ದಾವಣಗೆರೆ- ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು 77ನೇ ಕನ್ನಡರಾಜ್ಯೋತ್ಸವ ನಿಮಿತ್ತ ಕರ್ನಾಟಕ ಮುಕುಟುಮಣಿ ರಾಜ್ಯಪ್ರಶಸ್ತಿ ಘೋಷಿಸಿದ್ದು, ಡಿಸೆಂಬರ್ 01 ರಂದು ನಗರದಲ್ಲಿ ನಡೆಯುವಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ನಗರದ ನಮ್ಮ ಜೈ ಕರುನಾಡ ವೇದಿಕೆ ಸಂಸ್ಥಾಪಕರು ಟಿ ಮಂಜುನಾಥ್ ಗೌಡ ಇವರನ್ನು ಕನ್ನಡ ನಾಡು-ನುಡಿ, ನೆಲ-ಜಲ ಹಾಗೂ ಭಾಷೆಗಾಗಿ ಕನ್ನಡ ಪರ ಹೋರಾಟ ಮಾಡುತ್ತಾ ಬಂದಿರುತ್ತಾರೆ.
ಹಾಗೂ ಹಲವು ಪ್ರಶಸ್ತಿಗಳಾದ
ಮಹಾನಗರ ಪಾಲಿಕೆಯ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ಮೀಡಿಯಾ ಟಿವಿ ಕನ್ನಡದ ಹೆಮ್ಮೆಯ ಸೈನಿಕ ಪ್ರಶಸ್ತಿ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಧಾರವಾಡ ಇವರಿಂದ ಕರ್ನಾಟಕ ಕನ್ನಡ ಮಾಣಿಕ್ಯ ಪ್ರಶಸ್ತಿ ಹಾಗೂ ಇತರೆ ಸಂಘ, ನೀಡಿ, ಗೌರವಿಸಿರುವುದನ್ನು ಗುರುತಿಸಿದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಮತ್ತೊಂದು ಪ್ರಶಸ್ತಿಯಾದ ರಾಜ್ಯಮುಕುಟ ಮಣಿ ಪ್ರಶಸ್ತಿಯನ್ನು ಇವರ ಮುಡಿಗೆರಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಲು ವೇದಿಕೆಯ ರಾಜ್ಯ ಗೌರವ ಅಧ್ಯಕ್ಷರು ಪಿ ಆಲ್ವೇಟ್ ಆಂಟೋನಿ ಇವರು ಬಯಸುತ್ತಾರೆ