ದಾವಣಗೆರೆ ನಗರದ ಶತಮಾನದ ಶಾಲೆಯಾದ ಹಳೇಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (ಬಿ ಇಒ) ಶೇರ್ ಅಲಿಯವರ ಸಮ್ಮುಖದಲ್ಲಿ ದಾನಿಗಳಾದ ಮಹಾಂತೇಶ್ ಒಣರೊಟ್ಟಿ ಅವರ ಸಹಕಾರದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಬುಕ್ ಮತ್ತು ಜಾಮೀಟ್ರಿ ಬಾಕ್ಸಗಳನ್ನು ವಿತರಿಸಲಾಯಿತು. ನೋಟ್ ಬುಕ್ಕ ಮತ್ತು ಜಾಮಿಟ್ರಿ ಬಾಕ್ಸ್ ವಿತರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಶೇರ್ ಅಲಿ ಅವರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸ ಬೇಕು ಮತ್ತು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸದೃಡರಾಗಿ ನೀವೂ ಕೂಡ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬೆಳೆಯಬೇಕು ಎಂದು ಕರೆ ನೀಡಿದರು.
ನೋಟ್ ಬುಕ್ ಮತ್ತು ಜಾಮಿಟ್ರಿ ಬಾಕ್ಸ್ ದಾನಿಗಳಾದ ಮಹಾಂತೇಶ ಒಣರೊಟ್ಟಿ ಮಾತನಾಡಿ ನಾನು ವಿದ್ಯಾರ್ಥಿ ಜೀವನದಲ್ಲಿ ಕಡು ಬಡತನ, ಹಸಿವಿನ ಸಂಕಷ್ಟಗಳನ್ನು ಎದುರಿಸಿ ವಿದ್ಯಾಬ್ಯಾಸ ಮಾಡಿದ್ದೇನೆ, ಆ ಸಂಕಷ್ಟಗಳನ್ನು ಎದುರಿಸಿ ಆರ್ಥಿಕವಾಗಿ ಸದೃಡನಾಗಿದ್ದು ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ನಿರಂತರವಾಗಿ ನನ್ನ ಕೈಲಾದಷ್ಟು ಸಹಾಯ ಮಾಡುವ ಮೂಲಕ ಇದರಲ್ಲಿ ಸಂತೃಪ್ತಿ ನೋಡಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉತ್ತರ ವಲಯದ ಸಿಇಒ ಶಿವಲೀಲಾ, ದಾವಣಗೆರೆ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್.ಡಿ.ಎಂ.ಸಿ) ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್, ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಡ್ಕೊಂಡ್ರ, ಶಿವಕುಮಾರ್ ತಣಿಗೇರಿ, ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷ ಕೋಡುಬಾಳ ಚನ್ನಬಸಪ್ಪ ಮಾತನಾಡಿದರು, ಆರಂಭದಲ್ಲಿ ಶಿಕ್ಷಕಿ ಸುಜಾತಾ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಶಿಕ್ಷಕಿ ಅನಸೂಯಮ್ಮ ಆರ್,ಸಿ, ನಿರೂಪಣೆ ಮಾಡಿದರು, ಶಿಕ್ಷಕಿ ಸಂಪತ್ತು ಕುಮಾರಿ ವಂದನಾರ್ಪಣೆ ಮಾಡಿದರು, ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಜಯಶ್ರೀ, ಶಿಲ್ಪಾ, ರೂಪಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ರಮೇಶ್ ಸಿ ದಾಸರ್, ಜಿಲ್ಲಾ ಪತ್ರಿಕಾ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್.ಡಿ.ಎಂ.ಸಿ)ಒಕ್ಕೂಟ, ದಾವಣಗೆರೆ ಜಿಲ್ಲೆ, ದಾವಣಗೆರೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.