ದಾವಣಗೆರೆ, ಜೂನ್ 13 – ಜೂನ್ 21ರ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಸನ ಮತ್ತು ರಾಜಯೋಗ ಶಿಬಿರವನ್ನು ಇದೇ ದಿನಾಂಕ 15 ರಿಂದ 20 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7.30 ರವರೆಗೆ ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ `ಶಿವಧ್ಯಾನ ಮಂದಿರ’ದಲ್ಲಿ ಏರ್ಪಡಿಸಲಾಗಿದೆ.
ಅಧ್ಯಾತ್ಮಿಕ ಸೇವಾ ಕೇಂದ್ರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಏರ್ಪಡಾಗಿರುವ ಈ ಶಿಬಿರವನ್ನು ಹಿರಿಯ ಯೋಗಾಸನ ಪಟುಗಳು ಮತ್ತು ರಾಜಯೋಗ ಶಿಕ್ಷಕರು ನಡೆಸಿಕೊಡಲಿದ್ದಾರೆ.
ಶಿಬಿರದಲ್ಲಿ ಪ್ರಾರ್ಥನೆ, ಯೋಗಾಸನ, ಕಪಾಲಭಾತಿ, ಪ್ರಾಣಾಯಾಮ, ಧ್ಯಾನಗಳನ್ನು ಹೇಳಿಕೊಡಲಾಗುವುದು. ಶಿಬಿರವು ಉಚಿತವಾಗಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳವಂತೆ ಎಂದು ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕೋರಿದ್ದಾರೆ.
ಬ್ರಹ್ಮಾಕುಮಾರೀಸ್ ಕೇಂದ್ರದ ದಾವಣಗೆರೆ ಶಾಖೆಯ 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಲೀಲಾಜಿ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ವಿವರಕ್ಕೆ ಮೊಬೈಲ್ ಸಂಖ್ಯೆ 63606 06774 ಅಥವಾ 98440 04598 ಅಥವಾ 96068 96052ರಲ್ಲಿ ಸಂಪರ್ಕಿಸಿ, ಹೆಸರು ನೋಂದಾಯಿಸಬಹುದು.