ದಾವಣಗೆರೆ:ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 1 ರಲ್ಲಿ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಶ್ರೀಮತಿ ಮೀನಾಕ್ಷಿ ಜಗದೀಶ್ ಹಾಗೂ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ವಾರ್ಡ್ ನಲ್ಲಿ ಇರುವ ಆಗು, ಹೋಗುಗಳ ಬಗ್ಗೆ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ, ಹಿಂದೂ ರುದ್ರಭೂಮಿ ಗಾಂಧಿನಗರ ಇಲ್ಲಿ ಸಹ ಇದೇ ಸಂದರ್ಭದಲ್ಲಿ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಹಾಗೂ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ಆಹಾರ ಪದಾರ್ಥಗಳ ಬಗ್ಗೆ ಆಹಾರವನ್ನು ಸೇವಿಸಿ ಪರಿಶೀಲಿಸಿದರು ಹಾಗೂ ಕ್ಯಾಂಟೀನ್ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸ್ವಚ್ಛತೆಯಲ್ಲಿಟ್ಟುಕೊಳ್ಳಲು ಅಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಾ. ಚಂದ್ರಮೋಹನ್ ಆರೋಗ್ಯ ಅಧಿಕಾರಿಗಳು ಮಹಾನಗರ ಪಾಲಿಕೆ ಉಮ್ಲಾ ನಾಯಕ್ 1ನೇ ವಾರ್ಡಿನ ಆರೋಗ್ಯ ನಿರೀಕ್ಷಕರು, ತನ್ವೀರ್ ಅಹ್ಮದ್ ಆರೋಗ್ಯ ನಿರೀಕ್ಷಕರು ದಫೇದಾರ್ ಕುಮಾರ್, ಉಮೇಶ್ ಇತರರಿದ್ದರು.