ದಾವಣಗೆರೆ:ನೇರ ನಡೆ,ನುಡಿಯ ಇಂದಿನ ಸುದ್ದಿ ಕನ್ನಡ ದಿನಪತ್ರಿಕೆಯ ಸಂಪಾದಕರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾಘಟಕದ ಮಾಜಿ ಅಧ್ಯಕ್ಷರು ಆತ್ಮೀಯರೂ ಪತ್ರಕರ್ತರೂ ಆದ ಶ್ರೀ ವೀರಪ್ಪ.ಎಂ.ಭಾವಿಯವರು ದಿನಾಂಕ:03-10-2024ರಂದು ಭಾನುವಾರ ಬೆಳಗಿನಜಾವ2-50ಕ್ಕೆ ದೇವರಾಜ ಅರಸು ಬಡಾವಣೆಯ ಅವರ ಸ್ವಗೃಹದಲ್ಲಿ ನಿಧನರಾಗಿರುವ ಸುದ್ದಿಯು ಅಘಾತವನ್ನುಂಟು ಮಾಡಿತು.ಮೃತರು ಪತ್ನಿ,ಇಬ್ಬರು ಪುತ್ರರು,ಒಬ್ಬ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ ಅವರ ಅಂತೆಕ್ರಿಯೆಯು ದಾವಣಗೆರೆಯ ವೀರಶೈವ ರುದ್ರಭೂಮಿಯಲ್ಲಿ ಸಂಜೆ ನಾಲ್ಕು ಗಂಟೆಗೆ ನೆರವೇರಲಿದೆಯೆಂದು ಅವರ ಕುಟುಂಬವರ್ಗ ತಿಳಿಸಿದೆ.ಮೃತ ವೀರಪ್ಪ ಎಂ.ಭಾವಿಯವರಿಗೆ 63,ವರ್ಷ ವಯಸ್ಸಾಗಿತ್ತು. ಅವರು ಅನಾರೋಗ್ಯದಿಂದ ನಿಧನರಾಗಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಮೃತರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತ ಸಹಾಯವಾಣಿ ಕನ್ನಡ ದಿನಪತ್ರಿಕೆ ಬೆಂಗಳೂರು ಹಾಗೂ ಪವಿತ್ರಪ್ರಜಾ ದಿನಪತ್ರಿಕೆ ದಾವಣಗೆರೆ ಯ ಬಳಗ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲೆ ಘಟಕದ ಪದಾಧಿಕಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರಾದ ಶಿವಾನಂದ ತಗಡೂರು,ಪ್ರಧಾನಕಾರ್ಯದರ್ಶಿಯವರಾದ ಶ್ರೀ ಜಿಸಿ.ಲೋಕೇಶ್,ರಾಜ್ಯಕಾರ್ಯಕಾರಿಸಮಿತಿಸದಸ್ಯರಾದ ಶ್ರೀ ದೇವರಾಜ್. ಕೆಆರ್. ರವರು ಮತ್ತು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿವಿ.ಮಲ್ಲಿಕಾರ್ಜುನಯ್ಯ ನವರು ಮತ್ತು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಶ್ರೀ ಎಸ್.ಕೆ.ಒಡೆಯರ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಇ.ಎಂ.ಮಂಜುನಾಥ್,ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್,ಕೋಶಾಧ್ಯಕ್ಷರಾದ ಶ್ರೀ ಎನ್ ವಿ.ಬದ್ರೀನಾಥ್,ರಾಜ್ಯ ಕಾರ್ಯಕಾರಿ ಸಮಿತಿಸದಸ್ಯರಾದ ಕೆ.ಚಂದ್ರಣ್ಣ,ಉಪಾಧ್ಯಕ್ಷರುಗಳಾದ ಆರ್.ಎಸ್.ತಿಪ್ಪೇಸ್ವಾಮಿ,ಪ್ರಕಾಶ್,ಕಾರ್ಯದರ್ಶಿ ಚನ್ನವೀರಯ್ಯ,ಜೆಎಸ್.ವೀರೇಶ್,ಸದಸ್ಯರಾದ ಕೃಷ್ಣೋಜಿರಾವ್,ನಿಂಗೋಜಿರಾವ್,ವೇದಮೂರ್ತಿ,ರವಿ,ನಂದಕುಮಾರ್,ಸೇರಿದಂತೆ ಎಲ್ಲಾ ಸದಸ್ಯರು ಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.