ಇನ್ನೇನು ಮುಂಗಾರು ಪ್ರಾರಂಭವಾಯಿತು ನಮ್ಮ ಹಳ್ಳಿ ಸೊಗಡಿನ ಆರೋಗ್ಯಯುತವಾದ ಪಲ್ಯ ಕರ್ಚಿಕಾಯಿ.. ಈ ಕಾರ್ಚಿಕಾಯಿ ಸುಗ್ಗಿ ಕೂಡ ಶುರುವಾಯಿತು.. ಚಿತ್ರದಲ್ಲಿ ಕಾಣುತ್ತಿರುವ ಕಾಳುಗಳಿಗೆ ನಮ್ಮ ಕಡೆ ಕಾರಚಿಕಾಯಿ ಅಂತ ಕರೆಯುತ್ತಾರೆ..ಆರೋಗ್ಯಕ್ಕೆ ಅತಿ ಉತ್ತಮವಾದಂತಹ ಕಬ್ಬಿಣಾಂಶ ಹಾಗೂ ಹಲವಾರು ಖನಿಜಾಂಶ ಹೊಂದಿರತಕ್ಕಂತಹ ಬಳ್ಳಿ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದು ಲಭ್ಯವಾಗಿದೆ ಹೆಚ್ಚಾಗಿ ವಿಜಯಪುರ ಕಲಬುರಗಿ ಸೋಲಾಪುರ್ ಭಾಗದಲ್ಲಿ ಅತಿ ಹೆಚ್ಚಾಗಿ ಕಂಡುಬರುವಂತಹ, ಹೆಚ್ಚಾಗಿ ಏರಿ ಜಮೀನುಗಳಲ್ಲಿ ಕಂಡುಬರುತ್ತದೆ.. ಮುಂಗಾರು ಪ್ರಾರಂಭವಾದ ತಕ್ಷಣ ಯಾವುದೇ ಬೀಜೋಪಚಾರವಿಲ್ಲದೆ ಏಳುವಂತಹ ಬಳ್ಳಿ ಇದು..ಆದರೆ ಇತ್ತೀಚಿನ ದಿನಮಾನಗಳಲ್ಲಿ ರೌಂಡಪ್ ಹಾಗೂ ಕೆಲ ವಿಷಯುಕ್ತ ರಸಗೊಬ್ಬರಗಳ ಸಿಂಪಡನೆಯಿಂದ ಹಲವಾರು ಆರೋಗ್ಯಯತ ಬಳ್ಳಿಗಳು ಪ್ರಕೃತಿಯಿಂದ ನಾಶವಾಗುತ್ತಿವೆ. ಭಗವಂತ ನಮಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾನೆ ಪ್ರಕೃತಿಯಲ್ಲಿ ಆದರೆ ಅದನ್ನು ನಾವು ಸದುಪಯೋಗ ಮಾಡಿಕೊಳ್ಳದೇ, ದುರುಪಯೋಗಪಡಿಸಿಕೊಳ್ಳತ್ತಿದ್ದೇವೆ, ಏನೋ ಮನುಷ್ಯರು ಅನಿಸಿತು!.. ಸಾಯಂಕಾಲದ ಹೊತ್ತಿಗೆ ಮುಗ್ದ ಮನಸಿನ ಜನ, ರೈತರು ಇದನ್ನು ಮಾರಲು ಬರುತ್ತಾರೆ.ಖರೀದಿಸಿ ಅವರಿಗೂ ಕೂಡ ವ್ಯಾಪಾರ ಆಗಲಿ.. , ಎಲ್ಲರನ್ನೂ ಉಳಿಸಿ-ಬೆಳೆಸಿ..(ಕಿರಣ ಗೌಡ ಮೌರ್ಯ)