ಎಸ್.ರವರು ಬಾಲ್ಯದಿಂದಲೂ ಉತ್ತಮ ನಡೆ,ನುಡಿ,ಸಾಂಸ್ಕೃತಿಕ, ಕ್ರೀಡೆ ಹಾಗೂ ಆಟಪಾಠಗಳಲ್ಲಿ ತನ್ನ ಛಾಪನ್ನು ಮೂಡಿಸಿಕೊಂಡು ಬೆಳೆದ ಸ್ನೇಹಜೀವಿ ಪ್ರತಿಭಾವಂತ.ಅವರು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಜೆ.ಎಸ್.ಎಸ್.ಸಂಶೋಧನಾ ಕೇಂದ್ರದ ವಾಣಿಜ್ಯಶಾಸ್ತ್ರವಿಭಾಗದ ಪ್ರಾಧ್ಯಾಪಕರಾದ ಡಾಕ್ಟರ್ ಶಂಕ್ರಪ್ಪ ಎಸ್.ರವರ ಮಾರ್ಗದರ್ಶನದಲ್ಲಿ “ಪರ್ಫಾರ್ಮೆನ್ಸ್ ಇವ್ಯಾಲ್ಯೂಯೇಷನ್ ಆಫ್ ಡಿಜಿಟಲ್ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಇಂಡಸ್ಟ್ರಿ ಇನ್ ಇಂಡಿಯಾ” ಎಂಬವಿಷಯದ ಕುರಿತು ಮಹಾ ಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು.ಮೈಸೂರು ವಿಶ್ವವಿದ್ಯಾಲಯವು ಇವರ ಮಹಾ ಪ್ರಬಂಧವನ್ನು ಅಂಗೀಕರಿಸಿ ವಾಣಿಜ್ಯ ಶಾಸ್ತ್ರ ವಿಭಾಗದ ಪಿ.ಎಚ್.ಡಿ ಪದವಿಯನ್ನು ನೀಡಿದೆ.ಈ ಗೌರವಯುತವಾದ ವಿಷಯವು ನಮ್ಮ ಕುಟುಂದ ಮತ್ತು ಆಪ್ತವಲಯದ ಎಲ್ಲಹಿತೈಸಿಗಳಿಗೂ ಅತ್ಯಂತ ಸಂತಸದ ವಿಷಯವಾದ್ದರಿಂದ ಮೈಸೂರು ವಿಶ್ವವಿದ್ಯಾನಿಲಯ,ಮತ್ತು ಡಾಕ್ಟರ್ ಶಂಕ್ರಪ್ಪ ನವರಿಗೂ ಹಾಗೂ ನಮ್ಮೆಲ್ಲರ ಪ್ರೀತಿಯ ಮಗುಆಗಿದ್ದ ಅಣ್ಣು ಈಗ ಡಾಕ್ಟರ್ ವೆಂಕಟೇಶ್ ಬಾಬು ಎಸ್. ರವರಿಗೂ ಪವಿತ್ರಪ್ರಜಾ ಕನ್ನಡ ದಿನಪತ್ರಿಕೆ ದಾವಣಗೆ ಹಾಗೂ ಸಹಾಯವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರೂ ಆದ ಎಸ್.ಕೆ.ಒಡೆಯರ್,ಹಾಗೂ ಕುಟುಂಬ ಸದಸ್ಯರು,ಬಿಜಿ.ಬಸಪ್ಪ ಮತ್ತು ಕುಟುಂಬ,ಪ್ರಥಮದರ್ಜೆ ಗುತ್ತಿಗೆದಾರ ಬಾಲಚಂದ್ರ ಜಾಧವ್, ಮುದ್ದಿಬಿಹಾಳ್ ತಾಲೂಕಿನ ಕೋಳೂರಿನ ಚಂದ್ರಶೇಖರ್ ಮೇಲ್ಮನಿ ಹಾಗೂ ಕುಟಬ,ಪಿ.ಆಂಜನೇಯ ಡೊಳ್ಳಿನ್,ಪಿ.ಮಲ್ಲಿಕಾರ್ಜುನ ಡೊಳ್ಳಿನ್ ಕುಟುಂಬ ಸೇರಿದಂತೆ ವಿಜಯಪರ,ಕಲಬುರಗಿ,ದಾವಣಗೆರೆಯಲ್ಲಿರುವ ಎಲ್ಲ ಹಿತೈಸಿಗಳ ತುಂಬು ಹೃದಯದ ಅಭಿನಂದನೆಗಳು.